ುದ್ದಿಮೂಲ ವಾರ್ತೆ ಸಿಂಧನೂರು, ನ.18:
ರಾಜ್ಯದಲ್ಲಿಯೇ ಮಾದರಿಯಾಗುವಂತೆ ತಾಲೂಕಾ ಸಿದ್ದಪರ್ವತ ಅಂಬಾಮಠದ ಅಂಬಾದೇವಿಯ ಜಾತ್ರಾಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲಾಾ ಇಲಾಖೆಗಳಿಗೆ ವಹಿಸಿರುವ ಕೆಲಸ-ಕಾರ್ಯಗಳನ್ನು ನಿಗದಿತ ಕಾಲಾವಧಿಯಲ್ಲಿಯೇ ಪೂರ್ಣಗೊಳಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ತಹಶೀಲ್ ಕಾರ್ಯಾಲಯದಲ್ಲಿ ಅಂಬಾದೇವಿ ಜಾತ್ರಾಾ ಮಹೋತ್ಸವ ಹಿನ್ನಲೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಅಂಬಾಮಠ ದೇಶದಲ್ಲಿಯೇ ಎರಡನೇ ಶಕ್ತಿಿಪೀಠವಾಗಿದ್ದು, ಜನೆವರಿ 3 ರಂದು ಅಂಬಾದೇವಿ ಜಾತ್ರಾಾ ಮಹೋತ್ಸವ ನಡೆಯಲಿದೆ. ಈ ವರ್ಷ ಜಾತ್ರಾಾ ಮಹೋತ್ಸವಕ್ಕೆೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ವಿವಿಧ ಭಾಗಗಳಿಂದ ಸುಮಾರು 5-6 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಜಾತ್ರಾಾ ಮಹೋತ್ಸವದಲ್ಲಿ ಭಕ್ತರಿಗೆ ಅನುಕೂಲವಾಗುವ ಎಲ್ಲಾಾ ಸೌಲಭ್ಯಗಳು ಕಲ್ಪಿಿಸಬೇಕು ಎಂದರು.
ದೇವಸ್ಥಾಾನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜಾತ್ರಾಾ ಮಹೋತ್ಸವಕ್ಕಾಾಗಿ ರಥ ಬೀದಿ ನಿರ್ಮಾಣ, 600 ವ್ಯಾಾಪಾರಿ ಮಳಿಗೆಗಳ ನಿರ್ಮಾಣ, ಸ್ವಚ್ಛತೆಗೆ 100 ಶೌಚಾಲಯ, 100 ಮೂತ್ರ ವಿಸರ್ಜನಾಲಯಗಳ ನಿರ್ಮಾಣ, 100 ಎಕರೆ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆೆ, ದೀಪಾಲಂಕಾರ, ಐದು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸಾರಿಗೆ ವ್ಯವಸ್ಥೆೆ, ಕುಡಿಯುವ ನೀರಿನ ವ್ಯವಸ್ಥೆೆ, ಭಕ್ತರಿಗೆ ವಸತಿ ವ್ಯವಸ್ಥೆೆ, ಶೌಚಾಲಯ, ರಥ ಬೀದಿ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳ ಕಲ್ಪಿಿಸಬೇಕಿದೆ. ಯಾವ ಇಲಾಖೆಗೆ ಯಾವ ಜವಾಬ್ದಾಾರಿ, ಕಾಮಗಾರಿ ವಹಿಸಿದೆ. ಅದನ್ನು ಡಿಸೆಂಬರ್ 20 ರೊಳಗೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿಿನ ಸೂಚನೆ ನೀಡಿದರು.
ನಂತರ ಅಧಿಕಾರಿಗಳೊಂದಿಗೆ ಅಂಬಾಮಠಕ್ಕೆೆ ತೆರಳಿ ಪೂರ್ವಸಿದ್ದತೆಗಳ ಬಗ್ಗೆೆ ಮಾಹಿತಿ ಪಡೆದು, ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ತಹಶೀಲ್ದಾಾರ ಅರುಣ ಹೆಚ್.ದೇಸಾಯಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಅಂಬಾದೇವಿ ಜಾತ್ರಾಾ ಮಹೋತ್ಸವ: ಅಧಿಕಾರಿಗಳೊಂದಿಗೆ ಶಾಸಕರ ಸಭೆ ಅದ್ದೂರಿ ಅಂಬಾದೇವಿ ಜಾತ್ರಾಾ ಮಹೋತ್ಸವಕ್ಕೆೆ ನಿರ್ಧಾರ- ಬಾದರ್ಲಿ

