ಸುದ್ದಿಮೂಲ ವಾರ್ತೆ ಬೆಂಗಳೂರು, ನ.19:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಒಪ್ಪಂದದಂತೆ ಕೂಡಲೇ ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಾಂತರ ಮಾಡಲೇ ಬೇಕು. ಕುರುಬರು ಮಾತಿಗೆ ತಪ್ಪದವರು ಎಂಬುದನ್ನು ನಿರೂಪಿಸಬೇಕು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆೆಸ್ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಎಲ್ಲರ ಪರಿಶ್ರಮವಿದೆ. ಒಂದು ಜಾತಿ, ಒಂದು ಜನಾಂಗ ಇದಕ್ಕೆೆ ಕಾರಣವಲ್ಲ. ಕಾಂಗ್ರೆೆಸ್ ಸಾಧನೆಗೆ ಡಿ.ಕೆ. ಶಿವಕುಮಾರ್ ಕೊಡುಗೆಯೂ ಇದೆ. ಡಿಕೆಶಿ ಕಟ್ಟಾಾ ಕಾಂಗ್ರೆೆಸ್ಸಿಿಗ. ಅವರಿಗೆ ನೀವು ಮಾತುಕೊಟ್ಟಂತೆ ಅಧಿಕಾರ ಹಸ್ತಾಾಂತರ ಮಾಡಬೇಕು ಎಂದರು.
ಸರ್ಕಾರ ರಚಿಸುವಾಗ ತಲಾ 30 ತಿಂಗಳು ಕಾಲ ಅಧಿಕಾರ ಹಂಚಿಕೆಗೆ ಒಡಂಬಡಿಕೆಯಾಗಿದೆ. ನೀವು ಡಿ.ಕೆ. ಶಿವಕುಮಾರ್ ತಲೆ ಮೇಲೆ ಕೈ ಇಟ್ಟು ಆಣೆ ಮಾಡಿಲ್ಲವೆ. ಮೊದಲ ಅವಧಿಯಲ್ಲಿ ತಾವು, ಎರಡನೇ ಅವಧಿ ಡಿ.ಕೆ. ಶಿವಕುಮಾರ್ ಎಂದು ಒಪ್ಪಂದವಾಗಿಲ್ಲವೆ ಎಂದು ಎಚ್.ವಿಶ್ವನಾಥ್ ಪ್ರಶ್ನಿಿಸಿದರು.
ಸಿದ್ದರಾಮಯ್ಯ ತಮ್ಮ ಮನಸ್ಥಿಿತಿಯನ್ನು ಬದಲಿಸಿಕೊಳ್ಳಬೇಕು. ಅವರ ವರ್ತನೆಯಲ್ಲಿ ಬದಲಾವಣೆಯಾಗಬೇಕು. ಸಿದ್ದರಾಮಯ್ಯ ಅವರು ಕಾಂಗ್ರೆೆಸ್ ಪಕ್ಷವನ್ನು ಅವನತಿಗೆ ತರುತ್ತಿಿದ್ದಾರೆ. ಡಿ.ಕೆ.ಶಿವಕುರ್ಮಾ ಬಂದರೆ ನಾಲ್ಕು ಜನ ಕಾರ್ಯಕರ್ತರು ಸೇರುತ್ತಾಾರೆ. ಸಿದ್ದರಾಮಯ್ಯ ಬಂದರೆ ಯಾರೂ ಬರುವುದಿಲ್ಲ. ಇವರು ಡೋಂಗಿ ಸಮಾಜವಾದಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ದೇವೇಗೌಡರ ಪೋಟೋ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡಬೇಕು. ಇವರನ್ನು ಉಪ ಮುಖ್ಯಮಂತ್ರಿಿ, ಹಣಕಾಸು ಮಂತ್ರಿಿ ಮಾಡಿದ್ದು ದೇವೇಗೌಡರು. ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಸಿದ್ದರಾಮಯ್ಯ ಅವರಿಗೆ ಕಾಂತರಾಜ್ ಆಯೋಗದ ವರದಿಯನ್ನು ಸರಿಯಾದ ಜಾರಿ ತರಲು ಸಾಧ್ಯವಾಗಿಲ್ಲ. ದುಡಿಯುವ ಕೈಗೆ ಸರಿಯಾದ ಉದ್ಯೋೋಗ ಕೊಡಲಿಲ್ಲ. ಇವರು ಯುವ ಜನರಿಗೆ ಸರಿಯಾದ ಯೋಜನೆಗಳನ್ನು ಜಾರಿ ತಂದಿಲ್ಲ ಎಂದರು.
ಬಾಕ್ಸ್
ನೀಲಿ ವೆಂಕಟಸ್ವಾಾಮಿ ತ್ಯಾಾಗವನ್ನು ಸ್ಮರಿಸದ ಸಿದ್ದರಾಮಯ್ಯ
ಗಾಂಧೀನಗರದಲ್ಲಿ ನಡೆದ ಕುರುಬರ ಸಂಘ ಕಟ್ಟಡ ಪುನರ್ ನಿರ್ಮಾಣದ ಶಂಕುಸ್ಥಾಾಪನೆ ಕಾರ್ಯಕ್ರಮದಲ್ಲಿ, ನನ್ನ ರಾಜಕೀಯ ಪ್ರವೇಶವಿಲ್ಲದಿದ್ದರೆ ಕುರುಬರ ಸಂಘ, ಕಾಗಿನೆಲೆ ಪೀಠ ಉಳಿಯುತ್ತಿಿರಲಿಲ್ಲ’ಎಂಬ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಹೇಳಿಕೆ ಸಮಾಜದಲ್ಲಿ ಅಸಮಾಧಾನ ಮೂಡಿಸಿದೆ. ಸಂಘಕ್ಕೆೆ ಜಾಗ ನೀಡಿದ ನೀಲಿ ವೆಂಕಟಸ್ವಾಾಮಿ ಮತ್ತು ಕಟ್ಟಡಕ್ಕೆೆ ಧನಸಹಾಯ ಮಾಡಿದ ನೀಲಿ ಸಂಜೀವಪ್ಪ ಅವರ ತ್ಯಾಾಗವನ್ನು ಅವರು ಉಲ್ಲೇಖಿಸದಿರುವುದು ಖೇದಕರ ಎಂದು ಎಚ್.ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು.

