ಸುದ್ದಿಮೂಲ ವಾರ್ತೆ ಬೀದರ್, ನ.22:
ಬೀರ್ದ ದಕ್ಷಿಣ ಕ್ಷೇತ್ರ ಸೇರಿದಂತೆ ಬೀದರ್, ಬಸವಕಲ್ಯಾಾಣ, ಹುಲಸೂರು, ಹುಮನಾಬಾದ್ ತಾಲ್ಲೂಕಿನ ರೈತರಿಗೆ ತಕ್ಷಣ ಅತಿವೃಷ್ಟಿಿ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಬೇಕೆಂದು ಕ್ಷೇತ್ರದ ಶಾಸಕ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಾಳೆ ಒತ್ತಾಾಯಿಸಿದ್ದಾರೆ.
ಜಿಲ್ಲೆಯಲ್ಲಿ ಅತಿವೃಷ್ಟಿಿ ಬೆಳೆ ಹಾನಿ ಪರಿಹಾರ ಸಮರ್ಪಕವಾಗಿ ವಿತರಣೆ ಆಗುತ್ತಿಿಲ್ಲ. ಬೀದರ್, ಹುಮನಾಬಾದ್, ಬಸವಕಲ್ಯಾಾಣ, ಹುಲಸೂರು ತಾಲ್ಲೂಕಿನ ರೈತರ ಖಾತೆಗೆ ಹಣ ಜಮೆ ಆಗಿಲ್ಲ. ಈ ಬಗ್ಗೆೆ ಅನೇಕ ರೈತರು ಖುದ್ದು ಭೇಟಿಯಾಗಿ, ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ. ಜಿಲ್ಲಾಡಳಿತ ತಕ್ಷಣ ಈ ಕುರಿತು ಗಮನಹರಿಸಿ ಸಂತ್ರಸ್ತ ರೈತರ ಖಾತೆಗೆ ಪರಿಹಾರ ಹಣ ಜಮೆ ಮಾಡಬೇಕೆಂದು ಶನಿವಾರ ಹೊರಡಿಸಿರುವ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಬೀದರ್ ಜಿಲ್ಲೆಯ ಸುಮಾರು 1.80 ಲಕ್ಷ ರೈತರ ಖಾತೆಗೆ ಶೀಘ್ರವೇ ಮೊದಲ ಹಂತದ 140 ಕೋಟಿ ರೂ. ಬೆಳೆ ಹಾನಿ ಪರಿಹಾರ ಜಮೆಯಾಗಲಿದೆ. ಜಿಲ್ಲಾಡಳಿತ ಪರಿಹಾರ ವಿತರಣೆ ಪ್ರಕ್ರಿಿಯೆ ಆರಂಭಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಅವರು ಕಳೆದ ದಿ.29ರಂದು ಹೇಳಿದ್ದರು. ಆದರೆ ಈವರೆಗೆ ಅನೇಕ ರೈತರಿಗೆ ಪರಿಹಾರ ಬಂದಿಲ್ಲ. ಹೆಚ್ಚು ರೈತರು ಪರಿಹಾರಕ್ಕಾಾಗಿ ಕಾಯುತ್ತಿಿದ್ದಾರೆ. ಸಮಸ್ಯೆೆಯಲ್ಲಿರುವ ರೈತರಿಗೆ ಬೇಗ ನೆರವಾಗುವ ಕಾರ್ಯಕ್ಕೂ ಇಷ್ಟೊೊಂದು ವಿಳಂಬ, ನಿರ್ಲಕ್ಷ್ಯತೆ ವಹಿಸುತ್ತಿಿರುವುದು ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಘೋಷಿಸಿದಂತೆ ಹೆಕ್ಟೇರ್ಗೆ ಹೆಚ್ಚುವರಿ 8500 ರೂ. ಪರಿಹಾರ ಇನ್ನೂ ನೀಡುತ್ತಿಿಲ್ಲ. ಈಗ ನೀಡುತ್ತಿಿರುವ ಪರಿಹಾರ ಕೇಂದ್ರ ಸರ್ಕಾರದ ಎನ್ಡಿಆರ್ಎ್ ನಿಧಿಯ ಪರಿಹಾರವಾಗಿದೆ. ರಾಜ್ಯ ಸರ್ಕಾರ ಏನೂ ಕೊಟ್ಟಿಿಲ್ಲ. ಬೆಳೆ ನಷ್ಟದಿಂದ ರೈತ ಸಮೂಹ ಸಾಕಷ್ಟು ಸಂಕಷ್ಟದಲ್ಲಿ ಕಾಲ ಕಳೆಯುತ್ತಿಿದೆ. ಇಂಥ ಸ್ಥಿಿತಿಯಲ್ಲೂ ಸರ್ಕಾರದ ಹೆಚ್ಚುವರಿ ಪರಿಹಾರ ಘೋಷಣೆಗಷ್ಟೇ ಸೀಮಿತಗೊಳಿಸಿರುವ ನೀತಿ ರೈತ ವಿರೋಧಿಯಾಗಿದೆ. ಪರಿಹಾರ ನೀಡಿಕೆಯಲ್ಲಿ ಆಗುತ್ತಿಿರುವ ವಿಳಂಬವನ್ನು ಗಮನಿಸಿದರೆ ರಾಜ್ಯ ಸರ್ಕಾರದ ಆರ್ಥಿಕ ಸ್ಥಿಿತಿ ಸರಿಯಿಲ್ಲ. ಗ್ಯಾಾರಂಟಿ ಅಬ್ಬರದಲ್ಲಿ ಖಜಾನೆ ಝಳಝಳವಾದಂತೆ ಕಾಣುತ್ತಿಿದೆ ಎಂದು ಶಾಸಕ ಡಾ. ಬೆಲ್ದಾಾಳೆ ಟೀಕಿಸಿದ್ದಾರೆ.
ಕೊಟ್ಟ ಮಾತಿನಂತೆ ಸಚಿವರು ರೈತರಿಗೆ ಬರಬೇಕಾದ ಸುಮಾರು 280 ಕೋಟಿ ರೂ. ಬೆಳೆ ನಷ್ಟ ಪರಿಹಾರ ಕೂಡಲೇ ಬಿಡುಗಡೆ ಮಾಡಲು ಕ್ರಮ ಕೈಗೊಂಡು ನೊಂದ ರೈತರ ನೆರವಿಗೆ ಬರಬೇಕು. ಹೆಚ್ಚುವರಿ 8500 ರೂ. ಪರಿಹಾರ ಸಹ ತಕ್ಷಣ ರೈತರಿಗೆ ವಿತರಿಸಬೇಕು. ನಮ್ಮಲ್ಲಿ ಈಗ ಡಿಬಿಟಿ ವ್ಯವಸ್ಥೆೆ ಇರುವ ಕಾರಣ ಎಲ್ಲ ರೈತರ ಖಾತೆಗೆ ಏಕಕಾಲಕ್ಕೆೆ ಪರಿಹಾರ ಹಣ ಜಮೆ ಮಾಡಬೇಕು. ತಾಲ್ಲೂಕು ನಡುವೆ ತಾರತಮ್ಯ ಮಾಡಬಾರದು. ಜಿಲ್ಲಾಡಳಿತ ಸಹ ಈ ವಿಷಯ ಗಂಭೀರವಾಗಿ ಪರಿಗಣಿಸಬೇಕು. ಬೇಗ ಹಣ ಜಮಾ ಆಗದಿದ್ದರೆ ರೈತರೊಂದಿಗೆ ಸೇರಿ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

