ಸುದ್ದಿಮೂಲ ವಾರ್ತೆ ಗಂಗಾವತಿ, ನ.19:
ವಿವಾದಾತ್ಮಕ ಸ್ಥಳವಾದ ತಾಲೂಕಿನ ಇತಿಹಾಸ ಪ್ರಸಿದ್ಧ ಆನೆಗುಂದಿ ಹತ್ತಿಿರದ ತುಂಗಭದ್ರಾಾ ನದಿ ಮಧ್ಯೆೆ ಇರುವ ನವವೃಂದಾವನ ಗಡ್ಡಿಿಯಲ್ಲಿ ಶ್ರೀಪದ್ಮನಾಭತೀರ್ಥರ ಮಧ್ಯಾಾರಾಧನೆ ಸಮಯದಲ್ಲಿ ಬುಧವಾರ ಮಂತ್ರಾಾಲಯ ಮತ್ತು ಉತ್ತರಾದಿ ಉಭಯ ಮಠಗಳ ಶ್ರೀಗಳು ಸಂಗಮವಾಗಿ ಬಳಿಕ ಜಂಟಿಯಾಗಿ ಸೌಹಾರ್ದತೆಯಿಂದ ಶ್ರದ್ಧಾಾ-ಭಕ್ತಿಿಯಿಂದ ಶ್ರೀಪದ್ಮನಾಭತೀರ್ಥರ ಬೃಂದಾವನಕ್ಕೆೆ ಮಹಾ ಮಂಗಳಾರತಿ ಮಾಡಿದರು.
ನವವೃಂದಾವನಗಡ್ಡಿಿಯಲ್ಲಿನ ಪೂಜೆ ಹಕ್ಕು ಮತ್ತು ಮಾಲೀಕತ್ವದ ಬಗ್ಗೆೆ ಮಂತ್ರಾಾಲಯದ ಶ್ರೀರಾಘವೇಂದ್ರಸ್ವಾಾಮಿಗಳ ಮಠ ಮತ್ತು ಉತ್ತರಾದಿ ಮಠದ ನಡುವೆ ವ್ಯಾಾಜ್ಯವಿದ್ದು, ಕೋರ್ಟ್ನಲ್ಲಿ ಕಳೆದ 50 ವರ್ಷಗಳಿಂದಲೂ ವಿವಾದವಿದೆ. ಉಭಯ ಮಠದ ವ್ಯಾಾಜ್ಯ ಇತ್ಯರ್ಥಕ್ಕೆೆ ನವವೃಂದಾವನಗಡ್ಡಿಿಯಲ್ಲಿ ಉಭಯಶ್ರೀಗಳು ಮೊದಲ ಬಾರಿಗೆ ಬುಧವಾರ ಸಮಾಗಮಗೊಂಡು ಶೀಘ್ರವೇ ಭಕ್ತರಿಗೆ ಶುಭ ಸಂದೇಶ ನೀಡುವ ನಿರ್ಧಾರ ತೆಗೆದುಕೊಂಡಿದ್ದಾಾರೆ. ಗಡ್ಡಿಿಯಲ್ಲಿನ ಯತಿವರ್ಯರ ಆರಾಧನೆ ಸಂದರ್ಭದಲ್ಲಿ ಪೂಜೆ ಹಕ್ಕು ಕುರಿತು ಪ್ರತಿ ಬಾರಿಯೂ ಉಭಯ ಮಠಗಳು ಕೋರ್ಟ್ ಮೊರೆ ಹೋಗುತ್ತಿಿದ್ದು, ಮೂರು ದಿನದ ಆರಾಧನೆ ಮಹೋತ್ಸವದಲ್ಲಿ ಉಭಯ ಮಠಕ್ಕೂ ತಲಾ ಒಂದುವರೆ ದಿನದಂತೆ ಪೂಜೆ ಹಕ್ಕಿಿನ ತೀರ್ಪನ್ನು ಕೋರ್ಟ್ ನೀಡುತ್ತಾಾ ಬಂದಿದೆ. ಶ್ರೀಪದ್ಮನಾಭ ತೀರ್ಥರ ಆರಾಧನೆ ಸಂದರ್ಭದಲ್ಲಿ ಇದೇ ತೀರ್ಪು ಬಂದಿದ್ದು, ಸೌಹಾರ್ದಯುತ ಸಂಧಾನದ ಬಗ್ಗೆೆ ಉಭಯ ಮಠಗಳ ಇತ್ಯರ್ಥಕ್ಕೆೆ ಬರುವಂತೆ ಸೂಚನೆ ನೀಡಿರುವ ಹಿನ್ನೆೆಲೆ ಶ್ರೀಪದ್ಮನಾಥ ತೀರ್ಥರ ಮಧ್ಯಾಾರಾಧನೆ ಸಂದರ್ಭದಲ್ಲಿ ಮಂತ್ರಾಾಲಯ ಮಠದ ಶ್ರೀಸುಬುಧೇಂದ್ರ ತೀರ್ಥರು ಮತ್ತು ಉತ್ತರಾದಿ ಮಠದ ಶ್ರೀಸತ್ಯಾಾತ್ಮ ತೀರ್ಥರು ಸಮಾಗಮಗೊಂಡರಲ್ಲದೆ, ಯತಿವರ್ಯರ ವೃಂದಾವನಕ್ಕೆೆ ಜಂಟಿಯಾಗಿ ಮಹಾಮಂಗಳಾರತಿ ನೆರವೇರಿಸಿದರು.
