ಸುದ್ದಿಮೂಲ ವಾರ್ತೆ ಕವಿತಾಳ, ನ.23:
ಪಟ್ಟಣದಲ್ಲಿ ಹುಸೇನಪುರ ಕ್ರಾಾಸ್ ನಿಂದ ಮಸ್ಕಿಿ ಕ್ರಾಾಸ್ ವರೆಗೆ ನಡೆದ ರಸ್ತೆೆ ಅಗಲೀಕರಣ ಕಾಮಗಾರಿ ಹಿನ್ನೆೆಲೆಯಲ್ಲಿ ಇಲ್ಲಿನ ಶಿವಯೋಗಿ ಶಿವಪ್ಪನ ತಾತನ ಮಠದ ಮುಂದಿನ ಭಾಗದ ಚಾವಣಿ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.
ಐತಿಹಾಸಿಕ ದೇವಸ್ಥಾಾನ ಶಿವಯೋಗಿ ಶಿವಪ್ಪ ತಾತನ ಮಠವಾಗಿದ್ದು ಮುಂದಿನದಿನಗಳಲ್ಲಿ ದೇವಸ್ಥಾಾನದ ಅಭಿವೃದ್ಧಿಿಗೆ ಸರಕಾರ ಕ್ರಮವಹಿಸಬೇಕು ಎಂದು ದೇವಸ್ಥಾಾನದ ಅರ್ಚಕ ಕರಿಯಣ್ಣ ಜಡೆ ಪೂಜಾರಿ ಅಭಿಪ್ರಾಾಯ ವ್ಯಕ್ತಪಡಿಸಿದರು.
ಮಳೆಗಾಲ ಮತ್ತು ಬೇಸಿಗೆಯಲ್ಲಿ ದೇವಸ್ಥಾಾನದಲ್ಲಿ ಕುಳಿತುಕೊಳ್ಳಲು ಭಕ್ತರಿಗೆ, ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗುತ್ತಿಿತ್ತು ದೇವಸ್ಥಾಾನದ ಮುಂಭಾಗದ ಛಾವಣಿ ತೆರವುಗೊಳಿಸುತ್ತಿಿರುವದರಿಂದ ಜನ ಸಾಮಾನ್ಯರಿಗೆ, ಸಾರ್ವಜನಿಕರಿಗೆ ಸಮಸ್ಯೆೆ ಉಂಟಾಗುತ್ತದೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಅನುಕೂಲಕ್ಕಾಾಗಿ ತಂಗು ದಾಣ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಾಯಿಸಿದರು.
ದೇವಸ್ಥಾಾನ ಚಾವಣಿ ತೆರವು

