ದಯಾಶಂಕರ ಮೈಲಿ ಮೈಸೂರು, ನ.21:
ಇವತ್ತಿಿನ ಸ್ಥಿಿತಿಯಲ್ಲಿ ಕಾಂಗ್ರೆೆಸ್ ಹೈಕಮಾಂಡ್ ಹಿಂದಿನಂತೆ ಕಮಾಂಡ್ ಮಾಡುವಷ್ಟು ಸಮರ್ಥವಾಗಿಲ್ಲ ಎಂಬುದು ಜನಜನಿತ. ಇಂದಿರಾಗಾಂಧಿ ಅವರಿಂದ ಹಿಡಿದು ರಾಜೀವ್ಗಾಂಧಿ ಅವಧಿ ಕಾಲಮಾನದವರೆಗೂ ಹೈಕಮಾಂಡ್ ಪ್ರಬಲವಾಗಿತ್ತು.
1990 ರಲ್ಲಿ ರಾಜೀವ್ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಬೆಂಗಳೂರು ಏರ್ಪೋರ್ಟ್ನಲ್ಲಿ ಪಕ್ಷ ಹೊಸ ನಾಯಕನನ್ನು ಆಯ್ಕೆೆ ಮಾಡುತ್ತದೆ ಎಂದು ಹೇಳುವ ಮೂಲಕ ವಿರೇಂದ್ರ ಪಾಟೀಲರನ್ನು ಮುಖ್ಯಮಂತ್ರಿಿ ಸ್ಥಾಾನದಿಂದ ಪದಚ್ಯುತಿಗೊಳಿಸಿ, ಸಾರೆಕೊಪ್ಪ ಬಂಗಾರಪ್ಪ ಅವರನ್ನು ಸಿಎಂ ಮಾಡಿದ್ದರು.
ಈಗ ಅಂತಹ ಧೈರ್ಯವನ್ನಾಾಗಲಿ, ಸಾಹಸವನ್ನಾಾಗಲಿ ಮಾಡುವ ಶಕ್ತಿಿ, ಸಾಮರ್ಥ್ಯ ಕಾಂಗ್ರೆೆಸ್ ಹೈಕಮಾಂಡ್ಗೆ ಇಲ್ಲ. ಇದರ ಜೊತೆಗೆ ರಾಜ್ಯದ ಮೂರನೇ ಶಕ್ತಿಿಯಾಗಿರುವ ಕುರುಬ ಸಮುದಾಯಕ್ಕೆೆ ಪ್ರಶ್ನಾಾತೀತ ನಾಯಕರಾಗಿರುವ ಸಿದ್ದರಾಮಯ್ಯ ಅವರ ಪರ ಸದ್ಯದ ಸ್ಥಿಿತಿಯಲ್ಲಿ, ಅಲ್ಪಸಂಖ್ಯಾಾತ ಮುಸ್ಲಿಿಂ ಸಮುದಾಯವು ಇದೆ. ಪರಿಶಿಷ್ಟ ಸಮಾಜವೂ ಕೂಡ ಅವರ ಬೆನ್ನಿಿಗಿದೆ.
ದೇಶದಲ್ಲಿ ಕಾಂಗ್ರೆೆಸ್ ದುರ್ಬಲ ಆಗಿರುವುದು ಮತ್ತು ಸಿದ್ದರಾಮಯ್ಯ ಓಟ್ ಕೊಡಿಸುವ ನಾಯಕ ಆಗಿ ಪರಿರ್ವತನೆ ಆಗಿದ್ದಾರೆ ಈ ಕಾರಣಗಳಿಂದ ಸಿದ್ದರಾಮಯ್ಯ ಅವರು ಕಾಂಗ್ರೆೆಸ್ಗೆ ಅನಿವಾರ್ಯ ಆಗಿದ್ದಾರೆ ಎಂಬುದು ವಾಸ್ತವವೇ.. ಆದ್ದರಿಂದ ಮುಖ್ಯಮಂತ್ರಿಿ ಸ್ಥಾಾನಕ್ಕೆೆ ರಾಜಿನಾಮೆಯನ್ನು ಏಕದಂ ನೀಡಿ ಎಂದು ಹೇಳಲು ಆಗದ ಸ್ಥಿಿತಿ ಹೈಕಮಾಂಡ್ಗೆ ಇದ್ದು, ಅವರ ಮನವೊಲಿಸಿಯೇ ರಾಜಿನಾಮೆ ಪಡೆದುಕೊಳ್ಳಬೇಕಾಗಿದೆ. ಇದರಿಂದ ಅಧಿಕಾರ ಹಂಚಿಕೆ ಕುರಿತು ನಿರ್ಧಾರ ಪ್ರಕಟಿಸಲು ವಿಳಂಬ ಆಗುತ್ತಿಿದೆ.
