ಸುದ್ದಿಮೂಲ ವಾರ್ತೆ ರಾಯಚೂರು, ನ.21:
ಕರ್ನಾಟಕ ಪಬ್ಲಿಿಕ್ ಶಾಲೆ ಮ್ಯಾಾಗ್ನೆೆಟ್ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಆಗ್ರಹಿಸಿ ರಾಯಚೂರಿನಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾಾರ್ಥಿಗಳು ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಟಿಪ್ಪುು ಸುಲ್ತಾಾನ್ ಉದ್ಯಾಾನದವರೆಗೂ ಪ್ರತಿಭಟನಾ ರ್ಯಾಾಲಿಯಲ್ಲಿ ಆಗಮಿಸಿದ ವಿದ್ಯಾಾರ್ಥಿಗಳು ಸರ್ಕಾರದ ಬಡ ಜನರ ಶಿಕ್ಷಣ ಕಸಿಯುವ ಹುನ್ನಾಾರದ ವಿರುದ್ಧ ಆಕ್ರೋೋಶ ವ್ಯಕ್ತಪಡಿಸುತ್ತ ಆಗಮಿಸಿದರು.
ಪ್ರತಿಭಟನಾ ಧರಣಿಯಲ್ಲಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಲ್ಯಾಾಣ ಕುಮಾರ ಮಾತನಾಡಿ ಕೆಪಿಎಸ್-ಮ್ಯಾಾಗ್ನೆೆಟ್ ಯೋಜನೆಯಡಿ 700 ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದೆ. ಆದರೆ, ಮ್ಯಾಾಗ್ನೆೆಟ್ ಶಾಲೆಯ 3 ರಿಂದ 5 ಕಿಲೋ ಮೀಟರವ್ಯಾಾಪ್ತಿಿಯ ಶಾಲೆಗಳನ್ನು ಈ ಶಾಲೆಗಳಲ್ಲಿ ಸಮ್ಮಿಿಳಿತಗೊಳಿಸುವುದಕ್ಕೆೆ ಆದೇಶಿಸಿದೆ ಎಂದು ಆಪಾದಿಸಿದರು.
ಈಗಾಗಲೇ ಈ ಮಾದರಿಯಲ್ಲಿ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಶಾಲೆಯನ್ನು ಮ್ಯಾಾಗ್ನೆೆಟ್ ಶಾಲೆಯೆಂದು ಗುರುತಿಸಲಾಗಿದೆ ಎಂದು ಉದಾಹರಣೆ ನೀಡಿದರು.
ಇದೇ ರೀತಿ ರಾಜ್ಯದ ಸಾವಿರಾರು ಶಾಲೆಗಳು ವಿಲೀನಗೊಳಿಸುವ ಹುನ್ನಾಾರ ನಡೆದಿದ್ದು ಹೀಗಾದಲ್ಲಿ ಸರ್ಕಾರಿ ಪದವಿ ಕಾಲೇಜು ಸೇರಿದಂತೆ 40 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿಿಹೋಗುವ ಅಪಾಯಕ್ಕೆೆ ತುತ್ತಾಾಗುತ್ತವೆ ಎಂದು ದೂರಲಾಯಿತು.
6ನೇ ತರಗತಿಯಿಂದಲೇ ವೃತ್ತಿಿ ಶಿಕ್ಷಣ ನೀಡುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷೆ ಸೇರಿದಂತೆ ಮೂಲ ವಿಷಯಗಳ ಜ್ಞಾನಾರ್ಜನೆಗೆ ಇದು ಧಕ್ಕೆೆ ಉಂಟು ಮಾಡುತ್ತದೆ. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 60 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು, ಏಕೋಪಾಧ್ಯಾಾಯ 7 ಸಾವಿರ ಶಾಲೆಗಳಲ್ಲಿ ಹೆಚ್ಚಿಿನ ಶಿಕ್ಷಕರ ನಿಯೋಜಿಸಬೇಕು, 22 ಸಾವಿರಕ್ಕೂ ಅಧಿಕ ಶಾಲೆಗಳ ಕಟ್ಟಡ ದುರಸ್ತಿಿ ಮಾಡಬೇಕು, 3500ಕ್ಕೂ ಅಧಿಕ ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯ ವ್ಯವಸ್ಥೆೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಪದಾಧಿಕಾರಿಗಳಾದ ನಂದಗೋಪಾಲ್, ಶಿವಕುಮಾರ, ಶ್ರೀಕಾಂತ್, ವೀರೇಶ್,ಸಮೀರ, ಜಿ.ಬಸವರಾಜ್ ಸೇರಿ ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ಕೆಪಿಎಸ್ ಮ್ಯಾಾಗ್ನೇಟ್ ಹೆಸರಲ್ಲಿ ಶಾಲೆ ಮುಚ್ಚದಿರಲು ಆಗ್ರಹ

