ಸುದ್ದಿಮೂಲ ವಾರ್ತೆ ರಾಯಚೂರು, ನ.19:
ರಾಜ್ಯದಲ್ಲಿರುವ ಆರ್ಯ ಈಡಿಗ ಸಮಾಜವನ್ನು ಎಸ್ಟಿ ಗೆ ಸೇರ್ಪಡೆ, ನಿಗಮಕ್ಕೆೆ ಹೆಚ್ಚಿಿನ ಅನುದಾನ, ಕುಲಕಸುಬು ಕಳೆದುಕೊಂಡ ಕುಟುಂಬಕ್ಕೆೆ 5 ಎಕರೆ ಜಮೀನು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.6ರಿಂದ ಚಿತ್ತಾಾಪೂರದಿಂದ ಬೆಂಗಳೂರಿಗೆ ಪಾದಯಾತ್ರೆೆ ಹಮ್ಮಿಿಕೊಳ್ಳಲಾಗಿದೆ ಎಂದು ಕಲಬುರ್ಗಿ ಜಿಲ್ಲೆ ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಶಕಿ ್ತಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಾಮೀಜಿ, ಮಾಜಿ ಶಾಸಕ ಎಚ್.ಆರ್.ಶ್ರೀನಾಥ್ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಜನವರಿ 6ರಿಂದ ಈ ಪಾದಯಾತ್ರೆೆ ಆರಂಭಗೊಳ್ಳಲಿದ್ದು, 41 ದಿನಗಳಲ್ಲಿ ಪ್ರತಿದಿನ 20 ಕಿ.ಮೀ ನಂತೆ 700 ಕಿ.ಮೀ ಪಾದಯಾತ್ರೆೆ ನಡೆಸಲಾಗುವುದು. ೆ. 12ರಿಂದ ಬೆಂಗಳೂರಿನ ಸ್ವಾಾತಂತ್ರ ಉದ್ಯಾಾನದಲ್ಲಿ ಆಮರಣಾಂತ ಉಪವಾಸ ಸತ್ಯಾಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪಕ್ಕದ ರಾಜ್ಯಗಳಲ್ಲಿ ಸೇಂದಿ ಮಾರಾಟಕ್ಕೆೆ ಅವಕಾಶ ನೀಡಿದ್ದು ಕರ್ನಾಟಕದಲ್ಲಿ ಮಾತ್ರ ನಿಲ್ಲಿಸುವ ಮೂಲಕ ಸಮುದಾಯವನ್ನು ತುಳಿಯುವ ಹುನ್ನಾಾರ ಮಾಡಿ ಅನ್ಯಾಾಯ ಮಾಡಿದ್ದಾಾರೆ. ಕುಲಾಭಿಮಾನ, ಜಾತಿ ಎಷ್ಟು ಪ್ರಮುಖ ಎನ್ನುವುದನ್ನು ಸಿಎಂ ಸಿದ್ದರಾಮಯ್ಯಘಿ, ಡಿಸಿಎಂ ಡಿ.ಕೆ.ಶಿವಕುಮಾರ ಅವರ ನೋಡಿ ಕಲಿಯಬೇಕಿದೆ. ಹಾಗಾಂತ ಅವರ ನಡೆ ವಿರೋಧಿಸುವುದಿಲ್ಲ ಆದರೆ, ಇತರ ಸಮುದಾಯಗಳಿಗೂ ಅಷ್ಟೇ ಪ್ರಮುಖ ಸ್ಥಾಾನ ಕೊಡಬೇಕಿತ್ತು ಎಂದರು.