ಸಿದ್ದರಾಮಯ್ಯ ಅವರಿಗೂ ಕಾಂಗ್ರೆೆಸ್ ಅನಿವಾರ್ಯ ಏಕೆ :
ಈ ನಡುವೆ ಈಗಿನ ರಾಜಕೀಯ ಸ್ಥಿಿತಿಗತಿಗಳನ್ನು ಅವಲೋಕನ ಮಾಡಿದರೆ ಕಾಂಗ್ರೆೆಸ್ ಸಿದ್ದರಾಮಯ್ಯ ಅವರಿಗೂ ಅನಿವಾರ್ಯವಾಗಿದೆ. ಅವರ ಮುಂದೆ ಪರ್ಯಾಯ ಆಯ್ಕೆೆಗಳು ಇಲ್ಲ.
ಜೆಡಿಎಸ್ ತೊರೆದಾಗ ಬಿಜೆಪಿ ಸೇರುವ ಸಾಧ್ಯತೆ ಇತ್ತು. ಆದರೆ ಕಾಂಗ್ರೆೆಸ್ ಸೇರಿ 2 ಬಾರಿ ಮುಖ್ಯಮಂತ್ರಿಿ ಆದ ಮೇಲೆ ಹಿಂದುಳಿದ ವರ್ಗಗಳ ನಾಯಕರೆಂದೇ ಪ್ರತಿಬಿಂಬಿತರಾಗಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಿ ಇದೆ. ಬಿಜೆಪಿ ಇರಲಿ, ಪ್ರಧಾನಿ ಮೋದಿ ಅವರ ವಿರುದ್ಧ ಗಟ್ಟಿಿಯಾಗಿ ಮಾತನಾಡುವ ಮುಖ್ಯಮಂತ್ರಿಿ ಎಂದು ರಾಜ್ಯದಲ್ಲಿ ಮಾತ್ರವೇ ಅಲ್ಲ. ದೇಶದಲ್ಲೇ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಬಿಜೆಪಿಗೆ ಸಿದ್ದರಾಮಯ್ಯ ಅವರು ಹೋಗುವ ಪ್ರಶ್ನೆೆಯೇ ಇಲ್ಲ.
ಹೊಸ ರಾಜಕೀಯ ಪಕ್ಷ ಕಟ್ಟುವುದು ಕನಸು. ಹಿಂದೆ ಜೆಡಿಎಸ್ ಬಿಟ್ಟಾಾಗ ಎಬಿಪಿಜೆಡಿ ಪಕ್ಷವನ್ನು ಕಟ್ಟಿಿ ವಿಲರಾದ ನಂತರ ಕಾಂಗ್ರೆೆಸ್ ಸೇರ್ಪಡೆ ಆಗಿದ್ದರು. ಹೊಸ ಪಕ್ಷ ಕಟ್ಟುವ ಪ್ರಯತ್ನವನ್ನು ಕನಸಿನಲ್ಲೂ ಅವರು ಮಾಡುವುದಿಲ್ಲ.
ಕಾಂಗ್ರೆೆಸ್ನಲ್ಲೇ ಇದ್ದರೆ ಮುಂದೊಂದು ದಿನ ಕೇಂದ್ರದಲ್ಲಿ ಅಧಿಕಾರಕ್ಕೆೆ ಬಂದರೆ ರಾಜ್ಯಪಾಲರೋ ಅಥವಾ ಕೇಂದ್ರ ಸಚಿವರೋ ಆಗಬಹುದು. 2024 ರ ಚುನಾವಣೆಯಲ್ಲಿ ಕಾಂಗ್ರೆೆಸ್ ನೇತೃತ್ವದ ಸರ್ಕಾರ ಬರಲು ಕೇವಲ 25 ಸ್ಥಾಾನಗಳ ಕೊರತೆ ಮಾತ್ರ ಆಗಿತ್ತು ಅಷ್ಟೇ.
