ಸುದ್ದಿಮೂಲ ವಾರ್ತೆ ಕಲಬುರಗಿ, ನ.20:
ಜೇವರ್ಗಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆೆಯಾಗಿ ಬಳಿಕ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಪರ ಮತದಾನ ಮಾಡಿದ 9 ಜನ ಸದಸ್ಯರ ಸದಸ್ಯತ್ವ ರದ್ದು ಮಾಡಿ ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.
ೆ.12ರಂದು ನಡೆದಿದ್ದ ಜೇವರ್ಗಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ವಿಪ್ ಉಲ್ಲಂಘನೆ ಮಾಡಿ ಜೆಡಿಎಸ್ ಪರ 9 ಜನರು ಮತ ಚಲಾವಣೆ ಮಾಡಿದ್ದರು. ಪಕ್ಷದ ವಿಪ್ ಉಲ್ಲಂಘಿಸಿದ್ದರಿಂದ ಸದಸ್ಯತ್ವ ರದ್ದು ಮಾಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷರು ಅರ್ಜಿ ಸಲ್ಲಿಸಿದ್ದರು. ಸುದೀರ್ಘ 9 ತಿಂಗಳ ವಿಚಾರಣೆ ಬಳಿಕ ಈ ಆದೇಶ ನೀಡಿದ್ದಾರೆ.
ಪಕ್ಷಾಂತರ ನಿಷೇಧ ಅಧಿನಿಯಮ 1987 ಪ್ರಕರಣ 4ರಡಿ ಜೇವರ್ಗಿ ಪುರಸಭೆಯ ಬಿಜೆಪಿ ಸದಸ್ಯರಾದ ಸಂಗಣ್ಣಗೌಡ ಪಾಟೀಲ್, ಗುರುಶಾಂತಯ್ಯ ಹಿರೇಮಠ, ಕಸ್ತೂರಿಬಾಯಿ ಕಲ್ಲಾ, ಮಲ್ಲಿಕಾರ್ಜುನ ಭಜಂತ್ರಿಿ, ಗಂಗೂಬಾಯಿ, ಸಿದ್ದರಾಮ ಯಳಸಂಗಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ್, ಶರಣಮ್ಮ ತಳವಾರ, ಚಂದನ ಮಹೇಂದ್ರಕರ್ ಸದಸ್ಯತ್ವ ಅನರ್ಹ ಮಾಡಿದ್ದಾರೆ. ಈ 9 ಜನರು ಮುಂದಿನ ಆರು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲದಂತಾಗಿದೆ.

