ದಯಾಶಂಕರ ಮೈಲಿ ಮೈಸೂರು, ನ.24:
ರಾಜ್ಯದಲ್ಲಿ ಮುಖ್ಯಮಂತ್ರಿಿ ಸ್ಥಾಾನದ ಹಸ್ತಾಾಂತರ ಮಾಡಿಸುವುದು ಕಾಂಗ್ರೆೆಸ್ ಹೈಕಮಾಂಡ್ಗೆ ನುಂಗಲಾರದ ತುಪ್ಪವಾಗಿರುವುದಂತೂ ಸತ್ಯ. ದಿನೇ ದಿನೇ ಅಧಿಕಾರ ಹಂಚಿಕೆ ವಿಚಾರ ಜೇನುಗೂಡಿಗೆ ಕೈ ಹಾಕಿದಂತಾಗುತ್ತದೆ ಎಂಬುದು ಹಸ್ತ ಪಕ್ಷವನ್ನು ಕಾಡಲಾರಂಭಿಸಿದೆ.
ಒಪ್ಪಂದದಂತೆ ಅಧಿಕಾರವನ್ನು ಬಿಟ್ಟುಕೊಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಹೇಳಲಾಗದ ಪರಿಸ್ಥಿಿತಿ ಉಂಟಾಗಿರುವ ಕಾರಣ ರಾಹುಲ್ ಗಾಂಧಿ ಅವರು, ಈ ವಿಚಾರದ ಜವಾಬ್ದಾಾರಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲಿಗೆ ಏರಿಸಿ ವಿದೇಶಕ್ಕೆೆ ಹಾರಿದ್ದಾರೆ.
ಆದರೆ, ಖರ್ಗೆ ಅವರಿಗೆ ಉಭಯ ಸಂಕಟ. ಇತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬಿಟ್ಟುಕೊಡಲು ಆಗದ ಮತ್ತು ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಡಿ ಎಂದರೆ ಒಂದು ವೇಳೆ ಅವರು ಬಂಡೆದ್ದರೇ ಪಕ್ಷದ ಗತಿ ಏನೆಂಬ? ಚಿಂತೆ ಅವರದ್ದು. ಒಮ್ಮೆೆ ದಲಿತ ಸಿಎಂ ಮಾಡಬೇಕು ಎಂದಾದರೆ ತಾವು ಮುಂದೆ ಬಂದು ಆಗಲು ಆಗುತ್ತಿಿಲ್ಲ. ಏಕೆಂದರೆ ಎಐಸಿಸಿ ಹುದ್ದೆ ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡದು. ಮುಂದೆ ಕಾಂಗ್ರೆೆಸ್ ಸಂಪೂರ್ಣ ಬಹುಮತ ಬಾರದೇ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರ ರಚಿಸಿದರೆ ಪ್ರಧಾನಿ ಆಗುವ ಅವಕಾಶ ಸಿಗುತ್ತದೆ ಎಂಬುದನ್ನು ತಳ್ಳಿಿ ಹಾಕಲು ಸಾಧ್ಯವಿಲ್ಲ.
ಬಜೆಟ್ ಮಂಡನೆ ನಂತರ
ಏತನ್ಮಧ್ಯೆೆ, ಹಾಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಾನೂ ಸಿಎಂ ರೇಸ್ನಲ್ಲಿ ಇದ್ದೀನಿ ಎಂದು ಹೇಳಿದ್ದಾರೆ. ಈ ಎಲ್ಲಾ ಗೊಂದಲಗಳ ನಡುವೆ ಖರ್ಗೆ ಅವರು, ಸಲಹೆ ರೂಪದಲ್ಲೇ ಇಟ್ಟ ಸಿದ್ದರಾಮಯ್ಯನವರ ಪಂಚ ಷರತ್ತುಗಳಿಗೆ ಅಸ್ತು ಎಂದಿದ್ದರೂ ಈಗ 2026 ಮಾರ್ಚ್ಗೆ ಬಜೆಟ್ ಮಂಡಿಸಿದರೆ ದಾಖಲೆ ಆಗುತ್ತದೆ. ಅಂದರೆ 17 ಬಜೆಟ್ಗಳನ್ನು ಮಂಡನೆ ಮಾಡಿದಂತಾಗುತ್ತದೆ. ಆದ್ದರಿಂದ ಅಲ್ಲಿಯವರೆಗೆ ಅವಕಾಶ ನೀಡಿ, ನಂತರ ರಾಜಿನಾಮೆ ಒಪ್ಪಿಿಸುವ ಹೊಸ ಇಂಗಿತವನ್ನು ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದಿದೆ.