ಈ ಮೂರು ಕಾರಣಗಳಿಂದ ಸಿದ್ದರಾಮಯ್ಯ ಅವರಿಗೂ ಕಾಂಗ್ರೆೆಸ್ಸೆೆ ಅನಿವಾರ್ಯ ಆಗಿದೆ. ಒಟ್ಟಾಾರೆ ಇಂದಿನ ಸ್ಥಿಿತಿಯಲ್ಲಿ ಕಾಂಗ್ರೆೆಸ್ ಮತ್ತು ಸಿದ್ದರಾಮಯ್ಯ ಅವರ ಮುಂದೆ ಅನಿವಾರ್ಯತೆಗಳ ತೊಳಲಾಟ ಇದೆ.
ಸಮಾಲೋಚನೆ, ಧೀರ್ಘಾಲೋಚನೆ:
ಅಧಿಕಾರ ಹಸ್ತಾಾಂತರಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿಿತರ ನಾಯಕರೊಡನೆ ಸಮಾಲೋಚನೆ ನಡೆಸಿದ್ದರೇ, ಅವರ ಅತ್ಯಾಾಪ್ತರ ಬಳಿ ತಮ್ಮ ಭವಿಷ್ಯದ ಮತ್ತು ವರ್ತಮಾನದ ರಾಜಕಾರಣದ ಬಗ್ಗೆೆ ಧೀರ್ಘಾಲೋಚನೆ ನಡೆಸಿದ್ದಾಾರೆ. ಈ ವೇಳೆ ತನ್ನಾಾತ್ಮಕ್ಕೆೆ ಮೆಚ್ಚುವಂತೆ ನಡೆದುಕೊಳ್ಳಲು ಅಂದರೆ ಕೆಲ ಷರತ್ತುಗಳ ಬಗ್ಗೆೆ ಭರವಸೆ ಪಡೆದುಕೊಂಡು ರಾಜಿನಾಮೆ ನೀಡಲು ಸಹ ಚಿಂತನೆ ನಡೆಸಿದ್ದಾರೆ ಎಂದು ವಿಶ್ವಾಾಸಾರ್ಹ ಮೂಲಗಳು ತಿಳಿಸಿವೆ.
ಪಂಚ ಷರತ್ತುಗಳೇನು:
ರಾಜ್ಯ ರಾಜಕೀಯ ಪಡಶಾಲೆಯಲ್ಲಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಲು ಪಂಚ ಷರತ್ತುಗಳನ್ನು ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿಿದೆ.
ಅವುಗಳೆಂದರೆ,ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ಆಗಲಿ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದಲಿತರೊಬ್ಬರು ಸಿಎಂ ಆಗಿಲ್ಲ. ಆದ್ದರಿಂದ ಖರ್ಗೆ ಅವರಾಗಲಿ ಎಂಬುದು. ಇದಕ್ಕೆೆ ಡಿಕೆಶಿ ಅವರು ಖರ್ಗೆ ಅವರು ಸಿಎಂ ಆದರೆ ನನ್ನದೇನು ಅಭ್ಯಂತರವಿಲ್ಲ ಎಂದು ಹೇಳಿ ಆಗಿದೆ. ಇದೇ ನಿಜಕ್ಕೂ ದಲಿತ ಸಮುದಾಯದ ಬಗ್ಗೆೆ ಕಾಳಜಿ ಇದ್ದಿದ್ದರೆ ತಾವು 2 ನೇ ಬಾರಿ ಸಿಎಂ ಆಗದೆ ದಲಿತರನ್ನೇ ಸಿಎಂ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಿಸಲಾಗುತ್ತಿಿದೆ.
ಐದು ಡಿಸಿಎಂಗಳಾಗಬೇಕು, ಎಸ್ಸಿಿ, ಎಸ್ಟಿಿ, ಮುಸ್ಲಿಿಂ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮಂದಿ ಡಿಸಿಎಂ ಆಗಬೇಕು ಎಂಬುದು.
ತಮಗೆ ಆಪ್ತರಾಗಿರುವ ಸಚಿವರನ್ನು ಮುಂದೆಯೂ ಮುಂದುವರಿಸಬೇಕು. ತಮ್ಮ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡಬೇಕು. ಒಳ್ಳೆೆಯ ಖಾತೆ ನೀಡಬೇಕು.
