ಸುದ್ದಿಮೂಲ ವಾರ್ತೆ ಕೊಪ್ಪಳ, ನ.24:
ತುಂಗಭದ್ರಾಾ ಜಲಾಶಯದಿಂದ ಎರಡನೆಯ ಅವಧಿಗೆ ನೀರು ಬಿಡಲು ಆಗ್ರಹಿಸಿ ಇಷ್ಟರಲ್ಲಿಯೇ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಕೆ ಎಸ್ ನವೀನ್ ತಿಳಿಸಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ ರಾಜ್ಯ ಸರಕಾರವು ರೈತರಿಗೆ ಶಾಪವಾಗಿದೆ. ಸರಕಾರ ಶವದ ರೀತಿಯಲ್ಲಿದೆ.ಕಬ್ಬು ಬೆಳೆಗಾರರ ಹೋರಾಟದಲ್ಲಿ ನಾವು ಭಾಗಿಯಾದ ನಂತರ ಎಚ್ಚೆೆತ್ತುಕೊಂಡಿದ್ದಾಾರೆ.ಮೆಕ್ಕೆೆಜೋಳ ಬೆಲೆ ಕುಸಿತವಾಗಿದೆ. ಸಿಎಂ ರೈತರನ್ನು ಕೇವಲ ಕರೆದು ಮಾತನಾಡಿ ಕಳುಹಿಸಿದ್ದಾಾರೆ. ಆದರೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ತುಂಗಭದ್ರಾಾ ಜಲಾಶಯದಿಂದ ಎರಡನೆಯ ಬೆಳೆಗೆ ನೀರು ಬಿಡದೆ ಅನ್ಯಾಾಯ ಮಾಡಿದ್ದಾಾರೆ. ಸರಕಾರ ಬಂದಾಗಿನಿಂದ ಕ್ರಸ್ಟ್ ದುರಸ್ತಿಿಯಲ್ಲಿವೆ ಎನ್ನುವುದು ಗೊತ್ತಿಿದ್ದರೂ ನಿರ್ಲಕ್ಷ್ಯ ಮಾಡಿದ್ದಾಾರೆ. ದುರಸ್ತಿಿಗೆ ಹಣ ನೀಡಿಲ್ಲ. ಬೇಸಿಗೆ ಬೆಳೆ ನೀರು ನೀಡದೆ ನಷ್ಟವನ್ನು ರೈತರ ಮೇಲೆ ಹೇರಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಾಗ ಎಸ್ಡಿಆರ್ಎ್ ನಿಯಮ ಮೀರಿ ಹಣ ಬಿಡುಗಡೆ ಮಾಡಿದ್ದರು. ರಾಜ್ಯದ ರೈತರ ಪರವಾಗಿ ನ 26 ರಿಂದ ರಾಜ್ಯಾಾದ್ಯಂತ ತಾಲೂಕಾ ಮಟ್ಟದಿಂದ ಹೋರಾಟ ಮಾಡುತ್ತಿಿದೆ. ತುಂಗಭದ್ರಾಾ ನೀರಿಗಾಗಿ ಬೃಹತ್ ಹೋರಾಟವನ್ನು ಕೊಪ್ಪಳದಲ್ಲಿ ಮಾಡಲಾಗುವುದು ಈ ಹೋರಾಟದಲ್ಲಿ ರಾಜ್ಯದ ಮುಖಂಡರು ಪಾಲ್ಗೊೊಳ್ಳುತ್ತಿಿದ್ದಾಾರೆ ಎಂದರು.
ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಡಿಕೆ ಶಿವಕುಮಾರ ಅಧಿಕಾರ ಪಡೆಯಲು ಹೋರಾಡುತ್ತಿಿದ್ದಾಾರೆ. ಆದರೆ ರೈತರಿಗೆ ಈ ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಹೇಮಲತಾ ನಾಯಕ, ಪರಣ್ಣ ಮುನವಳ್ಳಿಿ ಅಶೋಕ ಕಲ್ ತಾವರಗೇರಿ, ಶ್ರೀಧರ ಕೆಸರಟ್ಟಿಿ, ಬಸವರಾಜ ದಡೇಸಗೂರು, ವಿರುಪಾಕ್ಷಪ್ಪ ಸಿಂಗನಾಳ, ಬಸವರಾಜ ಕ್ಯಾಾವಟರ್, ಚಂದ್ರಶೇಖರ್ ಕವಲೂರು, ಪ್ರಮೋದ,ಗಣೇಶ ಹೊರತಟ್ನಾಾಳ,ಸೋಮನಗೌಡ ಇದ್ದರು
ತುಂಗಭದ್ರಾಾ ನೀರಿಗಾಗಿ ಕೊಪ್ಪಳದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

