ಸುದ್ದಿಮೂಲ ವಾರ್ತೆ ಸಿಂಧನೂರು, ನ.19:
ಮಸ್ಕಿಿ ನಗರ ಯೋಜನಾ ಪ್ರಾಾಧಿಕಾರದ ಅಧ್ಯಕ್ಷರಾಗಿ ಮಸ್ಕಿಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ಸಹೋದರ ಆರ್.ಸಿದ್ದನಗೌಡ ತುರ್ವಿಹಾಳ ನೇಮಕಗೊಂಡಿದ್ದಾಾರೆ.
ಕರ್ನಾಟಕ ನಗರ ಮತ್ತು ಗ್ರಾಾಮಾಂತರ ಯೋಜನಾ ಕಾಯ್ದೆೆ 1961 ರಕಲಂ 4 ಸಿ(3)(ಐ)ರನ್ವಯ ಮಸ್ಕಿಿ ನಗರ ಯೋಜನಾ ಪ್ರಾಾಧಿಕಾರದ ಅಧ್ಯಕ್ಷರನ್ನಾಾಗಿ ಆರ್.ಸಿದ್ದನಗೌಡ ಅವರನ್ನು ನೇಮಕ ಮಾಡಿ ಸರಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಆದೇಶಿಸಿದ್ದಾಾರೆ. ಬೆಂಗಳೂರಿನಲ್ಲಿ ನೇಮಕಾತಿ ಆದೇಶವನ್ನು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ ಅವರು ನೂತನ ಅಧ್ಯಕ್ಷ ಆರ್.ಸಿದ್ದನಗೌಡರಿಗೆ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಲ್ಲಾಾ ವೆಂಕಟೇಶ್ವರರಾವ್ ಸೇರಿದಂತೆ ಇತರರು ಇದ್ದರು.
ಮಸ್ಕಿಿ ನಗರ ಯೋಜನಾ ಪ್ರಾಾಧಿಕಾರ ಅಧ್ಯಕ್ಷರಾಗಿ ಆರ್.ಸಿದ್ದನಗೌಡ ತುರ್ವಿಹಾಳ ನೇಮಕ

