ಸುದ್ದಿಮೂಲ ವಾರ್ತೆ ರಾಯಚೂರು, ನ.23:
ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ಆರೋಗ್ಯ ಕಾಪಾಡಿಕೊಂಡು ಶಿಸ್ತು ಬದ್ದ ಬದುಕು ನಡೆಸಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅಭಿಪ್ರಾಾಯ ಪಟ್ಟರು.
ಅವರಿಂದು ನಗರದ ಜಿಲ್ಲಾ ಪೋಲಿಸ್ ಮೈದಾನದಲ್ಲಿ ಜಿಲ್ಲಾ ಪೋಲಿಸ್ ವಾರ್ಷಿಕ ಕ್ರೀಡಾಕೂಟಕ್ಕೆೆ ಚಾಲನೆ ನೀಡಿ ಮಾತನಾಡಿದರು. ಇತರ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೂ ಪೊಲೀಸರ ಕರ್ತವ್ಯಕ್ಕು ವ್ಯತ್ಯಾಾಸವಿರುವುದು ಕಂಡಿದ್ದೇವೆ. ಸದಾ ಕೆಲಸದ ಒತ್ತಡದಲ್ಲಿ ಜೀವನ ಶೈಲಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು ಅದು ಕುಟುಂಬಕ್ಕೂ ಹೊರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸದಾ ವ್ಯಾಾಯಾಮ, ದೈಹಿಕ ಪರಿಶ್ರಮಕ್ಕೆೆ ಒತ್ತು ನೀಡಬೇಕು ಸಮಸ್ಯೆೆಗಳ ಎದುರಿಸುವ ಜೀವನ ಕಲೆ ಕಲಿತುಕೊಳ್ಳಬೇಕು ಈಗ ಆಯೋಜಿಸಿರುವ ಎರಡು ದಿನಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಒತ್ತಡ ಕಡಿಮೆ ಮಾಡಿಕೊಳ್ಳಲು ಸಲಹೆ ಮಾಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಾಧಿಕಾರಿ ಎಂ. ಪುಟ್ಟಮಾದಯ್ಯ ಮಾತನಾಡಿ, ಚಂಚಲಿತವಾದ ಮನಸು ಒಂದೆಡೆ ಕೇಂದ್ರೀಕರಿಸಲು ಕ್ರೀಡೆಗಳಿಂದ ಸಾಧ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡೆ ಇಲಾಖೆ ಪ್ರತಿ ವರ್ಷ ಕ್ರೀಡೆಗಳು ನಡೆಸುತ್ತಿಿದೆ ಎಂದರು.
ಪೋಲಿಸ್ ಅಧಿಕಾರಿ, ಸಿಬ್ಬಂದಿಗಳಲ್ಲಿ ಮಾನಸಿಕ ಒತ್ತಡ ನಿವಾರಣೆ, ಉತ್ತಮ ಆರೋಗ್ಯದ ಮೂಲಕ ಜೀವನ ಶೈಲಿ ಸುಧಾರಿಸಿಕೊಂಡು ಕರ್ತವ್ಯದ ಮಧ್ಯೆೆಯೂ ಕುಟುಂಬದ ಜೊತೆ ಸಂತೋಷದಿಂದ ಇರಲು ಅನುಕೂಲವಾಗುವ ರೀತಿಯಲ್ಲಿ ಅನೇಕ ಚಟುವಟಿಕೆಗಳನ್ನು ರೂಪಿಸುತ್ತ ಬರಲಾಗುತ್ತಿಿದೆ ಎಂದರು.
ಆರೋಗ್ಯವಂತರಾಗಿ ಸದೃಢರಾಗಿರಲು ದೈಹಿಕ ಶ್ರಮ ಅಗತ್ಯವಿದ್ದು, ಪ್ರತಿದಿನ ವ್ಯಾಾಯಾಮ ಮಾಡಬೇಕು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ನಂತರ ಜಿಲ್ಲೆೆಯ ವಿವಿಧ ಠಾಣೆಗಳ ಪಿಎಸ್ಐ, ಎಎಸ್ಐ ಹಾಗೂ ಪೇದೆಗಳು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಎಸ್ಪಿಗಳಾದ ಕುಮಾರಸ್ವಾಾಮಿ, ಜಿ.ಹರೀಶ, ಡಿಎಸ್ಪಿ ಶಾಂತವೀರ, ಡಿಆರ್ ಡಿಎಸ್ಪಿ ಗೋರ್ಕೆ, ಲಿಂಗಸುಗೂರು ಡಿವೈಎಸ್ಪಿ ದತ್ತಾಾತ್ರೇಯ ಕರ್ನಾಡ, ಸಿಂಧನೂರು ಡಿವೈಎಸ್ಪಿ ಚಂದ್ರಶೇಖರ ಸೇರಿ ಪೋಲಿಸ್ ಅಧಿಕಾರಿಗಳು ಸಿಬ್ಬಂದಿಗಳು, ಕ್ರೀಡಾಪಟುಗಳು ಭಾಗವಹಿಸಿದ್ದರು.
ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆೆ ಚಾಲನೆ ಶಿಸ್ತು ಬದ್ದ ಬದುಕಿಗೆ ಆರೋಗ್ಯ ಮುಖ್ಯ-ಸಿಇಓ

