ಸುದ್ದಿಮೂಲ ವಾರ್ತೆ ಮೈಸೂರು, ನ.21:
ಡೈರಿ ಸರ್ಕಲ್ ಮೇಲ್ಸೇತುವೆ ರಸ್ತೆೆಯಲ್ಲಿ ಬುಧವಾರ ಹಾಡಹಗಲೇ ನಡೆದಿದ್ದ ಎಟಿಎಂ ವಾಹನದಲ್ಲಿನ 7.11ಕೋಟಿ ದರೋಡೆ ಪ್ರಕರಣವನ್ನು ಬಂಧಿಸುವಲ್ಲಿ ಬಹುತೇಕ ಯಶಸ್ವಿಿಯಾಗಿರುವ ನಗರ ಪೊಲೀಸರು ಇಲ್ಲಿವರೆಗೆ ಐವರನ್ನು ಬಂಧಿಸಿ 5.3 ಕೋಟಿ ಹಣವನ್ನು ವಶಕ್ಕೆೆ ಪಡೆದುಕೊಂಡಿದ್ದಾರೆ.ಗೋವಿಂದಪುರ ಪೊಲೀಸ್ ಠಾಣೆಯ ಪೇದೆ ಅಣ್ಣಪ್ಪ ನಾಯ್ಕ್ ದರೋಡೆ ಪ್ರಕರಣ ಕಿಂಗ್ ಪಿನ್ ಆಗಿರುವುದು ತನಿಖೆಯಲ್ಲಿ ಪತ್ತೆೆಯಾಗಿದ್ದು, ಆತನನ್ನೂ ಬಂಧಿಸಲಾಗಿದೆ. ಚಿತ್ತೂರು ಬಳಿ ಕೃತ್ಯಕ್ಕೆೆ ಬಳಸಿದ ಇನ್ನೋೋವಾ ಕಾರು ಬಿಟ್ಟು ಹಣದೊಂದಿಗೆ ಪರಾರಿಯಾಗಿದ್ದ ದುಷ್ಕರ್ಮಿಗಳು ತಮಿಳುನಾಡಿನ ಚೆನ್ನೈನಲ್ಲಿ ಪತ್ತೆೆಯಾಗಿದ್ದು, ಅವರಿಂದ 5.3 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ದರೋಡೆ ಕೇಸ್ ಸಂಬಂಧ ಒಬ್ಬೊೊಬ್ಬರಂತೆ ಇಲ್ಲಿಯವರೆಗೆ ಐವರನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಳ್ಳಲಾಗಿದೆ. ಇಡೀ ದರೋಡೆಯ ಮಾಸ್ಟರ್ಮೈಂಡ್ ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್ ಆಗಿರುವುದು ತನಿಖೆಯಲ್ಲಿ ಕಂಡುಬಂದಿದೆ. ದರೋಡೆಗೆ ಯುವಕರನ್ನು ಸಿದ್ದಪಡಿಸಿ ಗ್ಯಾಾಂಗ್ ಕಟ್ಟಿಿ ಕೃತ್ಯದಲ್ಲಿ ಎಲ್ಲೂ ಕಾಣಿಸಿಕೊಳ್ಳದೇ ರೂಟ್ ಮ್ಯಾಾಪ್ ತಯಾರಿಸಿದ್ದು ಕ್ರೈಂ ವಿಭಾಗದಲ್ಲಿ ಕೆಲಸಮಾಡುತ್ತಿಿದ್ದ ಪೇದೆ ಅಣ್ಣಪ್ಪ ನಾಯ್ಕ ಆಗಿದ್ದಾನೆ ಎಂಬ ವಿಚಾರ ಪ್ರಾಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಕಮ್ಮನಹಳ್ಳಿಿ, ಕಲ್ಯಾಾಣನಗರ ಹುಡುಗರ ಗ್ಯಾಾಂಗ್ ತಯಾರು ಮಾಡಿದ್ದ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್, ದರೋಡೆ ಕುರಿತು ಪಕ್ಕಾಾ ತರಬೇತಿ ನೀಡಿದ್ದರು. ಹೇಗೆ ರಾಬರಿ ಮಾಡಬೇಕು? ಹೇಗೆ ತಪ್ಪಿಿಸಿಕೊಳ್ಳಬೇಕೆಂದು ತರಬೇತಿಯನ್ನೂ ಕೊಟ್ಟಿಿದ್ದರು. ಪೊಲೀಸರು ಹೇಗೆ ಕೆಲಸ ಮಾಡುತ್ತಾಾರೆಂದು ಸಹ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಕಮ್ಮನಹಳ್ಳಿಿ, ಕಲ್ಯಾಾಣನಗರ ಹುಡುಗರ ತಂಡವೇ 7.11 ಕೋಟಿ ರೂ. ದರೋಡೆ ಮಾಡಿದೆ.
ಅಲ್ಲದೆ ಸಿಎಂಎಸ್ ಸೆಕ್ಯೂರಿಟಿ ಎಜೆನ್ಸಿಿಯ ಮಾಜಿ ಉದ್ಯೋೋಗಿಗಳು ದರೋಡೆಗೆ ಸಾಥ್ ಕೊಟ್ಟಿಿದ್ದರು ಎಂದು ತಿಳಿದುಬಂದಿದೆ. ದರೋಡೆ ಕೃತ್ಯವು ನಗರವಲ್ಲದೇ ರಾಜ್ಯದ ಜನತೆಯನ್ನು ಬೆಚ್ಚಿಿ ಬೀಳಿಸಿತ್ತು. ಬಾಣಸವಾಡಿಯ ಕಲ್ಯಾಾಣ ನಗರದ ದರೋಡೆ ಗ್ಯಾಾಂಗ್ನ ಇಬ್ಬರು ಸೇರಿ ಇಲ್ಲಿಯವರೆಗೆ ಬಂಧಿತರ ಸಂಖ್ಯೆೆ ಐದಕ್ಕೇರಿದೆ.

