ಸುದ್ದಿಮೂಲ ವಾರ್ತೆ ರಾಯಚೂರು, ನ.23:
ರಾಯಚೂರಿನಲ್ಲಿ ಏಮ್ಸ್ ಸ್ಥಾಾಪಿಸುವಂತೆ ಪ್ರಧಾನಮಂತ್ರಿಿ ಗಳ ಮೇಲೆ ಒತ್ತಡ ಹಾಕಲು ಉಡುಪಿಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಾಮೀಜಿಯವರನ್ನು ಏಮ್ಸ್ ಹೋರಾಟ ಸಮಿತಿ ನಿಯೋಗ ಭೇಟಿ ಮಾಡಿ ಕೋರಿದೆ.
ಶನಿವಾರ ಏಮ್ಸ್ ಮಂಜೂರಾತಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಬಸವರಾಜ ಕಳಸ ನೇತೃತ್ವದ ನಿಯೋಗ ಉಡುಪಿಯಲ್ಲಿ ಶ್ರೀಪೇಜಾವರ ಶ್ರೀಗಳ ಬೇಟಿ ಮಾಡಿ ಏಮ್ಸ್ ಗಾಗಿ ನಡೆಯುತ್ತಿಿರುವ ಸುದೀರ್ಘ 1290 ದಿನಗಳ ನಿರಂತರ ಹೋರಾಟದ ಬಗ್ಗೆೆ ವಿವರಿಸಲಾಯಿತು.
ಪ್ರಾಾದೇಶಿಕ ಅಸಮತೋಲನೆ ನಿವಾರಣೆಗಾಗಿ, ಐಐಟಿಯಿಂದ ವಂಚಿತಗೊಂಡ, ವಿಶೇಷ ಸ್ಥಾಾನಮಾನಕ್ಕೆೆ ಒಳಪಟ್ಟ ಕಲ್ಯಾಾಣ ಕರ್ನಾಟಕ ಪ್ರದೇಶದ ಮಹತ್ವಾಾಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಪ್ರಧಾನ ಮಂತ್ರಿಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿ ದಿವ್ಯ ಮಧ್ಯಸ್ಥಿಿಕೆ ವಹಿಸಬೇಕೆಂದು ವಿನಂತಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸ್ವೀಕರಿಸಿದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಾಮೀಜಿಯವರು ಹಿಂದುಳಿದ ಮಹತ್ವಕಾಂಕ್ಷಿ ಜಿಲ್ಲೆ ರಾಯಚೂರಿನಲ್ಲಿ ಏಮ್ಸ್ ಸ್ಥಾಾಪಿಸುವುದು ಹೆಚ್ಚು ಸೂಕ್ತವಾಗಿದ್ದು ಡಿ.28ರಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದು ಆ ಸಂದರ್ಭದಲ್ಲಿ ಅವರೊಂದಿಗೆ ಚರ್ಚಿಸಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ತಮ್ಮ ಕಡೆಯಿಂದಲೂ ಪತ್ರ ನೀಡುವುದಾಗಿ ಭರವಸೆ ನೀಡಿದರು.
ಹೋರಾಟ ಸಮಿತಿಯ ನಿಯೋಗಕ್ಕೆೆ ಪೇಜಾವರಶ್ರೀಗಳಿಂದ ಲಪ್ರದ ಆಗಿದೆ ಎಂದು ತಿಳಿಸಿದೆ.
ತಮ್ಮ ಜೊತೆ ಹಿರಿಯ ಪತ್ರಕರ್ತ ಆಸ್ಟ್ರೋೋ ಮೋಹನ್, ನಿಯೋಗದ ಗುರುರಾಜ್ ಕುಲಕರ್ಣಿ, ಶ್ರೀನಿವಾಸ್ ಜೋಶಿ, ಬಾಬು ಮೇಧ, ವಿನಯ್ ಕುಮಾರ ಚಿತ್ರಗಾರ ಭಾಗವಹಿಸಿದ್ದರು.
ಪೇಜಾವರಶ್ರೀಗಳ ಭೇಟಿಯಾದ ಏಮ್ಸ್ ಹೋರಾಟಗಾರರ ನಿಯೋಗ ರಾಯಚೂರಿಗೆ ಏಮ್ಸ್ಗಾಗಿ ಪ್ರಧಾನಿಗೆ ಪತ್ರ ನೀಡುವ ಭರವಸೆ

