ಸುದ್ದಿಮೂಲ ವಾರ್ತೆ ಬೆಂಗಳೂರು, ನ.19:
ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಐದು ವರ್ಷ ಐದು ತಿಂಗಳು ಕಳೆದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾಾನದಲ್ಲಿ ನಾನು ಶಾಶ್ವತವಾಗಿ ಇರಲು ಬಯಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಇಂದಿರಾ ಗಾಂಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2020ರಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾಾನ ವಹಿಸಿಕೊಂಡೆ. ಈಗ ಐದು ವರ್ಷ ಐದು ತಿಂಗಳು ಆಗಿದೆ. ನನ್ನ ನೇತೃತ್ವದಲ್ಲಿ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಆಭೂತಪೂರ್ವ ಜಯಗಳಿಸಿ ಅಧಿಕಾರಕ್ಕೆೆ ಬಂತು. ನನಗೆ ಹೈಕಮಾಂಡ್ ಉಪಮುಖ್ಯಮಂತ್ರಿಿ ಹುದ್ದೆ ನೀಡಿತು. ಆ ವೇಳೆಯೇ ನಾನು ಕೆಪಿಸಿಸಿ ಅಧ್ಯಕ್ಷ ಗಾದಿ ತ್ಯಜಿಸಲು ಮುಂದಾಗಿದ್ದೆ. ನಮ್ಮ ನಾಯಕರಾದ ರಾಹುಲ್ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯಂತೆ ಮುಂದುವರೆದೆ. ಬರುವ ಮಾರ್ಚ್ಗೆ ಅಧ್ಯಕ್ಷನಾಗಿ ಆರು ವರ್ಷ ಕಳೆಯುತ್ತದೆ ಎಂದರು.
ಈ ಹೇಳಿಕೆಯಿಂದ ಕಾರ್ಯಕ್ರಮದಲ್ಲಿ ಇದ್ದ ಕಾಂಗ್ರೆೆಸ್ ಕಾರ್ಯಕರ್ತರು ಗೊಂದಲಕ್ಕೆೆ ಒಳಗಾದರು. ಅಧ್ಯಕ್ಷಗಾದಿ ತೊರೆಯದಂತೆ ಒತ್ತಡ ತಂದರು. ಆಗ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ ಡಿ.ಕೆ.ಶಿವಕುಮಾರ್ ಅವರು, ನಾನು ಕಾಂಗ್ರೆೆಸ್ ಅಧ್ಯಕ್ಷನಾಗಿರುತ್ತೇನೋ ಅಥವಾ ತೊರೆಯುತ್ತೇನೋ ಎಂಬುದು ಮುಖ್ಯ ಅಲ್ಲ. ಹುದ್ದೆ ತೊರೆದರು ಪಕ್ಷದ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತೇನೆ. ಪಕ್ಷ ಸಂಘಟಿಸುತ್ತೇನೆ. ನನ್ನ ಅವಧಿಯಲ್ಲಿ ಮಾಡಿದ ಕೆಲಸಗಳು ಶಾಶ್ವತವಾಗಿರುತ್ತವೆ. ಪಕ್ಷದ ನೂರು ಭವನಗಳನ್ನು ನಿರ್ಮಾಣ ಮಾಡುತ್ತಿಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ಒಂದು ಮಾದರಿಯನ್ನು ಸ್ಥಾಾಪಿಸಿದ್ದೇನೆ. ಗಾಂಧಿ ಕುಟುಂಬ ಹಾಗೂ ಎಐಸಿಸಿ ಅಧ್ಯಕ್ಷರು ಬಯಸುವವರೆಗೂ ಕಾಂಗ್ರೆೆಸ್ ಪಕ್ಷದ ಕೆಲಸವನ್ನು ಮಾಡುತ್ತೇನೆ ಎಂದರು.
ಬಿಹಾರದ ಲಿತಾಂಶದಿಂದ ರಾಜ್ಯದ ಕಾಂಗ್ರೆೆಸ್ ಕಾರ್ಯಕರ್ತರು ಆತ್ಮವಿಶ್ವಾಾಸ ಕಳೆದುಕೊಳ್ಳಬೇಡಿ. ನಿಮ್ಮ ಶ್ರಮದಿಂದ ರಾಜ್ಯದಲ್ಲಿ ಕಾಂಗ್ರೆೆಸ್ ಬೇರುಗಳು ಗಟ್ಟಿಿಯಾಗಿವೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲೂ ಕಾಂಗ್ರೆೆಸ್ ಗೆದ್ದು ಅಧಿಕಾರ ಉಳಿಸಿಕೊಳ್ಳುತ್ತದೆ. ನಾನು ಓಡಿಹೋಗುವುದಿಲ್ಲ ಎಂದು ಕಾರ್ಯಕರ್ತರಿಗೆ ವಿಶ್ವಾಾಸ ತುಂಬಿದರು.
ಶೀಘ್ರದಲ್ಲೇ ರಾಜ್ಯದಲ್ಲಿ ಹಲವು ಸ್ಥಳೀಯ ಸಂಸ್ಥೆೆ ಚುನಾವಣೆಗಳು ನಡೆಯಲಿವೆ. ಇವುಗಳಿಗೆ ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ನಡೆಸಿಕೊಳ್ಳಬೇಕು ಎಂದರು.
ಬಾಕ್ಸ್
ಇಂದಿರಾ ಗಾಂಧಿ ಅವರ ನುಡಿಮುತ್ತುಗಳ ಪುಸ್ತಕ ಬಿಡುಗಡೆ
ಇಂದಿರಾ ಗಾಂಧಿ ಅವರ ನುಡಿಮುತ್ತಗಳನ್ನು ಸಂಗ್ರಹಿಸಿ ಸೋನಿಯಾ ಗಾಂಧಿ ಅವರು ಪುಸ್ತಕ ಬರೆದಿದ್ದಾರೆ. ಅದನ್ನು ನಾನು ಕನ್ನಡಕ್ಕೆೆ ಅನುವಾದ ಮಾಡಿದ ಕೃತಿಯನ್ನು ಇಂದು ಬಿಡುಗಡೆ ಮಾಡಿದ್ದೇನೆ. ಇದು ಎಲ್ಲರಿಗೂ ಉಚಿತವಾಗಿ ಹಂಚಬೇಕು. ಹೀಗಿದ್ದರೂ ಕಾಂಗ್ರೆೆಸ್ ಭವನ ನಿರ್ಮಾಣಕ್ಕಾಾಗಿ ಎಲ್ಲರೂ ನೂರು ರೂ. ಕೊಟ್ಟು ಪುಸ್ತಕ ಖರೀದಿಸಬೇಕು ಎಂದರು.

