ಸುದ್ದಿಮೂಲ ವಾರ್ತೆ ದೆಹಲಿ, ನ.19:
ಪಡಿತರ ಕಾರ್ಡ್ ಹೊಂದಿರುವವರಗೆ ಅಕ್ಕಿಿಯ ಜೊತೆಗೆ ’ಇಂದಿರಾ ಕಿಟ್’ 2026ರ ಜನವರಿ ಅಥವಾ ೆಬ್ರವರಿಯಿಂದ ನೀಡಲಾಗುವುದು ಎಂದು ಅಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವರಾದ ಪ್ರಲ್ಹಾಾದ ಜೋಶಿ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಠಿಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಿ ಗರೀಬ್ ಕಲ್ಯಾಾಣ್ ಯೋಜನೆಯ ಅಡಿಯಲ್ಲಿ ಹೊಸ ರೇಷನ್ ಕಿಟ್ ಅನ್ನು ಪರಿಚಯಿಸಲಾಗುವುದು. ಈ ಕಿಟ್ ಅನ್ನು ’ಇಂದಿರಾ ಕಿಟ್ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.
ಇಂದಿರಾ ಕಿಟ್ನಲ್ಲಿ ಬೇಳೆ, ಎಣ್ಣೆೆ, ಉಪ್ಪುು ಮತ್ತು ಸಕ್ಕರೆ ಸೇರಿರುತ್ತದೆ. ಇದು ಪ್ರೋೋಟೀನ್ ಸಮೃದ್ಧ ಆಹಾರವಾಗಿದ್ದು, ಮಕ್ಕಳು ಮತ್ತು ಕುಟುಂಬದ ಎಲ್ಲ ಸದಸ್ಯರ ಬೆಳವಣಿಗೆಗೆ ಉಪಯುಕ್ತವಾಗಿದೆ. ದಿನನಿತ್ಯದ ಅಡುಗೆಗೆ ಬೇಕಾದ ಪದಾರ್ಥಗಳನ್ನು ನೀಡುವುದರಿಂದ ನೇರವಾಗಿ ಆ ಕುಟುಂಬಕ್ಕೆೆ ಸೇರುತ್ತದೆ. ಈ ಯೋಜನೆಯನ್ನು ಜನವರಿ ಅಥವಾ ಅಂತಿಮವಾಗಿ ೆಬ್ರವರಿ 2026ರ ಹೊತ್ತಿಿಗೆ ಕಾರ್ಯರೂಪಕ್ಕೆೆ ತರಲು ಟೆಂಡರ್ ಪ್ರಕ್ರಿಿಯೆ ಹಾಗೂ ಗುಣಮಟ್ಟದ ಪರಿಶೀಲನೆ ನಡೆಯುತ್ತಿಿದೆ ಎಂದು ಮುನಿಯಪ್ಪ ಅವರು ಸ್ಪಷ್ಟಪಡಿಸಿದರು.
ಬಿಳಿ ಜೋಳಕ್ಕೆೆ ಎಂಎಸ್ಪಿಿಗೆ ಮನವಿ:
ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲಾಗಿದ್ದು ಇದರ ಬಾಕಿ ಹಣ ಬಿಡುಗಡೆ ಮಾಡಬೇಕು ಮತ್ತು ಬಿಳಿ (ಮಾಲ್ದಂಡಿ) ಜೋಳಕ್ಕೆೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾಾದ್ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಆರು ಲಕ್ಷ ಮೆಟ್ರಿಿಕ್ ಟನ್ ರಾಗಿಯನ್ನು ಎಂಎಸ್ಪಿಿಯಲ್ಲಿ ಖರೀದಿಸುತ್ತಿಿದ್ದೇವೆ. ಕಳೆದ ವರ್ಷ ಖರೀದಿ ಮಾಡಿದ ಬಾಕಿ ಎರಡು ಸಾವಿರ ಕೋಟಿ ರೂ. ರಾಜ್ಯಕ್ಕೆೆ ಬರಬೇಕಿದೆ. ಜನವರಿಯಿಂದ ಹೊಸ ಖರೀದಿ ಶುರುವಾಗಲಿದೆ ಬಾಕಿ ಹಣ ನೀಡಿದರೆ ಮುಂದೆ ಖರೀದಿಗೆ ಸಹಾಯ ಆಗಲಿದೆ ಎಂದಿದ್ದಾರೆ.
ಸಾರ್ವಜನಿಕ ವಿತರಣಾ ವ್ಯವಸ್ಥೆೆ (ಪಿಡಿಎಸ್)ಗೆ ಸಾಕಷ್ಟು ಜೋಳ ದೊರಕದಿರುವುದು ಕಳವಳಕಾರಿಯಾಗಿದೆ. ನಮಗೆ ಜೋಳ ಸಾಕಾಗುತ್ತಿಿಲ್ಲ. ನಾವು ಜೋಳ ಖರೀದಿ ಮಾಡಲು ಪ್ರಯತ್ನಿಿಸುತ್ತಿಿದ್ದೇವೆ. ಉತ್ತರ ಕರ್ನಾಟಕದಲ್ಲಿ ಜನತೆ ಅಕ್ಕಿಿಗಿಂತ ಹೆಚ್ಚು ಜೋಳವನ್ನೇ ಬಳಸುತ್ತಾಾರೆ. ಹೀಗಾಗಿ ಜೋಳ ಉತ್ಪಾಾದನೆ ಹೆಚ್ಚಳ ಮಾಡುವ ಬಗ್ಗೆೆ ಮತ್ತು ಶೇಖರಣೆಯ ಬಗ್ಗೆೆ ಸಮಗ್ರ ಯೋಜನೆ ಅಗತ್ಯವಿದೆ ಎಂದರು.
