ಸುದ್ದಿಮೂಲ ವಾರ್ತೆ ರಾಯಚೂರು, ನ.22:
ರಾಯಚೂರು ಜಿಲ್ಲೆೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಈ ಬಗ್ಗೆೆ ಸರ್ಕಾರ ಐತಿಹಾಸಿಕತೆ ಕುರಿತ ವಿಚಾರ ಸಂಕಿರಣ ಹಮ್ಮಿಿಕೊಳ್ಳುವ ಅಗತ್ಯವಿದೆ ಎಂದು ನಾಡೋಜ ಕುಂ ವೀರಭದ್ರಪ್ಪ ಅಭಿಪ್ರಾಾಯ ಪಟ್ಟರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ವಚನಸಿರಿ ಪಂ.ಅಂಬಯ್ಯನುಲಿ ಸಂಗೀತ ಸಾಂಸ್ಕೃತಿಕ ಸಂಸ್ಥೆೆಯಿಂದ ಹಮ್ಮಿಿಕೊಂಡಿದ್ದ 3ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಿಕೊಂಡಿದ್ದ ರಾಯಚೂರು ಸಂಗೀತ ಉತ್ಸವ ಹಾಗೂ ನುಲಿಶ್ರೀ ಪ್ರಶಸ್ತಿಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 1521ರಲ್ಲಿಯೆ ಜಿಲ್ಲೆೆಯನ್ನು ವಿಜಯನಗರ ಸಾಮ್ರಾಾಜ್ಯದ ರಾಜರು ವಶಪಡಿಸಿಕೊಂಡಿದ್ದರು. ಅದಕ್ಕೂ ಮುಂಚೆ ಪರಕೀಯರ ದಾಳಿಗಳು ಅನೇಕಬಾರಿ ಆಗಿವೆ ಎಂದು ಮೆಲಕು ಹಾಕಿದರು.
ಬಡತನವಿದ್ದಲ್ಲಿ ಸಾಧನೆ ಮಾಡುವ ಪ್ರತಿಭಾವಂತರು ಇರುತ್ತಾಾರೆ ಎಂಬುದಕ್ಕೆೆ ಅಂಬಯ್ಯ ನುಲಿ ಮತ್ತವರ ಪುತ್ರ ಚಿದಾನಂದ ನುಲಿ ಅವರ ಸಂಗೀತ ಸಾಧನೆಯೆ ನಿದರ್ಶನ ಎಂದ ಅವರು ಸಂಗೀತದ ಕೀರ್ತನೆಗಳ ರಚಿಸಿದ ದಾಸರು,, ದಾರ್ಶನಿಕರು ಈ ನೆಲದಲ್ಲಿ ಆಗಿ ಹೋಗಿದ್ದಾಾರೆ. ಕಾಯಕ ಸಂಸ್ಕೃತಿ ಈ ನೆಲದಲ್ಲಿ ಹುಟ್ಟಿಿದೆ, ಬಂಡಾಯದ ಭೂಮಿಯೂ ಇದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಾಟಿಸಿದ ಓಂಸಾಯಿ ಧ್ಯಾಾನ ಮಂದಿರದ ಧರ್ಮಾಧಿಕಾರಿ ಶ್ರೀ ಸಾಯಿಕಿರಣ ಆದೋನಿ ಮಾತನಾಡಿ, ರಂಗಮಂದಿರದಲ್ಲಿ ಅನೇಕ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿಿದ್ದು ನಮ್ಮ ನೆಲದಲ್ಲಿನ ಪ್ರತಿಭಾನ್ವಿಿತರೆಲ್ಲರೂ ಗದಗದ ಪುಣ್ಯಾಾಶ್ರಮದಿಂದ ಬಂದು ಸಾಧನೆ ಮಾಡುತ್ತಿಿರುವುದು ಪಂಚಾಕ್ಷರಿ ಗವಾಯಿಗಳವರ ಹೃದಯ ಮಂದಿರದ ದರ್ಶನ ಪಡೆದ ತೃಪ್ತಿಿ ಇದೆ ಎಂದು ನುಡಿದರು.
ಸಾನ್ನಿಿಧ್ಯ ವಹಿಸಿದ್ದ ಸೋಮವಾರಪೇಟೆ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ಮಾತನಾಡಿ, ಅಂಬಯ್ಯ ನುಲಿ ಅವರ ಸಂಗೀತ ಪರಂಪರೆ ಉಳಿಸುವ ಬಹುದೊಡ್ಡ ಕೆಲಸ ಅವರ ಪುತ್ರ ಮಾಡುತ್ತಿಿರುವುದು ಸಂಸ್ಕಾಾರದ ಪ್ರತೀಕವಾಗಿದೆ ಎಂದರು.
