ಸುದ್ದಿಮೂಲ ವಾರ್ತೆ ಕಲಬುರಗಿ, ನ.21:
ಮಧ್ಯಂತರ ಜಾಮೀನಿನ ಮೇಲೆ ಕಲಬುರಗಿ ಕೇಂದ್ರ ಕಾರಾಗೃಹ ದಿಂದ ಹೊರಬರುವ ವೇಳೆ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಆರ್.ಡಿ. ಪಾಟೀಲ್, ಜೈಲು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಕರ್ತವ್ಯಕ್ಕೆೆ ಅಡ್ಡಿಿ ಹಾಗೂ ಹಲ್ಲೆ ಎಂದು ಕಲಬುರಗಿ ಸೆಂಟ್ರಲ್ ಜೈಲ್ ವಾರ್ಡನ್ ಆರ್.ಡಿ ಪಾಟೀಲ್ ವಿರುದ್ದ ದೂರು ನೀಡಿದ್ದಾರೆ. ಸುಪ್ರೀೀಂ ಕೋರ್ಟ್ನಿಂದ 3 ವಾರಗಳ ಮಟ್ಟಿಿಗೆ ಮಧ್ಯಂತರ ಜಾಮೀನು ಪಡೆದಿರುವ ಆರ್.ಡಿ. ಪಾಟೀಲ್, ನ್ಯಾಾಯಾಲಯದ ಆದೇಶದಂತೆ ಜಾಮೀನಿನ ಮೇಲೆ ಹೊರಬರುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇನ್ನೊೊಂದೆಡೆ ಆರ್.ಡಿ. ಪಾಟೀಲ್ ನಿಂದಲೂ ಪ್ರತಿ ದೂರು ದಾಖಲಾಗಿದೆ. ಜೈಲು ವಾರ್ಡನ್ ಶಿವಕುಮಾರ್ ವಿರುದ್ಧ ಎ್.ಐ.ಆರ್. ದಾಖಲಿಸಿರುವ ಆರ್.ಡಿ ಪಾಟೀಲ್, ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರು ನೀಡಿದ್ದು, ಒಟ್ಟಾಾರೆ ಈ ಕುರಿತು ರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.

