ಸುದ್ದಿಮೂಲ ವಾರ್ತೆ ಬೆಂಗಳೂರು, ನ.23:
ಪತ್ರಿಿಕೋದ್ಯಮದಲ್ಲಿ ಶೇ.10 ರಷ್ಟು ಇರುವವರು ಹಿಂದುಳಿದ ವರ್ಗದವರು ಸರ್ಕಾರದ ಮುಖ್ಯ ಹುದ್ದೆಗಳಲ್ಲಿ ಇರುವುದನ್ನು ಸಹಿಸುತ್ತಿಿಲ್ಲ. ಇವರು ಹಿಂದುಳಿದ ವರ್ಗಗದವರ ವಿರುದ್ಧ ಸುಳ್ಳುಗಳನ್ನೇ ಹೇಳುತ್ತಾಾರೆ ಎಂದು ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಹೇಳಿದರು.
ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಪತ್ರಕರ್ತರ ಹಾಗೂ ವರದಿಗಾರರ ಸಂಘ ಏರ್ಪಡಿಸಿದ್ದ ನಾರಾಯಣ ಗುರು ಪ್ರಶಸ್ತಿಿ ಪ್ರದಾನ ಹಾಗೂ ಪತ್ರಕರ್ತರಿಗೆ ಸನ್ಮಾಾನ ಸಮಾರಂಭದಲ್ಲಿ ಪಾಲ್ಗೊೊಂಡು ಮಾತನಾಡಿದರು.
ಪತ್ರಿಿಕೆ ಹಾಗೂ ಟಿವಿಗಳಲ್ಲಿ ಶೇ.90ರಷ್ಟು ಹಿಂದುಳಿದ ವರ್ಗದವರು ಕೆಲಸ ಮಾಡುತ್ತಿಿದ್ದಾರೆ. ಶೇ. 10ರಷ್ಟು ಇರುವ ಒಂದು ಸಮುದಾಯದ ಇವರನ್ನು ಹಿಡಿತದಲ್ಲಿಟ್ಟುಕೊಂಡಿದೆ. ಇವರು ಹಿಂದುಳಿದ ವರ್ಗದವರ ಕನಸನ್ನು ಛಿದ್ರ ಮಾಡುತ್ತಿಿದ್ದಾರೆ. ಹಿಂದುಳಿದ ವರ್ಗಗಳಿಗೆ ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದರೆ ಶೇ.10ರಷ್ಟು ಇರುವ ಮಂದಿ ಯೋಜನೆಗಳ ಬಗ್ಗೆೆ ಕೆಟ್ಟ ಮಾಹಿತಿಯನ್ನು ಹಂಚುತ್ತಾಾರೆ. ಹಿಂದುಳಿದ ವರ್ಗದವರಿಗೆ ತಮ್ಮ ಯೋಜನೆಗಳ ಬಗ್ಗೆೆ ಒಳ್ಳೆೆಯ ಮಾಹಿತಿಯೇ ಇರುವುದಿಲ್ಲ. ಯೋಜನೆಗಳ ಸುಳ್ಳು ಸುದ್ದಿಗಳು ಮಾತ್ರ ಸಮಾಜದಲ್ಲಿ ಹರಡುತ್ತಿಿರುತ್ತಿಿವೆ. ಈಗಿನ ಪತ್ರಕರ್ತರು ಇವುಗಳನ್ನು ಮೆಟ್ಟಿಿ ನಿಂತು ನಿಜ ಸುದ್ದಿಗಳನ್ನು ಬರೆಯಬೇಕಾಗಿದೆ. ಈ ನಿಟ್ಟಿಿನಲ್ಲಿ ಎಲ್ಲರೂ ಒಂದಾಗಬೇಕು ಎಂದರು.
ನಾರಾಯಣ ಗುರು ಇವತ್ತು ಪ್ರಸ್ತುತವಾಗುತ್ತಾಾರೆ. ಇವರ ಕಾರ್ಯಕ್ಷೇತ್ರ ಕೇರಳವಾದರೂ ಇಡೀ ದೇಶಕ್ಕೆೆ ತಮ್ಮ ತತ್ವಗಳನ್ನು ಹರಡಿದ್ದಾರೆ. ಶೋಷಿತರನ್ನು ಹಾಗೂ ಹಿಂದುಳಿದವರನ್ನು ದೇವಾಲಯಕ್ಕೆೆ ಬಿಡದೆ ಇದ್ದಾಗ ನೀವು ಚಿಂತೆ ಮಾಡಬೇಡಿ ನಿಮ್ಮ ಎದುರಿಗೆ ದೇವಾಲಯಗಳನ್ನೇ ತಂದು ನಿಲ್ಲಿಸುತ್ತೇನೆ ಎಂದು ಧೈರ್ಯ ತುಂಬಿದರು. ಅದರಂತೆ ನಡೆದುಕೊಂಡರು. ಹಿಂದುಳಿದ ವರ್ಗದವರು ತಮಗೆ ಇಷ್ಟವಾದ ದೇವರ ಗುಡಿಗಳನ್ನು ಕಟ್ಟಲು ಪ್ರೇರೆಪಿಸಿದರು. ಕೇವಲ ಗುಡಿ ಕಟ್ಟದೆ ಹಿಂದುಳಿದ ವರ್ಗದವರು ವಿದ್ಯೆೆ ಕಲಿಯುವತ್ತ ಮುಂದಾಗಬೇಕು ಎಂದರು.
