ಸುದ್ದಿಮೂಲ ವಾರ್ತೆ ರಾಯಚೂರು/ಮೈಸೂರು, ನ.20:
ಸ್ವಚ್ಛತೆ, ಶಿಕ್ಷಣ, ಸಂವಹನ ಸೇರಿ ಪರಸ್ಪರ ಹಂಚಿಕೆ ಮಾಡಿಕೊಂಡು ಪ್ರಗತಿ ಸಾಧಿಸಲು ಮೈಸೂರು ಮಹಾನಗರ ಪಾಲಿಕೆ ಮತ್ತು ರಾಯಚೂರು ಮಹಾನಗರ ಪಾಲಿಕೆ ನಡುವೆ ಸ್ವಚ್ಛ ಶಹರ್ ಜೋಡಿ ಒಡಂಬಡಿಕೆಯ ಒಪ್ಪಂದಕ್ಕೆೆ ಸಹಿ ಹಾಕಲಾಯಿತು.
ಇಂದು ಮೈಸೂರಿನ ಪಾಲಿಕೆಯ ಸಭಾಂಗಣದಲ್ಲಿ ಮೈಸೂರು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸ್ೀ, ರಾಯಚೂರು ಪಾಲಿಕೆಯ ವಲಯ ಆಯುಕ್ತ ಬಿ.ಎಂ.ಮಲ್ಲಿಕಾರ್ಜುನ ಅವರ ಮಧ್ಯೆೆ ಒಡಂಬಡಿಕೆಯ ದಾಖಲೆ ಪರಸ್ಪರ ವಿನಿಮಯ ಮಾಡಿಕೊಂಡರು.
ಕೇಂದ್ರದ ಆವಾಸ್ ಮತ್ತು ನಗರ ವ್ಯವಹಾರ ಮಂತ್ರಾಾಲಯ ಮತ್ತು ಕರ್ನಾಟಕ ಸರ್ಕಾರದ ಮಾರ್ಗದರ್ಶನದಲ್ಲಿ ಒಪ್ಪಂದ ಮಾಡಿಕೊಂಡಿದ್ದುಘಿ.
ಈ ಜೋಡಿ ಒಡಂಬಡಿಕೆಯ ಮೂಲಕ ಮೈಸೂರು ಮಹಾನಗರ ಪಾಲಿಕೆಯು ಸ್ವಚ್ಛ ಸರ್ವೇಕ್ಷಣೆ ಒಡಿಎ್ ಮತ್ತು ಜಿಎ್ಸಿ ವೌಲ್ಯಾಾಂಕನದ ಮೂಲಕ ಉತ್ತಮ ಅಂಕಗಳನ್ನು ಸಾಧಿಸಲು ಮತ್ತು ಇತರೆ ಸ್ವಚ್ಛತೆ ಸಂಬಂಧಿತ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರಗತಿ ಸಾಧಿಸಲು ರಾಯಚೂರು ಮಹಾನಗರ ಪಾಲಿಕೆಗೆ ಮೈಸೂರು ಪಾಲಿಕೆ ಸಕ್ರಿಿಯ ಸಹಕಾರ ನೀಡಲಿದೆ.
ಈ ಸಹಕಾರದ ಭಾಗವಾಗಿ ಪ್ರತಿ ಎರಡು ವಾರಗಳಿಗೊಮ್ಮೆೆ ಎಲ್ಲ ರೀತಿಯ ದಾಖಲೆಗಳು, ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಿಗಳನ್ನು ಹಂಚಿಕೊಳ್ಳಲಾಗುವುದು. ಜೊತೆಗೆ, ವರ್ಚುವಲ್ ಕಾನ್ಫರೆನ್ಸ್ ಮೂಲಕ ನಿರಂತರ ಪ್ರಗತಿ ಪರಿಶೀಲನೆ ಸಭೆ ನಡೆಸುವ ಮೂಲಕ ಮೈಸೂರಿನ ಪಾಲಿಕೆಯ ಕ್ರಮಗಳು ರಾಯಚೂರು ಮಹಾನಗರ ಪಾಲಿಕೆಯು ಸ್ವಚ್ಛತಾ ಕಾರ್ಯಗಳಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಹಾಯಕವಾಗಲಿದೆ.
ಎರಡು ನಗರಗಳ ನಡುವಿನ ಈ ಸಹಯೋಗವು ಸ್ವಚ್ಛ ಭಾರತ ಮಿಶನ್ (ನಗರ) ಉದ್ದೇಶಗಳನ್ನು ಈಡೇರಿಸುವ ದಿಸೆಯಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆೆಯಾಗಿದೆ ಎಂದು ಭಾವಿಸಲಾಗಿದೆ.
ರಾಯಚೂರು ಮಹಾನಗರ ಪಾಲಿಕೆಯ ವಲಯ ಆಯುಕ್ತ ಬಿ.ಎಂ.ಮಲ್ಲಿಕಾರ್ಜುನ, ಮಸ್ಕಿಿ ಪುರಸಭೆ ಮುಖ್ಯಾಾಧಿಕಾರಿ ನರಸರೆಡ್ಡಿಿ, ಮೈಸೂರಿನ ಪರಿಸರ ವಿಭಾಗದ ಸಹಾಯಕ ಅಭಿಯಂತರ ಮೃತ್ಯುಂಜಯ ಇದ್ದರು.

