ಸುದ್ದಿಮೂಲ ವಾರ್ತೆ ಬೆಂಗಳೂರು, ನ.22:
ರಾಜ್ಯ ಕಾಂಗ್ರೆೆಸ್ನಲ್ಲಿ ಅಧಿಕಾರ ಹಂಚಿಕೆಯ ಕದನ ಬಿರುಸಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುರ್ಮಾ ಬಣಗಳು ಪೈಪೋಟಿಗೆ ಇಳಿದಿರುವಾಗಲೇ ಹೈಕಮಾಂಡ್ ತನ್ನ ನಿರ್ಧಾರವನ್ನು ಇನ್ನೂ ಸ್ಪಷ್ಟವಾಗಿ ತಿಳಿಸದೆ ಇನ್ನೂ ನಿಗೂಢ ಕಾಯ್ದುಕೊಂಡಿರುವುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿಿ ಸಿದ್ದರಾಮಯ್ಯ ’ಮುಂದೆಯೂ ನಾನೇ ಸಿಎಂ’ ಎಂದು ಪುನರುಚ್ಚರಿಸಿರುವುದು, ಇದಕ್ಕೆೆ ಪ್ರತಿಯಾಗಿ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ’ವಿಶ್ ಯು ಆಲ್ ದಿ ಬೆಸ್ಟ್’ ಎಂದು ಹೇಳಿರುವುದು ಅಧಿಕಾರ ಹಂಚಿಕೆ ಕದನದ ಜ್ವಾಾಲೆಗೆ ತುಪ್ಪ ಸುರಿದಂತಾಗಿದೆ. ಹಾಗಾಗಿ ಹೈಕಮಾಂಡ್ ಸಹ ಈಗ ಮಧ್ಯೆೆ ಪ್ರವೇಶಿಸುವ ಅನಿವಾರ್ಯ ಪರಿಸ್ಥಿಿತಿ ಸೃಷ್ಟಿಿಯಾಗಿದೆ. ಅಧಿಕಾರ ಹಂಚಿಕೆಯ ಕಗ್ಗಂಟಿಗೆ ಹೈಕಮಾಂಡ್ ಯಾವ ರೀತಿ ಮದ್ದು ಅರೆಯುತ್ತದೆ, ಯಾವ ಸೂತ್ರಗಳನ್ನು ರೂಪಿಸುತ್ತದೆ ಎಂಬುದು ಈಗ ಕೌತುಕ ಮೂಡಿಸಿದೆ.
ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಅಧಿಕಾರ ಹಂಚಿಕೆಯ ಬಿಕ್ಕಟ್ಟು ತೀವ್ರವಾಗಿದ್ದು, ಇದು ದಿನದಿಂದ ದಿನಕ್ಕೆೆ ತೀವ್ರವಾಗುತ್ತಿಿದೆ. ಹೈಕಮಾಂಡ್ ಮೇಲೆ ಒತ್ತಡ ತರುವ ಉದ್ದೇಶದಿಂದ ದೆಹಲಿಗೆ ತೆರಳಿದ್ದ ಡಿ.ಕೆ. ಶಿವಕುಮಾರ್ ಬೆಂಬಲಿಗ ಶಾಸಕರು ಇಂದು ಬೆಂಗಳೂರಿಗೆ ಮರಳಿದ್ದಾರೆ. ಇತ್ತ ಬೆಂಗಳೂರಿನಲ್ಲಿಯೂ ಸಹ ಸಿಎಂ ಮತ್ತು ಡಿಸಿಎಂ ಬಣದ ಸಚಿವರು ಹಾಗೂ ಶಾಸಕರು ನಿರಂತರ ಸಭೆಗಳನ್ನು ನಡೆಸುವ ಮೂಲಕ ರಾಜಕೀಯ ಕುತೂಹಲಕ್ಕೆೆ ಕಾರಣವಾಗಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಬಣ ರಾಜಕಾರಣ ಸ್ಪಷ್ಟವಾಗಿ ಕಾರ್ಯನಿರ್ವಹಿಸುತ್ತಿಿರುವುದರಿಂದ ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಿಯಿಂದ ಹೈಕಮಾಂಡ್ ಒಂದು ಸ್ಪಷ್ಟ ನಿರ್ಧಾರಕ್ಕೆೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಿಯಾಗಿದೆ. ಹಾಗಾಗಿ ಹೈಕಮಾಂಡ್ನ ನಡೆಯತ್ತ ಎಲ್ಲರ ಚಿತ್ತ ನೆಟ್ಟಿಿದ್ದು, ಅಧಿಕಾರ ಹಂಚಿಕೆಯ ವಿಚಾರದಲ್ಲಿ ಹೈಕಮಾಂಡ್ನ ಯಾವ ತೀರ್ಮಾನ ಕೈಗೊಳ್ಳುತ್ತೆೆ ಎಂಬುದರ ಮೇಲೆ ರಾಜ್ಯದ ಮುಂದಿನ ರಾಜಕೀಯ ವಿದ್ಯಮಾನಗಳು ನಿಂತಿವೆ.