ಮುಖ್ಯಮಂತ್ರಿಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ ಜಾತಿ ವ್ಯವಸ್ಥೆೆಯಲ್ಲಿ ಸಿಲುಕಿರುವ ಇಂದಿನ ಸಮಾಜಕ್ಕೆೆ ನಾರಾಯಣಗುರು ಅವರು ನೈಸರ್ಗಿಕ ಔಷಧಿ ನೀಡಿದರು. ಜಾತಿ ವ್ಯವಸ್ಥೆೆಯಲ್ಲಿ ಮರ್ಯಾದೆ ಹತ್ಯೆೆ ಭೀಕರವಾದ ಹಾಗೂ ಅನಿಷ್ಠತೆಯಾಗಿದೆ. ಇದನ್ನುತೊಲಗಿಸಲು ನಾರಾಯಣಗುರು ಅವರ ತತ್ವದಿಂದ ಮಾತ್ರ ಸಾಧ್ಯ. ಸಾಮಾಜಿಕ ಸಮಸ್ಯೆೆಗಳಿಗೆ ನಾರಾಯಣ ಗುರು ಅವರು ದಾರಿ ದೀಪ. ಜಾತಿ ವ್ಯವಸ್ಥೆೆ ಇಲ್ಲದ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು. ಈ ನಿಟ್ಟಿಿನಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಕೂಡ ಮುಂದುವರೆಯುತ್ತಿಿದ್ದಾರೆ. ಎಲ್ಲ ವರ್ಗದವರಿಗೆ ಗ್ಯಾಾರಂಟಿ ಜಾರಿಗೊಳಿಸಿದ್ದಾರೆ ಎಂರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಲಕ್ಷ್ಮಣ ಕೊಡಸೆ. ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಪತ್ರಕರ್ತರ ಹಾಗೂ ವರದಿಗಾರರ ಸಂಘ ಗಂಧರ್ವ ಸೇನಾ ಸೇರಿದಂತೆ ಪದಾಧಿಕಾರಿಗಳು ಇದ್ದರು.
ಬಾಕ್ಸ್
ಸಾಧಕರಿಗೆ ಅಭಿನಂದನೆ
ಸಮಾರಂಭದಲ್ಲಿ ಮಾಹಿತಿ ಆಯುಕ್ತರಾದ ಬಿ. ವೆಂಕಟಸಿಂಗ್, ರುದ್ರಣ್ಣ ಹರ್ತಿಕೋಟೆ, ಪ್ರಜಾಪ್ರಗತಿ ಪತ್ರಿಿಕೆ ಸಂಪಾದಕ ಡಾ.ಎಸ್. ನಾಗಣ್ಣ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಬಾಕ್ಸ್
ಐವರಿಗೆ ನಾರಾಯಣ ಗುರು ಪ್ರಶಸ್ತಿಿ ಪ್ರದಾನ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ನಾರಾಯಣ ಗುರು ಪ್ರಶಸ್ತಿಿ ಪ್ರದಾನ ಮಾಡಿ ಗೌರವಿಸಲಾಯಿತು. ಸಹಕಾರಿ ಧುರೀಣರಾದ ಸರೋಜ ಬನ್ನಪ್ಪ, ಕೃಷಿ ಹೋರಾಟಗಾರ ಎಚ್.ಆರ್.ಜಯರಾಮ್, ಮಹಿಳಾ ಹೋರಾಟಗಾರ್ತಿ ಅಮಿತ ಆನಂದ ಮಹಂತ, ಹೃದ್ರೋಗ ತಜ್ಞ ಡಾ. ನಾಗೇಶ್ ಬಸವರಾಜ್, ಖ್ಯಾಾತ ರೇಖಾ ಚಿತ್ರ ಕಲಾವಿದ ಪುಂಡಲೀಕ ಕಲ್ಲಿಗನೂರ ಅವರನ್ನು ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ನಾರಾಯಣ ಗುರು ಪ್ರಶಸ್ತಿಿ ಪ್ರದಾನ ಹಾಗೂ ಪತ್ರಕರ್ತರಿಗೆ ಸನ್ಮಾಾನ ಸಮಾರಂಭ ಬಲಾಢ್ಯ ಸಮುದಾಯದವರಿಂದ ಮಾಧ್ಯಮ ಹಿಡಿತ: ಗಂಗಾಧರ ಮೊದಲಿಯಾರ್

