ಸುದ್ದಿಮೂಲ ವಾರ್ತೆ ರಾಯಚೂರು , ನ.23:
ನಗರದ ನೀಲಕಂಠೇಶ್ವರ ಬಡಾವಣೆಯ ಆರಾಧ್ಯ ದೈವ ಶ್ರೀ ನೀಲಕಂಠೇಶ್ವರ ದೇವರ ರಥೋತ್ಸವ ಭಾನುವಾರ ಸಂಜೆ ಅಪಾರ ಭಕ್ತರ ಜಯಘೋಷಗಳ ಮಧ್ಯೆೆ ಸಂಭ್ರಮ ಸಡಗರದೊಂದಿಗೆ ಜರುಗಿತು.
ಜಾತ್ರಾಾ ನಿಮಿತ್ತ ಕಳೆದ 15 ದಿನಗಳಿಂದ ಆರಂಭವಾಗಿದ್ದ ಐದು ದಿನಗಳ ಜ್ಞಾನದಾಸೋಹ, 10 ದಿನಗಳ ಗುಡ್ಡಾಾಪುರದ ದಾನಮ್ಮ ಪುರಾಣ ಜೊತೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಂಗೋಪವಾಗಿ ಜರುಗಿ ಭಾನುವಾರ ಸಂಪನ್ನಗೊಂಡವು.
ಇಂದು ಸಂಜೆ ಶ್ರೀ ನೀಲಕಂಠೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತುಘಿ. ಉತ್ಸವ ಮೂರ್ತಿಯ ಪಲ್ಲಕ್ಕಿಿಘಿ, ನಂದಿಕೋಲು ಸೇವೆಯ ನಂತರ ಉತ್ಸವ ಮೂರ್ತಿಯೊಂದಿಗೆ ರಥೋತ್ಸವಕ್ಕೆೆ ಸೋಮವಾರಪೇಟೆ ಹಿರೇಮಠದ ಶ್ರೀ ರಾಚೋಟಿವೀರ ಶಿವಾಚಾರ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಪಟಾಕಿಗಳು ಬಾನಂಗಳದಲ್ಲಿ ಬಗೆಬಗೆಯ ಚಿತ್ತಾಾರ ಮೂಡಿಸಿದರೆ. ’ಶ್ರೀ ನೀಲಕಂಠೇಶ್ವರ ಮಹಾರಾಜಕೀ ಜೈ’, ನಂಬಿದವರಿಗೆ ವರ ನೀಡುವ ಹರ ಹರ’ ಎಂಬ ಭಕ್ತರು ಜಯಘೋಷ ಮೊಳಗಿಸಿದರು. ದೇವಸ್ಥಾಾನ ಮುಂಭಾಗದ ರಥಬೀದಿಯಲ್ಲಿ ಗಾಂಭೀರ್ಯ ವಾಗಿ ರಥ ಚಲಿಸಿ ಬಸವನಕಟ್ಟೆೆ ತಲುಪಿ ಪುನಃ ತನ್ನ ಮೂಲ ಸ್ಥಾಾನಕ್ಕೆೆ ತಲುಪಿತು. ಇದನ್ನು ಕಂಡ ಭಕ್ತರು ಹರ್ಷೋದ್ಗಾಾರದಲ್ಲಿ ಚಪ್ಪಾಾಳೆತಟ್ಟಿಿ ಸಂಭ್ರಮಿಸಿದರು.
ಯಶಸ್ವಿಿ ಜಾತ್ರೋೋತ್ಸವದ ಕಾರ್ಯಕ್ರಮಗಳಿಗೆ ನೀಲಕಂಠೇಶ್ವರ ಸೇವಾ ಸಮಿತಿ, ಮಹಿಳಾ ಮಂಡಳಿ, ಯುವಕ ಮಂಡಳಿಯ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎನ್.ಕೆ ನಾಗರಾಜ, ಸೇವಾ ಸಮಿತಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಪದಾಧಿಕಾರಿಗಳು, ನೂರಾರು ಸಂಖ್ಯೆೆಯ ಭಕ್ತಾಾದಿಗಳು ಉಪಸ್ಥಿಿತರಿದ್ದರು.ಸರಕಾರಿ ನೌಕರರೆಂದು ಘೋಷಿಸಿ ಬೆಲೆ ಏರಿಕೆಯ ಆಧಾರದಲ್ಲಿ ಪಂಚಾಯತ ನೌಕರರಿಗೆ 36 ಸಾವಿರ ವೇತನ, ಸೇವಾ ಹಿರಿತನ ಪರಿಗಣಿಸಿ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯಲು ಆಗ್ರಹಿಸಿದರು.
ಸುದ್ದಿಗೋಷ್ಠಿಿಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಆಂಜನೇಯ ಮಾಡಗಿರಿ, ಡಿ ಎಸ್ ಶರಣಬಸವ, ವೀರೇಶ ಇತರರಿದ್ದರು.
ರಾಯಚೂರು : ಶ್ರೀ ನೀಲಕಂಠೇಶ್ವರ ಅದ್ಧೂರಿ ಮಹಾರಥೋತ್ಸವ

