ಸುದ್ದಿಮೂಲ ವಾರ್ತೆ ಕಲಬುರಗಿ, ನ.21:
ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಾಂಕ್ ನ ಅಧ್ಯಕ್ಷರಾಗಿ ಸುರುಪುರದ ವಿಠಲ ವೆಂಕಣ್ಣ ಯಾದವ ಹಾಗೂ ಉಪಾಧ್ಯಕ್ಷರಾಗಿ ಸೇಡಂ ತಾಲೂಕಿನ ಶಂಕರ ಭೂಪಾಲ ಚಂದ್ರಶೇಖರ ಅವಿರೋಧವಾಗಿ ಆಯ್ಕೆೆಯಾದರು.
ಶುಕ್ರವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾಾನಕ್ಕೆೆ ವಿಠಲ ಯಾದವ ಹಾಗೂ ಉಪಾಧ್ಯಕ್ಷ ಸ್ಥಾಾನಕ್ಕೆೆ ಶಂಕರ ಭೂಪಾಲ ಚಂದ್ರಶೇಖರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆೆ ಘೋಷಣೆ ಮಾಡಲಾಯಿತು. ಈ ಮೂಲಕ ಡಿಸಿಸಿ ಬ್ಯಾಾಂಕ್ ನ ಆಡಳಿತದ ಚುಕ್ಕಾಾಣಿ ಮತ್ತೆೆ ಕಾಂಗ್ರೆೆಸ್ ಪಡೆಯಿತು.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಕಾಂಗ್ರೆೆಸ್ ಅಧ್ಯಕ್ಷರಾಗಿರುವ ಎಂಎಲ್ಸಿ ಜಗದೇವ ಗುತ್ತೇದಾರ ಸೇರಿದಂತೆ ಇತರರ ಪ್ರಮುಖರು ಬ್ಯಾಾಂಕ್ ನ ನಿರ್ದೇಶಕರರೊಂದಿಗೆ ಸಭೆ ನಡೆಸಿ, ಜತೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಿಯಾಂಕ್ ಖರ್ಗೆ ಅವರೊಂದಿಗೆ ಸಮಾಲೋಚನೆ ನಡೆಸಿ ವಿಠಲ ಯಾದವ ಹಾಗೂ ಶಂಕರ ಭೂಪಾಲ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಹೀಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾಾನಕ್ಕೆೆ ಒಂದೊಂದು ಮಾತ್ರ ನಾಮಪತ್ರ ಸಲ್ಲಿಸಲಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್ ನಾಮಪತ್ರ ಸಲ್ಲಿಸಿರಲಿಲ್ಲ. ಬಿಜೆಪಿ ಎರಡು ಹಾಗೂ ಜೆಡಿಎಸ್ ತಲಾ ಒಂದು ನಿರ್ದೇಶಕ ಬಲಾಬಲ ಹೊಂದಿದೆ.
ಈ ಬಾರಿ ಯಾದಗಿರಿ ಜಿಲ್ಲೆಗೆ ಅಧ್ಯಕ್ಷ ಸ್ಥಾಾನ ದೊರಕಿಸಿ ಕೊಡಬೇಕೆಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಒತ್ತಡ ಹಾಕಿದ್ದರಿಂದ ಅದರಲ್ಲೂ ವಿಠಲ ಯಾದವ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಅಪ್ತರಾಗಿರುವುದರಿಂದ ಜತೆಗೆ ಈ ಹಿಂದೆ ಬ್ಯಾಾಂಕ್ನ ನಿರ್ದೇಶಕರಾಗಿ ಅಪೆಕ್ಸ್ ಬ್ಯಾಾಂಕ್ ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದನ್ನು ಪರಿಗಣಿಸಿ ವಿಠಲ ಯಾದವ್ ಅವರನ್ನು ಆಯ್ಕೆೆಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಡಿಸಿಸಿ ಬ್ಯಾಾಂಕ್ನ ನೂತನ ಅಧ್ಯಕ್ಷರಾಗಿ ಆಯ್ಕೆೆಯಾದ ನಂತರ ಮಾತನಾಡಿದ ವಿಠಲ ಯಾದವ ಅವರು, ಬ್ಯಾಾಂಕ್ ನ ಆರ್ಥಿಕ ಸುಧಾರಣೆಗೆ ಒತ್ತು ನೀಡಲಾಗುವುದು. ಅದಲ್ಲದೆ ಹೊಸ ಸಾಲಕ್ಕೆೆ ಆದ್ಯತೆ ನೀಡುವುದಾಗಿ ತಿಳಿಸಿದರು. ಕೆಕೆಆರ್ಡಿಬಿ ಅಧೀನ ಕಾರ್ಯದರ್ಶಿ ಪ್ರಕಾಶ ಕುದರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಕೆವೈಡಿಸಿಸಿ ಬ್ಯಾಾಂಕ್ ಅಧ್ಯಕ್ಷರಾಗಿ ವಿಠಲ ಯಾದವ, ಉಪಾಧ್ಯಕ್ಷರಾಗಿ ಶಂಕರ ಭೂಪಾಲ ಅವಿರೋಧ ಆಯ್ಕೆೆ

