ಸುದ್ದಿಮೂಲ ವಾರ್ತೆ ರಾಯಚೂರು, ನ.21:
ಮನುಷ್ಯ ಅನೇಕ ಪದವಿಗಳನ್ನು ಪಡೆದಾಗಲೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ಆ ಪದವಿಗಳಿಗೆ ಅರ್ಥವೇ ಇಲ್ಲ ಎಂದು ಮಾಜಿ ಸಚಿವ ಕೆ ಶಿವನಗೌಡ ನಾಯಕ ಅಭಿಪ್ರಾಾಯ ವ್ಯಕ್ತಪಡಿಸಿದರು.
ರಾಯಚೂರಿನ ಮಾರುತಿ ನಗರದ ಶ್ರೀಗಿರಿ ಅಭಯಾಂಜನೇಯ ಸ್ವಾಾಮಿ ದೇವಸ್ಥಾಾನದಲ್ಲಿ ಆಯೋಜಿಸಿದ 48ನೇ ಶರಣ ಚಿಂತನ ಶಿವಾನುಭವ ಗೋಷ್ಠಿಿಯ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ಶರಣರು ತಮ್ಮ ಕಾಯಕದ ಜೊತೆಯಲ್ಲಿ ಸಮಾಜದ ಅಂಕುಡೊಂಕು ತಿದ್ದುವ ಮೂಲಕ, ಜಾತಿ ಮತಗಳ ಮೌಢ್ಯ ಸಂಪ್ರದಾಯ ಕಿತ್ತೊೊಗೆದು ಸಮ ಸಮಾಜವನ್ನು ಕಟ್ಟುವ ಪ್ರಾಾಮಾಣಿಕ ಪ್ರಯತ್ನ ಮಾಡಿದರು. ಬಸವಾದಿ ಶರಣರು ಎಲ್ಲಿಯೂ ಹಿರಿಯರೆಂದು ಹೇಳಿಕೊಳ್ಳದೆ ಕಿರಿಯನೆಂದು ಹೇಳಿಕೊಳ್ಳುತ್ತಾಾರೆ ಅಷ್ಟೇ ಅಲ್ಲದೆ ಅವರ ಒಂದೊಂದು ವಚನದಲ್ಲಿಯೂ ಒಂದೊಂದು ಪ್ರಬಂಧ ಮಂಡಿಸುವಷ್ಟು ಆ ವಿಷಯಗಳು ವಚನಗಳಲ್ಲಿವೆ. ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಮಾನವರಲ್ಲಿ ಮನುಷ್ಯತ್ವ ಬಿಟ್ಟು ಮಾನವೀಯತೆ ಮರೆಯಾಗುತ್ತಿಿರುವುದು ವಿಪರ್ಯಾಸ. ನಾವು ಮಕ್ಕಳಿಗೆ ವಿದ್ಯೆೆ ಬುದ್ಧಿಿ ಕಲಿಸಿದ್ದಕ್ಕಿಿಂತ ಹೆಚ್ಚಾಾಗಿ ಸಂಸ್ಕಾಾರ ಹಾಗೂ ಮಾನವೀಯ ಮೌಲ್ಯದ ಬೀಜಗಳನ್ನು ಬಿತ್ತಬೇಕಾಗಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ರಮೇಶ ಬಾಬು ಯಾಳಗಿ ಶರಣ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಕುರಿತು ಮಾತನಾಡಿ, ಇಂದು ಮಾನವ ಮಾನವೀಯ ಮೌಲ್ಯಗಳನ್ನು ಮರೆಯುತ್ತಿಿದ್ದಾನೆ ಮಾನವ ಇದರ ಅರ್ಥ ಮಾ ಎಂದರೆ ತಾಯಿ , ಮಾನ ಎಂದರೆ ಶೀಲ, ನಾ ಎಂದರೆ ಸಮಯ ಪ್ರಜ್ಞೆ, ನವ ಎಂದರೇ ಹೊಸದನ್ನ ಸೃಷ್ಟಿಿಸುವುದು ಎಂದು ವಿವರಿಸಿದ ಯಾಳಗೀರವರು ಶರಣರ ಒಂದೊಂದು ವಚನಗಳನ್ನ ತಮ್ಮ ಸುಶ್ರಾಾವ್ಯ ಕಂಠದಿಂದ ಸುಮಧುರವಾಗಿ ಹಾಡುವುದರ ಜೊತೆಗೆ ಅದರ ಒಳಾರ್ಥವನ್ನು ವಿವರಿಸಿದರು.
ಕಡೆಚೂರಿನ ಶ್ರೀ ಗುರುಮೂರ್ತಿ ಮಹಾಸ್ವಾಾಮೀಜಿ ಸಾನ್ನಿಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ನಾವೆಲ್ಲ ಮಾನವರು ಎಂಬ ಮನೋಭಾವ ಈ ಕಾರ್ಯಕ್ರಮದಿಂದ ಸಾಬೀತುಪಡಿಸಿದ್ದಾರೆ. ಶರಣರ ಒಂದೊಂದು ವಚನ ಮಕ್ಕಳಿಗೆ ತಿಳಿಸಿ ಅವರಿಗೆ ಉತ್ತಮ ಸಂಸ್ಕಾಾರವನ್ನ ಬೆಳೆಸಬೇಕೆಂದು ಸಲಹೆ ನೀಡಿದರು
ದೇವಸ್ಥಾಾನ ಸಮಿತಿ ಅಧ್ಯಕ್ಷ ಬಿ.ಬಸವರಾಜ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ್ ಕಾರ್ಯದರ್ಶಿ ಬಸವರಾಜ್ ಭೋಗಾವತಿ ಸೇರಿ ಹಲವರಿಗೆ ಸನ್ಮಾಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾಾರ, ದೇವದುರ್ಗ ಬಿಜೆಪಿ ಅಧ್ಯಕ್ಷ ಶರಣಬಸವ ಜೋಳದೆಡಗಿ, ಗ್ಯಾಾರಂಟಿ ಅನುಷ್ಠಾಾನ ಸಮಿತಿ ಉಪಾಧ್ಯಕ್ಷ ಹನುಮಂತಪ್ಪ ಜಾಲಬೆಂಚಿ, ತಿಮ್ಮಾಾರೆಡ್ಡಿಿ ಪತ್ತೆೆಪೂರ,ಜನಾರ್ಧನ್ ರೆಡ್ಡಿಿ, ಉಮಾ ವೀರೇಶ್ ಎಂ. ರಾಜಶೇಖರ ದಿನ್ನಿಿ ಸೇರಿ ಹಲವರು ಉಪಸ್ಥಿಿತರಿದ್ದರು.
ಸಂಸ್ಕಾಾರ, ಮನುಷ್ಯತ್ವವಿಲ್ಲದ ಪದವಿಗಳಿಗೆ ಆರ್ಥ ಇಲ್ಲ -ಶಿವನಗೌಡ ನಾಯಕ

