ಸುದ್ದಿಮೂಲ ವಾರ್ತೆ ಬೆಂಗಳೂರು, ನ.22:
ರಾಜ್ಯದಲ್ಲಿ ಮೀನುಗಾರಿಕಾ ವಿಶ್ವ ವಿದ್ಯಾಾಲಯ ಸ್ಥಾಾಪಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು.
ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು 2025ರ ಮತ್ಸ್ಯ ಮೇಳ ಉದ್ಘಾಾಟಿಸಿ ಮಾತನಾಡಿದ ಅವರು, ಇಲಾಖೆಯನ್ನು ಮತ್ತು ಮೀನುಗಾರ ಕುಟುಂಬಗಳನ್ನು ಅಭಿವೃದ್ಧಿಿಪಡಿಸಲು ಕರಾವಳಿಯವರೇ ಆದ ಮಂಕಾಳ ವೈದ್ಯ ಅವರನ್ನೇ ಮಂತ್ರಿಿ ಮಾಡಿದ್ದೇವೆ. ಇವರು ಉತ್ತಮವಾಗಿ ಇಲಾಖೆಯನ್ನು ನಿರ್ವಹಿಸುತ್ತಿಿದ್ದಾರೆ. ಮೀನುಗಾರ ಸಮುದಾಯದ ಅಭಿವೃದ್ಧಿಿಗೆ ಶ್ರಮಿಸುತ್ತಿಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 320 ಕಿಮೀ ಕರಾವಳಿ ಪ್ರದೇಶ ಇದೆ. 5.5ಲಕ್ಷ ಹೆಕ್ಟೇರ್ ಒಳನಾಡು ಜಲಪ್ರದೇಶ ಇದೆ. ಮೀನು ರಫ್ತಿಿನಲ್ಲಿ ರಾಜ್ಯ ನಾಲ್ಕನೇ ಸ್ಥಾಾನದಲ್ಲಿದೆ. ದೇಶದ ಮೀನು ಉತ್ಪಾಾದನೆಯಲ್ಲಿ ರಾಜ್ಯ 3ನೇ ಸ್ಥಾಾನದಲ್ಲಿದೆ. ಒಟ್ಟಾಾರೆ ಮೀನುಗಾರಿಕೆ 10 ಲಕ್ಷ ಜನರ ಜೀವನ ಆಸರೆಯಾಗಿದೆ ಎಂದರು.
ನಮ್ಮ ಸರ್ಕಾರ ಅಸ್ತಿಿತ್ವಕ್ಕೆೆ ಬಂದ ಮೇಲೆ ಯಾಂತ್ರೀೀಕೃತ ದೋಣಿಗಳ ಡೀಸೆಲ್ ವಾರ್ಷಿಕ ಮಿತಿಯನ್ನು 1.5 ಲಕ್ಷ ಕಿ.ಲೋ ಲೀಟರ್ನಿಂದ 2 ಲಕ್ಷ ಕಿ.ಲೋ ಲೀಟರ್ಗೆ ಹೆಚ್ಚಿಿಸಲಾಗಿದೆ. ನಾಡ ದೋಣಿಗಳಿಗೆ ಕೈಗಾರಿಕಾ ಸೀಮೆ ಎಣ್ಣೆೆಯನ್ನು ಪ್ರತೀ ಲೀಟರ್ಗೆ 35 ರೂ ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿಿದ್ದೇವೆ.
ಒಟ್ಟಾಾರೆ ಮೀನುಗಾರ ಸಮುದಾಯದ ಏಳಿಗೆಗೆ ಸರ್ಕಾರ ಪ್ರತೀ ಬಜೆಟ್ ನಲ್ಲೂ ಕಾರ್ಯಕ್ರಮಗಳನ್ನು ನೀಡುತ್ತಿಿದೆ ಎಂದು ಸಿಎಂ ಹೇಳಿದರು.
ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾಂಗ್ರೆೆಸ್ ಸರ್ಕಾರ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುತ್ತಿಿದ್ದು, ಈ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಅವಕಾಶ ಕಲ್ಪಿಿಸಿಕೊಡಲಿದೆ. ಮೀನುಗಾರರಿಗೆ ಅಗತ್ಯ ಪ್ರೋೋತ್ಸಾಾಹ ನೀಡಲಾಗುವುದು ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ 10 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ಈ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಿಯೆಯಲ್ಲಿ ವಿದ್ಯುತ್ ಇಲಾಖೆಗೆ 3 ಸಾವಿರ ಕೋಟಿಯಷ್ಟು ಮೊತ್ತ ಪಾವತಿಸಬೇಕಾಗಿದೆ. ಈ ಕೆರೆಗಳ ಪೈಕಿ ಸಣ್ಣ ಕೆರೆಗಳನ್ನು ಸೊಸೈಟಿಗಳಿಗೆ ಜವಾಬ್ದಾಾರಿ ನೀಡುತ್ತೇವೆ. ಉಳಿದ ಕೆರೆಗಳನ್ನು ಹರಾಜು ಪ್ರಕ್ರಿಿಯೆ ಮೂಲಕ ಮೀನುಗಾರಿಕೆ ಮಾಡಲು ಅವಕಾಶ ನೀಡಲಾಗುವುದು. ಇದನ್ನು ಬಳಸಿಕೊಂಡು ನೀವು ಮೀನುಗಾರಿಕೆ ವೃತ್ತಿಿ ಮಾಡಬೇಕು ಎಂದು ತಿಳಿಸಿದರು.
ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ:
ಮೀನು ಎಂದರೆ ಲಕ್ಷ್ಮಿಿ. ರೈತರು ಭೂಮಿಯಲ್ಲಿ ಕೃಷಿ ಮಾಡಿದರೆ, ಮೀನುಗಾರರು ನೀರಿನಲ್ಲಿ ಕೃಷಿ ಮಾಡುತ್ತೀರಿ. ನಿಮ್ಮ ಪ್ರಾಾಣವನ್ನು ಪಣಕ್ಕಿಿಟ್ಟು ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತೀರಿ. ನಿಮಗೆ ಸೂರ್ಯ, ಚಂದ್ರ ಎರಡೇ ಕಾಣುವುದು. ಉಳಿದಂತೆ ನಿಮ್ಮ ಆತ್ಮಬಲದಿಂದ ಇದನ್ನು ಮಾಡಿಕೊಂಡು ಬರುತ್ತಿಿದ್ದೀರಿ. ಮೀನು ಹಿಡಿಯುವುದು ಬೇರೆ, ಮಾರಾಟ ಮಾಡುವುದು ಬೇರೆ. ನಾನು ಮುಖ್ಯಮಂತ್ರಿಿಗಳಿಗೆ ಮಶೀರ್ಫಿಶ್ ತೋರಿಸಿದೆ. ನಾನು ಸಣ್ಣವನಿದ್ದಾಗ ಸಂಗಮಕ್ಕೆೆ ಹೋಗಿ ಮೀನು ಹಿಡಿಯುತ್ತಿಿದ್ದೆ. ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ. ಅದಕ್ಕೆೆ ಬಹಳ ತಾಳ್ಮೆೆ ಬೇಕು. ಈ ಮೀನು ವ್ಯವಹಾರ ಜಾತಿ ಮೇಲೆ ಇಲ್ಲ, ನೀತಿ, ಛಲ ಹಾಗೂ ಆಸಕ್ತಿಿ ಮೇಲಿದೆ. ಮೀನುಗಾರನಿಗೆ ನಿತ್ಯ ಮೀನು ಸಿಗುವುದಿಲ್ಲ. ಕೆಲವೊಮ್ಮೆೆ ವಾರವಾದರೂ ಒಂದು ಮೀನು ಸಿಗುವುದಿಲ್ಲ. ಅಂತಹ ತಾಳ್ಮೆೆ ವೃತ್ತಿಿ ನಡೆಸುತ್ತಿಿರುವ ನೀವು ಶ್ರಮಜೀವಿಗಳು ಎಂದು ಬಣ್ಣಿಿಸಿದರು.
ಮುಂದಿನ ದಿನಗಳಲ್ಲಿ ಕರಾವಳಿ ಭಾಗಕ್ಕೆೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು. ಮೀನುಗಾರಿಕೆಗೆ ಉತ್ತೇಜನ ನೀಡಲು ಕಾರ್ಯಕ್ರಮ ರೂಪಿಸಲಾಗುವುದು. ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ತಿಳಿಸಿದರು.
ನೀವು ಗಂಗಾ ಪುತ್ರರು. ಇಂತಹ ಯೋಗ ಎಲ್ಲರಿಗೂ ಬರುವುದಿಲ್ಲ. ಗಂಗಾ ಪುತ್ರ ಭೀಷ್ಮನ ಪ್ರತಿಜ್ಞೆ ಎಂದರೆ ಅದಕ್ಕೆೆ ಆದ ಘನತೆ ಇದೆ. ನೀವು ನೀರಿನಲ್ಲಿ ಕೆಲಸ ಮಾಡಿ ಸಮಾಜಕ್ಕೆೆ ಸೇವೆ ಮಾಡುತ್ತಿಿದ್ದೀರಿ. ನಿಮ್ಮೆೆಲ್ಲರಿಗೂ ಒಳ್ಳೆೆಯದಾಗಲಿ ಎಂದು ತಿಳಿಸಿದರು.
ಸಚಿವರಾದ ಮಂಕಾಳ ವೈದ್ಯ, ಬೈರತಿ ಸುರೇಶ್, ಮೀನುಗಾರಿಕೆ ಅಭಿವೃದ್ಧಿಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಮತ್ತಿಿತರರು ಭಾಗವಹಿಸಿದ್ದರು.
ವಿಶ್ವ ಮೀನುಗಾರಿಕಾ ದಿನಾಚರಣೆ- ಮತ್ಸ್ಯಮೇಳ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮೀನುಗಾರಿಕಾ ವಿಶ್ವವಿದ್ಯಾಾಲಯ ಸ್ಥಾಾಪಿಸಲು ಸರ್ಕಾರ ಸಿದ್ಧ