ಪಂಚ ಗ್ಯಾಾರಂಟಿಗಳನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗಬೇಕು
ಇಂತ ಷರತ್ತುಗಳನ್ನು ಹಾಕಿರುವ ಸಾಧ್ಯತೆಗಳು ಇಲ್ಲ. ಆದರೆ ಹೈಕಮಾಂಡ್ಗೆ ಕೆಲವು ಸೂಚನೆ, ಸಲಹೆ ನೀಡಿದ್ದಾರೆ. ಅದನ್ನೇ ಷರತ್ತುಗಳು ಎಂದು ಹೇಳುವುದು ಸರಿಯಿಲ್ಲ ಎಂದು ಹೆಸರನ್ನು ಹೇಳಲು ಒಲ್ಲದ ಕಾಂಗ್ರೆೆಸ್ ಪ್ರಮುಖರೊಬ್ಬರು ಹೇಳುತ್ತಾಾರೆ.
ಅರಸು ದಾಖಲೆ ಮಾತು
ಕೆಲವರು ದಿ. ದೇವರಾಜ ಅರಸರಂತೆ ಸತತ 8 ವರ್ಷಗಳು ಸಿಎಂ ಆಗಬೇಕೆಂದು ಸಿದ್ದರಾಮಯ್ಯ ರಾಜಿನಾಮೆ ನೀಡುತ್ತಿಿಲ್ಲ ಎಂದು ಹೇಳುತ್ತಿಿದ್ದಾರೆ. ಅದು ಸರಿಯಲ್ಲ. ಅರಸು ಅವರು 1972 ರಿಂದ 1980 ರವರೆಗೆ ಸತತವಾಗಿ ಸಿಎಂ ಆಗಿದ್ದರು. ಆದರೆ ಸಿದ್ದರಾಮಯ್ಯ ಅವರು 2014 ರಿಂದ 2018 ರವರೆಗೆ ಸಿಎಂ ಆಗಿದ್ದರು, ನಂತರ ನಡೆದ ವಿಧಾನಸಭಾ ಚುನಾವಣೆ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಜಿ.ಟಿ. ದೇವೇಗೌಡರ ವಿರುದ್ಧ 40 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲುಂಡಿದ್ದರು. ನಂತರ 2023 ರಲ್ಲಿ ನಡೆದ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಗೆದ್ದು ಸಿಎಂ ಆಗಿದ್ದಾರೆ. ಅರಸರಂತೆ ನಿರಂತರವಾಗಿ 8 ವರ್ಷಗಳು ಸಿಎಂ ಆಗಿ ದಾಖಲೆ ಮಾಡುವ ಸಾಧ್ಯತೆಗಳು ಇಲ್ಲ.
257 ಮತಗಳಿಂದ ರಾಜಕೀಯ ಪುನರ್ ಜನ್ಮ
ಅಹಿಂದ ಸಂಘಟನೆ ಮಾಡಲು ಮುಂದಾದ ಹಿನ್ನೆೆಲೆಯಲ್ಲಿ ಜೆಡಿಎಸ್ನಿಿಂದ ಹೊರ ಬಂದು ಕಾಂಗ್ರೆೆಸ್ ಸೇರಿದ ಸಿದ್ದರಾಮಯ್ಯ ಅವರು 2007 ರಲ್ಲಿ ಕಾಂಗ್ರೆೆಸ್ನಿಂದ ಅಖಾಡಕ್ಕೆೆ ಇಳಿದು ಜೆಡಿಎಸ್ ಅಭ್ಯರ್ಥಿ ಶಿವಬಸಪ್ಪ ಎಂಬುವರ ವಿರುದ್ಧ ಕೇವಲ 257 ಮತಗಳಿಂದ ವಿಜಯಿಯಾಗಿ ರಾಜಕೀಯ ಮರು ಹುಟ್ಟು ಪಡೆದುಕೊಂಡಿದ್ದರು. ಅಂದು ಒಂದು ವೇಳೆ ಸೋತಿದ್ದರೆ ಅವರ ಮುಂದಿನ ರಾಜಕೀಯ ಬದುಕು ವರ್ಣಮಯವಾಗಿ ಇರುತ್ತಿಿರಲಿಲ್ಲ ಎಂಬುದು ಸತ್ಯದ ಮಾತೇ.