ಉಭಯ ಶ್ರೀಗಳು ಕೆಲ ನಿಮಿಷ ಕುಶಲೋಪರಿ ವಿಚಾರಿಸಿದರಲ್ಲದೇ, ಮುಂದೆ ಕೈಗೊಳ್ಳಬೇಕಾಗಿರುವ ಸೌಹಾರ್ದತೆಯ ಸಂಧಾನದ ಬಗ್ಗೆೆ ಪ್ರಸ್ತಾಾಪಿಸಿದರೂ, ಯಾವುದೇ ಅಂತಿಮ ನಿರ್ಧಾರಕ್ಕೆೆ ಬಂದಿಲ್ಲ. ಶೀಘ್ರವೇ ಇನ್ನೊೊಂದು ಸಭೆ ಆಯೋಜಿಸಿ ರಾಜೀ ಸಂಧಾನ ಒಡಂಬಡಿಕೆ ಸಿದ್ಧಪಡಿಸಿ, ಇತ್ಯರ್ಥದ ಅಂತಿಮ ನಿರ್ಧಾರಕ್ಕೆೆ ಬರುವ ಬಗ್ಗೆೆ ಮಾಹಿತಿ ನೀಡಿದರು.
ಸೌಹಾದರ್ತೆಯಿಂದ ವ್ಯಾಾಜ್ಯ ಇತ್ಯರ್ಥಕ್ಕೆೆ
ಸಮಯ ಕೂಡಿ ಬಂದಿದೆ-ಮಂತ್ರಾಾಲಯಶ್ರೀ
ನವವೃಂದಾವನ ಗಡ್ಡಿಿಯಲ್ಲಿರುವ ಯತಿವರ್ಯರ ಆರಾಧನೆಗೆ ಸಂಬಂಧಿಸಿದಂತೆ ಐದಾರು ದಶಕಗಳವರೆಗೆ ಮಂತ್ರಾಾಲಯ ಮತ್ತು ಉತ್ತರಾದಿ ಮಠಗಳ ನಡುವೆ ಕೋರ್ಟಿನಲ್ಲಿ ನಡೆದ ವ್ಯಾಾಜ್ಯವು ಸೌಹಾರ್ದತೆಯ ವಿಚಾರ ವಿನಿಮಯ, ಒಡಂಬಡಿಕೆಗಳ ಮೂಲಕ ಇತ್ಯಥರ್ವಾಗುವ ಸಮಯ ಕೂಡಿ ಬಂದಿದೆ ಎಂದು ಮಂತ್ರಾಾಲಯ ಮಠದ ಶ್ರೀಸುಬುಧೇಂದ್ರ ತೀರ್ಥರು ಹೇಳಿದ್ದಾಾರೆ.
ಶ್ರೀಸತ್ಯ ಪ್ರಮೋದ ತೀರ್ಥರು ಸೇರಿದಂತೆ ನಂತರ ಮಂತ್ರಾಾಲಯದ ಮಠಾಧೀಶರ ಕಾಲದಿಂದಲೂ ಸಂಬಂಧ, ಮಾತುಕತೆ ಭೇಟಿ ನಡೆದುಕೊಂಡು ಬಂದಿದೆ. ಉಭಯ ಮಠಗಳ ವಿಚಾರದಲ್ಲಿ ವ್ಯಕ್ತಿಿಗತ ವಿವಾದವಿಲ್ಲ, ಲೌಕಿಕ ವಿಚಾರದಲ್ಲಿ ಭಿನ್ನಾಾಭಿಪ್ರಾಾಯವಿದ್ದರೂ ಪರಸ್ಪರ ಮಾತುಕತೆ, ಸೌಹಾದರ್ ವಿನಿಮಯಕ್ಕೆೆ ಅಡ್ಡಿಿಯಾಗಿಲ್ಲ. ಶಾಂತಿ ಸೌಹಾದರ್ದ ಸಂದೇಶವನ್ನು ಶೀಘ್ರವೇ ನೀಡಲಾಗುವುದು. ಸೌಹಾರ್ದತೆ ಪರಿಪೂರ್ಣತೆಯಾಗಬೇಕಿದ್ದು, ಶ್ರೀಗಳು ಮತ್ತು ಮಠದ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಮಠದ ಭಕ್ತರು, ಶಿಷ್ಯರು, ಅಭಿಮಾನಿಗಳು ಶಾಂತಿ, ಸೌಹಾರ್ದತೆಯಿಂದಿರಬೇಕಿದೆ. ಉಭಯ ಮಠದ ಗೌರವಕ್ಕೆೆ ಚ್ಯುತಿ ಬರದಂತೆ ಒಳ್ಳೆೆಯ ರೀತಿಯ ಪರಿಷ್ಕಾಾರ ಕಂಡುಕೊಳ್ಳಲಾಗುವುದು. ಮಠದ ಭಕ್ತರು ಸಾಮಾಜಿಕ ಮಾಧ್ಯ, ಜಾಲತಾಣ ಮೂಲಕವಾಗದೆ, ವ್ಯಕ್ತಿಿಗತ ಪರಸ್ಪರ ಭಿನ್ನಾಾಭಿಪ್ರಾಾಯಗಳನ್ನು ಹಂಚಿಕೊಂಡರೆ ಸೌಹಾರ್ದತೆಗೆ ಧಕ್ಕೆೆ ಬರಲಿದೆ. ಸೌಹಾರ್ದಯುತ ಸಂಧಾನಕ್ಕೆೆ ಶ್ರೀಮಠ ಬದ್ಧವಾಗಿದ್ದು, ಈಗಾಗಲೇ ಮೂರು ಬಾರಿ ಮಾತುಕತೆ ನಡೆಸಿದ್ದೇವೆ. ಸನಾತನ ಹಿಂದುಧರ್ಮದ ಉಳಿವಿಗೆ ಮಠಗಳು ಒಂದಾಗಬೇಕಿದೆ ಎಂದರು.
ಉಭಯ ಮಠಗಳು ಪ್ರೀೀತಿ, ಅಭಿಮಾನಗಳಿಂದ ವಾಜ್ಯ ಇತ್ಯರ್ಥ ಪಡಿಸುತ್ತೇವೆ-ಉತ್ತರಾದಿ ಮಠದಶ್ರೀ
ಮಂತ್ರಾಾಲಯ ಮತ್ತು ಉತ್ತರಾದಿ ಮಠಗಳ ಶ್ರೀಗಳು ಒಂದಾಗಿ ಒಗ್ಗಟ್ಟಿಿನಿಂದ ಮತ್ತು ಪ್ರೀೀತಿ, ಅಭಿಮಾನಗಳಿಂದ ನವೃಂದಾವನ ಗಡ್ಡಿಿಯಲ್ಲಿನ ವ್ಯಾಾಜ್ಯ ಇತ್ಯರ್ಥಪಡಿಸುತ್ತೇವೆ ಎಂದು ಉತ್ತರಾದಿ ಮಠದ ಶ್ರೀಸತ್ಯಾಾತ್ಮತೀರ್ಥರು ತಿಳಿಸಿದ್ದಾಾರೆ.
ಶ್ರೀಪದ್ಮನಾಭ ತೀರ್ಥರ ಸಾನ್ನಿಿಧ್ಯದಲ್ಲಿ ಉಭಯ ಮಠಗಳ ಶ್ರೀಗಳು ಸೌಹಾದರ್ತೆಯಿಂದ ಸಮಾಗಮಗೊಂಡಿದ್ದು, ಎಲ್ಲರೂ ಒಂದಾಗಿ ಶ್ರೀಮಧ್ವಾಾಚಾರ್ಯರ ಸಿದ್ಧಾಾಂತದ ಪ್ರಸಾರದಲ್ಲಿ ತೊಡಗಿಸಿಕೊಳ್ಳಬೇಕಿದೆ. ವ್ಯಾಾಜ್ಯಗಳನ್ನು ಸೌಹಾದರ್ಯುತ ವಿಚಾರ ವಿನಿಮಯ, ಪ್ರೀೀತಿ, ಅಭಿಮಾನಿಗಳ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಎಲ್ಲ ಯತಿವರ್ಯರು ಅನುಗ್ರಹ ಮಾಡಲಿ ಎಂಬುದಾಗಿ ಪ್ರಾಾರ್ಥನೆ ಮಾಡಲಾಗುವುದು. ಸಂಧಾನಕ್ಕೆೆ ಅವಕಾಶ ನೀಡಿದ ಮಂತ್ರಾಾಲಯ ಮಠದ ಶ್ರೀಸುಬುಧೇಂದ್ರ ತೀರ್ಥರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಶ್ರೀ ಪದ್ಮನಾಭ ತೀರ್ಥರ ಮಧ್ಯಾಾರಾಧನೆ ; ಉಭಯ ಮಠಗಳ ಶ್ರೀಗಳು ಭಾಗಿ ಆನೆಗುಂದಿ ; ಮಹಾಸಮಾಗಮ ಮಹಾ ಮಂಗಳರಾತಿ