ವಿಶೇಷವಾಗಿ ಮಾಲ್ದಂಡಿ ಜೋಳದ ಬೆಲೆಯಲ್ಲಿ ಕುಸಿತವಾಗಿದೆ. ಈ ಜೋಳದ ಮಾರುಕಟ್ಟೆೆ ಬೆಲೆಗಿಂತ ಕನಿಷ್ಠ ಬೆಂಬಲ ಬೆಲೆ ಕ್ವಿಿಂಟಾಲ್ಗೆ 1000 ರಿಂದ 1500 ರೂಪಾಯಿ ಕಡಿಮೆಯಿದೆ. ಎಂಎಸ್ಪಿಿ ಹೆಚ್ಚಿಿಸಿದರೆ ರೈತರು ಸರ್ಕಾರಕ್ಕೆೆ ಸರಬರಾಜು ಮಾಡಲು ಪ್ರೋೋತ್ಸಾಾಹ ಸಿಕ್ಕಂತಾಗುತ್ತದೆ. ಈ ಬಗ್ಗೆೆ ರಾಜ್ಯದ ಮುಖ್ಯಮಂತ್ರಿಿ ಸೇರಿದಂತೆ ಉತ್ತರ ಕರ್ನಾಟಕದ ಮಂತ್ರಿಿಗಳಿಗೆ ಮನವಿ ಮಾಡಿದ್ದಾಗಿ ತಿಳಿಸಿದ ಅವರು, ರಾಜ್ಯದ ಬೆಲೆ ನಿಗದೀಕರಣ ಸಮಿತಿಯು ವಾಸ್ತವಿಕ ಪರಿಸ್ಥಿಿತಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಕರ್ನಾಟಕಕ್ಕೆೆ ನಾಲ್ಕು ಲಕ್ಷ ರಾಗಿ ಮೆಟ್ರಿಿಕ್ ಟನ್ ಸಾಕಾಗುತ್ತದೆ. ಕೇಂದ್ರ ಸರ್ಕಾರ ರಾಗಿ ಬೆಳೆಗೆ ಇರುವ ಬೇಡಿಕೆಯಿಂದಾಗಿ ಆರು ಲಕ್ಷ ಮೆಟ್ರಿಿಕ್ ಟನ್ ಖರೀದಿಗೆ ಸೂಚನೆ ನೀಡಿತ್ತು. ಈ ಹಿನ್ನೆೆಲೆ ರಾಜ್ಯ ಸರ್ಕಾರ ಆರು ಲಕ್ಷ ಮೆಟ್ರಿಿಕ್ ಟನ್ ಖರೀದಿ ಮಾಡಿದೆ. ಇದರಿಂದ ರೈತರಿಗೆ ಒಳ್ಳೆೆಯ ಬೆಲೆ ನೀಡಲು ಅನುಕೂಲವಾಗಲಿದೆ. ಪ್ರತಿ ಕ್ವಿಿಂಟಾಲ್ಗೆ ಐದು ಸಾವಿರ ರೈತರಿಗೆ ನೀಡಲಾಗುತ್ತಿಿದೆ. ಇನ್ನೂ ಭೇಟಿ ವೇಳೆ ಜೋಶಿ ಅವರು ಬಾಕಿ ಹಣ ಬಿಡುಗಡೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಪಡಿತರ ಹಂಚಿಕೆ ಸೊಸೈಟಿ ಮಾಲೀಕರಿಗೆ ಕಮಿಷನ್ ಹೆಚ್ಚಿಿಸಿದೆ. ಪ್ರತಿ ಕ್ಷಿಂಟಾಲ್ಗೆ 32 ರೂ. ಏರಿಕೆ ಮಾಡಿದೆ. ಇದಕ್ಕೆೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಜೋಳ ಉತ್ಪಾಾದನೆ ಕಡಿಮೆ ಇದೆ, ಇದನ್ನು ಖರೀದಿಸಲು ಸಾಧ್ಯವಾಗುತ್ತಿಿಲ್ಲ, ಹೆಚ್ಚು ದಿನ ಶೇಖರಿಸಲು ಸಾಧ್ಯವಿಲ್ಲ, ಉತ್ಪಾಾದನೆ ಹೆಚ್ಚಿಿಸಲು ಪ್ರಯತ್ನ ಮಾಡಲಾಗುತ್ತಿಿದೆ. ಮಾಲ್ಡಂಡಿ ಜೋಳಕ್ಕೆೆ ಡಿಮ್ಯಾಾಂಡ್ ಹೆಚ್ಚಿಿದೆ, ಎಂಎಸ್ಪಿಿಯಲ್ಲಿ ರೈತರು ನೀಡಲ್ಲ, ಈ ಜೋಳಕ್ಕೆೆ ಎಂಎಸ್ಪಿಿ ಹೆಚ್ಚಿಿಸಲು ಇದೇ ಸಮಯದಲ್ಲಿ ಮನವಿ ಮಾಡಿದೆ ಎಂದು ಹೇಳಿದ್ದಾರೆ.
ಮಾಲ್ದಂಡಿ ಜೋಳಕ್ಕೆೆ ಬೇಡಿಕೆ ಹೆಚ್ಚಳ: ಕನಿಷ್ಠ ಬೆಂಬಲ ಬೆಲೆ ಹೆಚ್ಚಿಿಸುವಂತೆ ಕೇಂದ್ರ ಸಚಿವ ಪ್ರಲ್ಹಾಾದ್ ಜೋಶಿ ಅವರಿಗೆ ಮನವಿ ಜನವರಿಯಿಂದ ‘ಇಂದಿರಾ ಕಿಟ್’: ಕೆ.ಎಚ್. ಮುನಿಯಪ್ಪ