ಖರ್ಗೆ ನಿವಾಸಕ್ಕೆೆ ನಿರಂತರ ಭೇಟಿ:
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿಯೇ ಇದ್ದಾರೆ. ಸದಾಶಿವನಗರದ ಅವರ ನಿವಾಸಕ್ಕೆೆ ಸಚಿವರು, ಶಾಸಕರು, ಪಕ್ಷದ ಮುಖಂಡರುಗಳು ನಿರಂತರವಾಗಿ ಭೇಟಿ ಮಾಡುತ್ತಿಿದ್ದಾರೆ. ತಮ್ಮ ತಮ್ಮ ನಾಯಕರ ಪರ ಲಾಭಿಗೆ ಪ್ರಯತ್ನ ಮಾಡುತ್ತಿಿದ್ದಾರೆ. ಖರ್ಗೆಯವರು ಎಲ್ಲರ ನಡೆಯನ್ನೂ ಮೌನದಿಂದ ವೀಕ್ಷಿಸುತ್ತಿಿದ್ದಾರೆ.
ಶುಕ್ರವಾರ ರಾತ್ರಿಿಯೇ ಡಿಕೆಶಿ ಭೇಟಿ
ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ತಡರಾತ್ರಿಿ ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಅಧಿಕಾರ ಹಂಚಿಕೆಯ ಸೂತ್ರ ಜಾರಿಗೆ ಒತ್ತಡ ಹೇರಿದ್ದಾರೆ. ಇವರ ಜತೆಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಡಿಕೆಶಿ ಬಣದ ಹಲವು ಶಾಸಕರು ಸಹ ಖರ್ಗೆಯವರನ್ನು ಭೇಟಿ ಮಾಡಿ ಅಧಿಕಾರ ಹಂಚಿಕೆಯ ಗೊಂದಲ ಬಗೆಹರಿಸುವಂತೆ ಕೋರಿದ್ದಾರೆ ಎಂದು ಹೇಳಲಾಗಿದೆ.
ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಪರಸ್ಪರ ಸ್ಪರ್ಧೆಗೆ ಇಳಿದಿರುವ ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತು ಡಿಕೆಶಿಯವರ ಅಹವಾಲನ್ನು ಆಲಿಸುವ ಖರ್ಗೆಯವರು ಸ್ವಲ್ಪ ದಿನ ಸುಮ್ಮನಿರುವಂತೆ ಇಬ್ಬರಿಗೂ ಸಲಹೆ ಮಾಡುವ ಸಾಧ್ಯತೆ ಇದ್ದು, ಕಾಂಗ್ರೆೆಸ್ ವರಿಷ್ಠ ರಾಹುಲ್ಗಾಂಧಿಯವರ ಜತೆ ಚರ್ಚಿಸಿದ ನಂತರವೇ ಅಧಿಕಾರ ಹಂಚಿಕೆಯ ಬಗ್ಗೆೆ ಒಂದು ತೀರ್ಮಾನ ಪ್ರಕಟಿಸುವರು ಎಂದು ಹೇಳಲಾಗಿದೆ.
———————
ನಂಬರ್ ಗೇಮ್ ಆರಂಭ
ಅಧಿಕಾರ ಹಂಚಿಕೆಯ ಪೈಪೋಟಿ ತಾರಕಕ್ಕೇರಿರುವಾಗಲೇ ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ನಂಬರ್ಗೇಮ್ ಆರಂಭಿಸಿದ್ದು, ಯಾರ್ಯಾರಿಗೆ ಎಷ್ಟೆೆಷ್ಟು ಶಾಸಕರ ಬೆಂಬಲವಿದೆ ಎಂಬ ಪಟ್ಟಿಿಯನ್ನು ಹೈಕಮಾಂಡ್ಗೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿಿದೆ.
ಬೆಂಗಳೂರಿನಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಈ ಇಬ್ಬರು ನಾಯಕರು ತಮ್ಮ ತಮ್ಮ ಬೆಂಬಲಿತ ಶಾಸಕರ ಪಟ್ಟಿಿಯನ್ನು ಸಲ್ಲಿಸಲು ಮುಂದಾಗಿದ್ದು, ಇಬ್ಬರು ನಾಯಕರು ಹೆಚ್ಚಿಿನ ಶಾಸಕರ ಬೆಂಬಲ ತಮಗಿದೆ ಎಂಬುದನ್ನು ಹೈಕಮಾಂಡ್ಗೆೆ ಗಮನಕ್ಕೆೆ ತರಲು ಮುಂದಾಗಿದ್ದಾರೆ.
ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಈಗಾಗಲೇ ತಮ್ಮ ಬೆಂಬಲಿತ ಶಾಸಕರ ಪಟ್ಟಿಿಯನ್ನು ಗೌಪ್ಯವಾಗಿ ಇರಿಸಿದ್ದು, ಮುಖ್ಯಮಂತ್ರಿಿ ಸಿದ್ದರಾಮಯ್ಯ ಬಣ ಸಹ ತಮಗಿರುವ ಶಾಸಕರ ಬೆಂಬಲದ ಪಟ್ಟಿಿಯನ್ನು ಸಿದ್ದ ಮಾಡುತ್ತಿಿದೆ ಎಂದು ಹೇಳಲಾಗುತ್ತಿಿದೆ.
————-
ಇಂದು ಸಿಎಂ-ಆಪ್ತ ಸಚಿವರ ಸಭೆ
ರಾಜ್ಯ ಕಾಂಗ್ರೆೆಸ್ನಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ನಡೆದು ಡಿ.ಕೆ. ಶಿವಕುಮಾರ್ ಬಣ ದೆಹಲಿಗೆ ತೆರಳಿ ಲಾಬಿ ನಡೆಸುತ್ತಿಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿಿ ಸಿದ್ದರಾಮಯ್ಯ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲು ಇಂದು ತಮ್ಮ ಆಪ್ತ ಸಚಿವರ ಜತೆ ಸಭೆ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಭೇಟಿಗೂ ಮುನ್ನ ಮುಖ್ಯಮಂತ್ರಿಿ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರುಗಳ ಜತೆ ಸಭೆ ನಡೆಸಿ ಖರ್ಗೆಯವರ ಮುಂದೆ ಏನೆಲ್ಲಾ ಪ್ರಸ್ತಾಾಪಗಳನ್ನು ಮಂಡಿಸಬೇಕು, ಅಧಿಕಾರ ಭದ್ರಪಡಿಸಿಕೊಳ್ಳಲು ಯಾವೆಲ್ಲಾ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂಬ ಬಗ್ಗೆೆ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.