ಈ ಕಾಂಗ್ರೆೆಸ್ ಸರ್ಕಾರದಲ್ಲಿ ಈಡಿಗರಿಗೆ ಅನ್ಯಾಾಯವಾಗಿದೆ, ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆ ಪಕ್ಷದಲ್ಲಿನ ಈಡಿಗ ಸಮಾಜದ ಮುಖಂಡರಿಗೆ ಸ್ಥಾಾನಗಳನ್ನೇ ನೀಡದೆ ಮೋಸ ಮಾಡುತ್ತಿಿದ್ದಾಾರೆ ಎಂದು ದೂರಿದರು. ಈ ರಾಷ್ಟ್ರೀಯ ಪಕ್ಷಗಳಿಂದ ಇದೇ ರೀತಿ ಅನ್ಯಾಾಯವಾದರೆ ಶಿವಮೊಗ್ಗಘಿ, ಉಡುಪಿ, ಮಂಗಳೂರು ಭಾಗದಲ್ಲಿ ಪ್ರತ್ಯೇಕ ಪಕ್ಷ ಕಟ್ಟಿಿ ಚುನಾವಣೆಯಲ್ಲಿ ಪಾಠ ಕಲಿಸುವ ನಿರ್ಧಾರ ಮಾಡಬೇಕಾದೀತು ಎಂದು ಎಚ್ಚರಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿಿ ನಿಗಮಕ್ಕೆೆ ಕೇವಲ 10 ಕೋಟಿ ನೀಡಿದ್ದು ಯಾವುದಕ್ಕೂ ಸಾಲದು. ಹೀಗಾಗಿ, 500 ಕೋಟಿ ಅನುದಾನ, ಬೆಂಗಳೂರು ವಿಧಾನಸೌಧದ ಎದುರು ಬ್ರಹ್ಮಶ್ರೀ ನಾರಾಯಣಗುರು ಪುತ್ಥಳಿ ಸ್ಥಾಾಪಿಸಬೇಕು, ಮದ್ಯ ಮಾರಾಟದಲ್ಲಿ ಈಡಿಗ ಸೇರಿ 26 ಪಂಗಡಗಳಿಗೆ ಶೇ.50ರಷ್ಟು ಮೀಸಲು, ರಾಜ್ಯದ ಎಲ್ಲ ವಿ.ವಿ.ಗಳಲ್ಲಿ ನಾರಾಯಣಗುರುಗಳ ಅಧ್ಯಯನ ಪೀಠ ಸ್ಥಾಾಪನೆ ಮತ್ತು ಒಂದು ವಿ.ವಿ.ಗೆ ಅವರ ನಾಮಕರಣ, ಸರಕಾರದಿಂದ ಹೆಂಡದ ಮಾರಯ್ಯ ಜಯಂತಿ ಆಚರಣೆ, ಮಂಗಳೂರು ಏರ್ ಪೋರ್ಟ್ಗೆ ಕೋಟಿ ಚನ್ನಯ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣ ಘೋಷಣೆ ಸೇರಿದಂತೆ ಒಟ್ಟು 18 ಬೇಡಿಕೆ ಈಡೇರಿಸಲು ಸರಕಾರವನ್ನು ಒತ್ತಾಾಯಿಸಲಾಗುತ್ತಿಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಸಮಾಜದ ಭೀಮನಗೌಡ, ಅಶೋಕ, ಸತ್ಯನಾರಾಯಣಗೌಡ, ಮಹೇಶಗೌಡ, ಸುರೇಶಗೌಡ, ಹನುಮಂತಗೌಡ ಸೇರಿದಂತೆ ಇತರರಿದ್ದರು.
ಸಮಾಜದ ಚುನಾಯಿತ ಜನಪ್ರತಿನಿಧಿಗಳು, ಮಾಜಿ ಸಚಿವ, ಶಾಸಕರೆಲ್ಲರೂ ಸೇರಿ ಈಡಿಗ ಸಮುದಾಯದ ಸಮಗ್ರ ಅಭಿವೃದ್ದಿಗೆ ಸರ್ಕಾರದ ಮೇಲೆ ಒತ್ತಡ ಹಾಕಲು ಈ ಹೋರಾಟ ನಡೆಯಲಿದೆ. ಪ್ರಣವಾನಂದ ಸ್ವಾಾಮೀಜಿಗಳ ಪಾದಯಾತ್ರೆೆಯಿಂದಾಗಿ ಸೌಲಭ್ಯ ದೊರೆತಿವೆ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಲ್ಲರೂ ಬರಬೇಕು.
— ಎಚ್.ಆರ್.ಶ್ರೀನಾಥ, ಮಾಜಿ ಶಾಸಕರು.

