ಸುದ್ದಿಮೂಲ ವಾರ್ತೆ ಬಳ್ಳಾಾರಿ, ನ.20:
ಜೀನ್ಸ್ ಬಟ್ಟೆೆಗಳ ವಾಷಿಂಗ್ ಘಟಕಗಳ ಪರವಾಗಿ ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ಮಧ್ಯೆೆ ಪೈಪೋಟಿ ನಡೆದಿದೆ. ಈ ಮಧ್ಯೆೆ ಜೀನ್ಸ್ ವಾಷಿಂಗ್ ಘಟಕಗಳು ವಿಸರ್ಜಿಸುತ್ತಿಿರುವ ರಸಾಯನಿಕಯುಕ್ತ ತ್ಯಾಾಜ್ಯದ ನಿರ್ವಹಣೆಗೆ ಹೆಚ್ಚಾಾಗಿ ಆಸಕ್ತಿಿ ತೋರಿಸದ ಘಟಕಗಳ ಮಾಲೀಕರು ‘ಅನುಕಂಪ’ದ ದುರುಪಯೋಗ ಪಡೆದುಕೊಳ್ಳಲು ರಾಜಕಾರಣಿಗಳ ಓಲೈಕೆಗಾಗಿ ಪ್ರಯತ್ನಿಿಸುತ್ತಿಿರುವುದು ಸ್ಪಷ್ಟವಾಗಿದೆ.
ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಬಳ್ಳಾಾರಿಗೆ ಭೇಟಿ ನೀಡಿದಾಗ, ಬಳ್ಳಾಾರಿ ನಗರ ಮತ್ತು ಬಳ್ಳಾಾರಿ ಗ್ರಾಾಮೀಣ ವ್ಯಾಾಪ್ತಿಿಯ 53 ಜೀನ್ಸ್ ಗಾರ್ಮೆಂಟ್ ವಾಷಿಂಗ್ ಘಟಕಗಳು ವಿಲೇವಾರಿ ಮಾಡುತ್ತಿಿರುವ ರಸಾಯನಿಕಯುಕ್ತ ತ್ಯಾಾಜ್ಯದ ವಿರುದ್ಧ ಪರಿಸರವಾದಿಗಳು ಮತ್ತು ಸಾರ್ವಜನಿಕರು ದೂರು ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಉಪ ಲೋಕಾಯುಕ್ತರ ಶಿಾರಸ್ಸಿಿನ ಮೇರೆಗೆ ಬಳ್ಳಾಾರಿಯ ಜೀನ್ಸ್ ವಾಷಿಂಗ್ ಘಟಕಗಳನ್ನು ಮುಚ್ಚಲು ನವೆಂಬರ್ 6 ರಂದು ಮಾಲಿನ್ಯ ನಿಯಂತ್ರಣ ಮಂಡಲಿಯ ಬೆಂಗಳೂರು ಕಚೇರಿಯಿಂದ ಆದೇಶ ಜಾರಿಯಾಗಿತ್ತು. ಈ ಆದೇಶದಲ್ಲಿ, ತ್ಯಾಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಹೊಂದಿದವರನ್ನೂ ಸೇರಿಸಲಾಗಿತ್ತು. ಅಷ್ಟೇ ಅಲ್ಲ, ನವೆಂಬರ್ 6 ರಿಂದಲೇ 3ೇಸ್ ವಿದ್ಯುತ್ ಸಂಪರ್ಕವನ್ನು ಜೆಸ್ಕಾಾಂ ಕಡಿತಗೊಳಿಸಿತ್ತು.
ಆಗ, ಬಳ್ಳಾಾರಿ ಜಿಲ್ಲಾಾ ಜೀನ್ಸ್ ವಾಷಿಂಗ್ ಘಟಕಗಳ ಸಂಘವು ಶಾಸಕ ನಾರಾ ಭರತರೆಡ್ಡಿಿ ಅವರನ್ನು ಭೇಟಿ ಮಾಡಿ, ತಮ್ಮ ಅಹವಾಲನ್ನು ವಿವರಿಸಿ, ಕಾರ್ಮಿಕರ ಜೀವನ, ಕೋವಿಡ್-19ರ ನಂತರ ಗಾರ್ಮೆಂಟ್ ಉದ್ಯಮ ಎದುರಿಸುತ್ತಿಿರುವ ಸಂಕಷ್ಟಗಳನ್ನು ವಿವರಿಸಿ, ತಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದರು.