ಸಂಗೀತ ಮನುಷ್ಯನ ಬದುಕಿಗೆ, ರೋಗಕ್ಕೆೆ ಔಷಧಿ ಇದ್ದಂತೆ ನೆಮ್ಮದಿಯನ್ನು ಸಂಗೀತದಲ್ಲಿ ಮಾತ್ರ ಹುಡುಕಲು ಸಾಧ್ಯ ಎಂದು ಹೇಳಿದರು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯುತ್ತಿಿರುವ ಬಿ.ವೆಂಕಟಸಿಂಗ್, ಪಂ.ನರಸಿಂಹಲು ವಡವಾಟಿ, ಪಂ.ವೆಂಕಟೇಶ ಆಲ್ಕೋೋಡ್, ಡಿಂಗ್ರಿಿನರೇಶ ಸೇರಿ ಹಲವರಿಗೆ ನುಲಿಸಿರಿ ಪ್ರಶಸ್ತಿಿ ಪ್ರದಾನ ಮಾಡಲಾಯಿತು. ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತ ಜಾರ್ ಮೊಹಿಯುದ್ದೀನ್ ಅವರಿಗೆ ಗೌರವ ಸನ್ಮಾಾನ ಮಾಡಲಾಯಿತು.
ದಿವ್ಯ ಸಾನ್ನಿಿಧ್ಯ ವಹಿಸಿದ್ದ ಗದಗದ ವೀರೇಶ್ವರ ಪುಣ್ಯಾಾಶ್ರಮದ ಶ್ರೀ ಕಲ್ಲಯ್ಯಜ್ಜ ಅವರಿಗೆ ನುಲಿ ಕುಟುಂಬದವರಿಂದ ತುಲಾಭಾರ ಮಾಡಿದರು. ನಂತರ ಆಶೀರ್ವಚನ ನೀಡಿದ ಶ್ರೀ ಕಲ್ಲಯ್ಯಜ್ಜ ಅವರು, ನಡೆದಾಡುವ ದೇವರು ಪಂ.ಪುಟ್ಟರಾಜ ಗವಾಯಿಗಳವರ 729 ವಚನಗಳ ಪೈಕಿ ಆಯ್ದ ವಚನಗಳನ್ನು ಪಂ.ಅಂಬಯ್ಯ ನುಲಿ ಅವರು ರಾಗಸಂಯೋಜಿಸಿ ಹಾಡುವ ಮೂಲಕ ಜನ ಮಾನಸದಲ್ಲಿ ಮೆಚ್ಚುಗೆ ಗಳಿಸಿದ್ದಾಾರೆ. ಅವರ ಪುತ್ರ ಚಿದಾನಂದ ನುಲಿ ಅವರ ಸಂಗೀತ ಸೇವೆ ಮುಂದುವರಿಯಲಿ ಎಂದು ಹಾರೈಸಿದರು.
ನಂತರ ಸಂಸ್ಥೆೆಯ ವಿದ್ಯಾಾರ್ಥಿಗಳು, ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆಯಲ್ಲಿ ಪಂ.ಅಂಬಯ್ಯ ನುಲಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಾಧ್ಯಕ್ಷ ಚಂದ್ರಶೇಖರ ಪಾಟೀಲ, ರೇಸ್ ಕಾನ್ಸೆೆಪ್ಸ್ ಶಾಲೆಯ ಮುಖ್ಯಸ್ಥರಾದ ವೆಂಕಟಕೃಷ್ಣನ್, ಎನ್.ಚಂದ್ರಮೋಹನರೆಡ್ಡಿಿಘಿ, ಬಿಜೆಪಿ ಮುಖಂಡರಾದ ಚನ್ನಪ್ಪ ಪಾಟೀಲ,ರವೀಂದ್ರ ಜಲ್ದಾಾರ್, ವೆಂಕಟಾಪೂರ ಷಣ್ಮುಖಪ್ಪಘಿ, ಶರಣಬಸ್ಸಪ್ಪ ಪಟ್ಟೇದ್, ಕಮಲುದ್ದೀನ್, ರಾಜೇಶ ಮಡಿವಾಳ, ತಹಶೀಲ್ದಾಾರ್ ರವಿ ಅಂಗಡಿ, ಎಂ.ಎಂ.ಅಕ್ಬರ್, ಸಂಸ್ಥೆೆ ಅಧ್ಯಕ್ಷ ಚಿದಾನಂದ ನುಲಿ ಸೇರಿದಂತೆ ಹಲವರು ಉಪಸ್ಥಿಿತರಿದ್ದರು.
ಶಿಕ್ಷಕಿ ವೈಶಾಲಿಪಾಟೀಲ ನಿರೂಪಿಸಿದರು, ವೆಂಕಟೇಶಹೂಗಾರ ಪ್ರಾಾಸ್ತಾಾವಿಕವಾಗಿ ಮಾತನಾಡಿದರು, ಪಂ.ವೆಂಕಟೇಶಕುಮಾರ ಆಲ್ಕೋೋಡು ವಂದಿಸಿದರು.
ವಚನಸಿರಿ ಪಂ.ಅಂಬಯ್ಯನುಲಿ ಸಂಸ್ಥೆೆ ವಾರ್ಷಿಕೋತ್ಸವ, ಪ್ರಶಸ್ತಿಿ ಪ್ರದಾನ ರಾಯಚೂರು ಇತಿಹಾಸದ ಮೆಲುಕಿಗೆ ವಿಚಾರ ಸಂಕಿರಣ ಅಗತ್ಯ-ಕುಂವಿ

