ಸುದ್ದಿಮೂಲ ವಾರ್ತೆ ರಾಯಚೂರು, ನ.19:
ತುಂಗಭದ್ರಾಾ ಜಲಾಶಯದ ಗೇಟುಗಳ ಬದಲಾವಣೆ ಜೊತೆಜೊತೆಗೆ ನಾಲೆಗೆ ಸೇತುವೆಗಳ ಎತ್ತರ, ದುರಸ್ತಿಿ ಜೊತೆಗೆ ಎರಡೂ ಬದಿಯ ಗೋಡೆಯ ಎತ್ತರ, ಸಾಮರ್ಥ್ಯ ಹೆಚ್ಚಳಕ್ಕೂ ಮುಂದಾಗಬೇಕು ಎಂದು ತುಂಗಭದ್ರಾಾ ಎಡದಂಡೆ ಕಾಲುವೆ ರೈತರ ವೇದಿಕೆಯ ಸಂಚಾಲಕರಾದ ಶಂಕರಗೌಡ ಹರವಿ, ಜೆ.ಶರಣಪ್ಪಗೌಡ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಜಂಟಿಯಾಗಿ ಮಾತನಾಡಿ, ಈಗಾಗಲೇ ಸರ್ಕಾರ ಜಲಾಶಯದ ಎಲ್ಲ ಗೇಟು ಬದಲಿಸಲು ಎರಡನೇ ಬೆಳೆಗೆ ನೀರು ಹರಿಸದಿರಲು ನಿರ್ಧರಿಸಿದೆ. ಇದರಿಂದ ಕೊನೆ ಭಾಗದ ರೈತರಿಗೆ ಲಾಭವಾಗದು. ಅದರ ಜೊತೆಗೆ ಪಾಪಯ್ಯ ಸುರಂಗದ ವ್ಯಾಾಸ ಅಗಲಿಸಬೇಕು, ಪರ್ಯಾಯ ಕಾಲುವೆ ನಿರ್ಮಾಣಕ್ಕೆೆ ಮುಂದಾಗಬೇಕು, ಕಾಲುವೆಯ ಸೇತುವೆಗಳ, ಎರಡು ಬದಿಯೂ ಸಿಸಿ ಹಾಕಿ ಎತ್ತರಿಸಿ ಸಾಮರ್ಥ್ಯ ಹೆಚ್ಚಳ ಮಾಡಲು ಕ್ರಮ ಜರುಗಿಸಲು ಆಗ್ರಹಿಸಿದರು.
ರೈತರ ಜೀವನಾಡಿ ತುಂಗಭದ್ರಾಾ ಎಡದಂಡೆ ಕಾಲುವೆಗೆ ಜನವರಿಯಿಂದ ಹರಿಸುವುದಿಲ್ಲ ಎಂದು ರಾಜ್ಯ ಸರಕಾರ ಹೇಳುತ್ತಿಿರುವುದು ರೈತರು ಆತಂಕಕ್ಕೆೆ ಗುರಿಯಾಗಿರುವುದು ನಿಜ.
ಮೇಲ್ಭಾಾಗದ ಕಾರಟಗಿ, ವಡ್ಡರಹಟ್ಟಿಿಘಿ, ಸಿಂಧನೂರು, ಮಸ್ಕಿಿ ವಿಭಾಗದಲ್ಲಿ ಕೆಲವರು ನೀರು ಕಳ್ಳತನ ಮಾಡುತ್ತಿಿದ್ದಾರೆ. ಕಾಲುವೆ ತಳದಲ್ಲಿ ಕೊರೆದು ಅಕ್ರಮವಾಗಿ ಬೆಳೆಗಳ ಬೆಳೆಯತ್ತಿಿದ್ದಾಾರೆ. ಈ ಬಗ್ಗೆೆ ಖುದ್ದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರಾವರಿ ಅಧಿಕಾರಿಗಳೆ ದ್ರೋಣ ಕ್ಯಾಾಮೆರಾದಲ್ಲಿನ ವಿಡಿಯೋ, ಭಾವಚಿತ್ರಗಳನ್ನು ಜಲಸಂಪನ್ಮೂಲ ಸಚಿವರ ಮುಂದೆಯೇ ಪರದೆ ಮೇಲೆ ತೋರಿಸಿದ್ದು ನೀರು ಕಳ್ಳತನ ತಡೆಯಲು ತಮ್ಮ ಬಳಿ ಅಗತ್ಯ ಸಿಬ್ಬಂದಿ, ಸಂಪನ್ಮೂಲವಿಲ್ಲ ಎಂಬ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾಾರೆ ಎಂದು ವಿವರಿಸಿದರು.
ಈಗಾಗಲೇ ಜಲಾಶಯದ ಗೇಟುಗಳ ಬದಲಾವಣೆ, ಕಾಲುವೆ ಕೊನೆ ಭಾಗವಾಗಿರುವ ಸಿರವಾರ, ಯರಮರಸ್ ವಲಯದಲ್ಲಿನ ಕಾಲುವೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಅಗತ್ಯವಾದ ದುರಸ್ತಿಿಘಿ, ಕ್ರಮಕ್ಕೆೆ ಅಗತ್ಯ ಅನುದಾನ ಒದಗಿಸಲಾಗುವುದು ಅಧಿಕಾರಿಗಳು ಕ್ರಿಿಯಾ ಯೋಜನೆಯೊಂದಿಗೆ ವಿಸ್ತೃತ ವರದಿ ಸಲ್ಲಿಸಲು ಖುದ್ದು ಸಚಿವ ಡಿ.ಕೆ.ಶಿವಕುಮಾರ ಸೂಚಿಸಿದ್ದಾಾರೆ. ಅದಕ್ಕೆೆ ಅನುಗುಣವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಬದ್ದತೆಯೊಂದಿಗೆ ಈ ಅವಧಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಾಲುವೆ ನಂಬಿ ಕೃಷಿ ಮಾಡಲು ಕೊನೆ ಭಾಗದ ರೈತರು ಭಯ ಪಡುವಂತಾಗಿದ್ದು ತಕ್ಷಣ ಅಗತ್ಯವಾಗಿ ಕ್ರಮ ವಹಿಸಲು ಸರ್ಕಾರ ಮುಂದಾಗುವಂತೆ ಪಕ್ಷಾಾತೀತವಾಗಿ ಸಚಿವ, ಶಾಸಕರು ಒತ್ತಡ ಹಾಕಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಸಮರ್ಪಕ ನೀರಿಗಾಗಿ ಕೆಳ ಭಾಗದ ರೈತರು ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ವೇದಿಕೆಯ ಅಮರೇಶ ಹೊಸಮನಿ,ಮಹಾಂತೇಶ ಪಾಟೀಲ್ ಅತ್ತನೂರು, ನಾಗನಗೌಡ ಹರವಿ,ನಾಗರಾಜ್ ಗೌಡ ಸಿರವಾರ, ವೈ.ಬಸನಗೌಡ , ಅಮರೇಗೌಡ, ಆರ್.ಎಸ್.ಪಾಟೀಲ್ ಉಪಸ್ಥಿಿತರಿದ್ದರು.