ಆಗ, ಶಾಸಕ ನಾರಾ ಭರತರೆಡ್ಡಿಿ ಅವರು, ಗಾರ್ಮೆಂಟ್ ಉದ್ಯಮಿಗಳಿಗಾಗಿ ಮುಖ್ಯಮಂತ್ರಿಿಗಳ ಜೊತೆ ಬೆಂಗಳೂರಿನಲ್ಲಿ ಬುಧವಾರ ಸಭೆ ಏರ್ಪಡಿಸಿ, ಗಾರ್ಮೆಂಟ್ ಉದ್ಯಮಿಗಳ ಸಂಕಷ್ಟಕ್ಕೆೆ ಸ್ಪಂದಿಸಲು ಮನವಿ ಮಾಡಿದರು. ಈ ಸಭೆಯಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು, ಕಲ್ಯಾಾಣ ಕರ್ನಾಟಕ ಅಭಿವೃದ್ಧಿಿ ಮಂಡಳಿಯಿಂದ 11 ಕೋಟಿ ರೂಪಾಯಿ, ಕರ್ನಾಟಕ ಇಂಡಸ್ಟ್ರಿಿಯಲ್ ಅಭಿವೃದ್ಧಿಿ ಮಂಡಳಿಯಿಂದ 11 ಕೋಟಿ ರೂಪಾಯಿಯ ಅನುದಾನದ ನೆರವಿನಿಂದ ಪರಿಸರ ಮಾಲಿನ್ಯ ಮಂಡಳಿಯ ಸ್ವಾಾಧೀನದಲ್ಲಿ ಇರುವ ನಾಲ್ಕು ಎಕರೆ ಭೂಮಿಯಲ್ಲಿ ಸಾಮೂಹಿಕ ತ್ಯಾಾಜ್ಯ ನೀರು ಸಂಸ್ಕರಣಾ ಘಟಕ ಪ್ರಾಾರಂಭಕ್ಕೆೆ ಗ್ರೀೀನ್ಸಿಗ್ನಲ್ ನೀಡಿದರು.
ಈ ಕುರಿತು ಸಹಜವಾಗಿಯೇ ಹಾಲಿ ಶಾಸಕ ನಾರಾ ಭರತರೆಡ್ಡಿಿ ಅವರು, ‘ನನ್ನ ಪ್ರಯತ್ನದ ಕಾರಣ ನಾಲ್ಕು ಎಕರೆ ಪ್ರದೇಶದಲ್ಲಿ ಸಾಮೂಹಿಕ ತ್ಯಾಾಜ್ಯ ನೀರು ಸಂಸ್ಕರಣಾ ಘಟಕವನ್ನು ಶೀಘ್ರದಲ್ಲಿಯೇ ಪ್ರಾಾರಂಭಿಸಲಾಗಿದೆ. ಪರಿಸರ ಮತ್ತು ಉದ್ಯಮವನ್ನು ಒಟ್ಟಿಿಗೇ ಸಮಾನಾಂತರವಾಗಿ ಆದ್ಯತೆ ನೀಡಿ ನಿರ್ವಹಣೆ ಮಾಡಲಾಗುತ್ತದೆ. ಪರಿಸರಕ್ಕೆೆ ಧಕ್ಕೆೆ ಆದಲ್ಲಿ ವಾಷಿಂಗ್ ಘಟಕಗಳಿಗೆ ಬೆಂಬಲ ನೀಡುವುದಿಲ್ಲ. ಜೀನ್ಸ್ ಅಪಾರಲ್ ಅನ್ನು ಶೀಘ್ರದಲ್ಲೇ ಉದ್ಘಾಾಟಿಸಲಾಗುತ್ತದೆ’ ಎಂದರು.
ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿಿ ಅವರು, ‘ರಾತ್ರೋೋರಾತ್ರಿಿ ಜೀನ್ಸ್ ವಾಷಿಂಗ್ ಘಟಕಗಳಿಗೆ ಮುಚ್ಚಲು ಆದೇಶ ನೀಡಿ, ಅಧಿಕಾರಿಗಳು ಮತ್ತು ಶಾಸಕರ ಪರವಾಗಿರುವವರು ವಾಷಿಂಗ್ ಘಟಕಗಳ ಮಾಲೀಕರು – ಸಿಬ್ಬಂದಿಗಳ ಸಭೆಗಳನ್ನು ನಡೆಸಿ, ಒಗ್ಗೂಡಿಸಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಿ ಜೊತೆಯಲ್ಲಿ ಸಭೆ ನಡೆಸಿ, 22 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿರುವುದು, ರಾಜಕೀಯ. ಅಷ್ಟೇ ಅಲ್ಲ, ಈ ಕುರಿತು ನಾವು ಪತ್ರಿಿಕಾಗೋಷ್ಠಿಿ ನಡೆಸುವ ಮುನ್ಸೂಚನೆ ಪಡೆದು, ಶಾಸಕರೂ ಈ ಕುರಿತು ಪತ್ರಿಿಕಾಗೋಷ್ಠಿಿ ಏರ್ಪಡಿಸಿರುವುದು ಅಚ್ಚರಿ ಮೂಡಿಸುತ್ತಿಿದೆ’ ಎಂದು ಟೀಕಿಸಿದರು.
ಶಾಸಕ ನಾರಾ ಭರತರೆಡ್ಡಿಿ ಅವರು, ‘ನಾವು, ಶೀಘ್ರದಲ್ಲೇ ಸಾಮೂಹಿಕ ತ್ಯಾಾಜ್ಯ ನೀರು ಸಂಸ್ಕರಣ ಘಟಕವನ್ನು ವಾಷಿಂಗ್ ಘಟಕಗಳ ಸಂಘದ ಪದಾಧಿಕಾರಿಗಳಿಗೆ ನಿರ್ವಹಣೆಗೆ ನೀಡುತ್ತೇವೆ. ನಾವು, ರಾಜಕೀಯ ಮಾಡುತ್ತಿಿಲ್ಲ’ ಎಂದರು.
ಬಿಜೆಪಿ ಮತ್ತು ಕಾಂಗ್ರೆೆಸ್ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.