ಇದಕ್ಕೊೊಪ್ಪದ ಡಿಕೆ ಅಂಡ್ ಬ್ರದರ್ಸ್
ಆದರೆ ಈ ಇಂಗಿತಕ್ಕೆೆ ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಬಿಲ್ಕುಲ್ ಒಪ್ಪುುತ್ತಿಿಲ್ಲ. ಸಿದ್ದರಾಮಯ್ಯ ಅವರು ತಮ್ಮ ದೃಷ್ಟಿಿಕೋನ. ಧೋರಣೆ ಅನುಸಾರಕ್ಕೆೆ ಪೂರಕವಾಗಿ ಬಜೆಟ್ ಮಂಡಿಸುತ್ತಾಾರೆ. ನಂತರದಲ್ಲಿ ಅದಕ್ಕೆೆ ಅನುಗುಣವಾಗಿ ಆಡಳಿತ ನಡೆಸಲು ನನಗೆ ಆಗದು. ಬಜೆಟ್ ನನ್ನ ಕಲ್ಪನೆ ಕೂಸಾಗಬೇಕು, ನನ್ನದೇ ಆದ ದೃಷ್ಟಿಿಕೋನ ಹೊಂದಿರಬೇಕು. ಆದ್ದರಿಂದ ನಾನೇ ಬಜೆಟ್ ಮಂಡಿಸಬೇಕೆಂಬ ಪಟ್ಟನ್ನು ಡಿಕೆ ಅಂಡ್ ಬ್ರದರ್ಸ್ ಹಾಕಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿಿದೆ.
ಇದೇ ವೇಳೆ ಹೈಕಮಾಂಡ್ 2028ಕ್ಕೆೆ ನಡೆಯುವ ಚುನಾವಣೆ ಮನಿ ಮ್ಯಾಾನೇಜ್ಮೆೆಂಟ್ (ಆರ್ಥಿಕ ನಿರ್ವಹಣೆ) ಮಾಡಬೇಕು ಎಂಬ ಏಕ ಷರತ್ತನ್ನು ಡಿಕೆಶಿ ಅವರಿಗೆ ವಿಧಿಸಿಯೇ ಅಧಿಕಾರ ಹಸ್ತಾಾಂತರ ಮಾಡಲು ಚಿಂತನೆ ನಡೆಸುತ್ತಿಿದೆ.
ಒಪ್ಪಂದ ಹೇಗಾಗಿತ್ತು?
2023ರ ಚುನಾವಣೆಯಲ್ಲಿ 136 ಸ್ಥಾಾನಗಳನ್ನು ಗೆದ್ದಾಗ ದೆಹಲಿಯಲ್ಲಿ ಡಿಕೆಶಿ ಅವರು, ಪಕ್ಷ ಅಧಿಕಾರಕ್ಕೆೆ ತರಲು ನನ್ನದು ಬಹಳಷ್ಟು ಶ್ರಮವಿದೆ, ನನ್ನನ್ನು ಸಿಎಂ ಮಾಡುವುದು ಸೂಕ್ತ ಎಂದು ವಾದಿಸಿ, ಪಟ್ಟು ಹಿಡಿದಿದ್ದರು. ಅದೇ ವೇಳೆ ಸಿದ್ದರಾಮಯ್ಯ ಅವರು ಕೂಡ ಅದೇ ಬಗೆಯಲ್ಲಿ ವಾದಿಸಿ ಸಿಎಂ ಆಗಲು ಪಟ್ಟು ಹಿಡಿದರು.
ಕೊನೆಗೆ ರಾಹುಲ್ಗಾಂಧಿ, ಸೋನಿಯಾಗಾಂಧಿ, ಖರ್ಗೆ ಅವರು, ಸಿದ್ದರಾಮಯ್ಯ, ಡಿಕೆಶಿ ಮತ್ತು ಡಿಕೆಸು ಮೂವರೇ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಂತಿಮ ತೀರ್ಮಾನಕ್ಕೆೆ ಬನ್ನಿಿ ಎಂದು ಹೇಳಿದರು. ಆಗ ಸಿದ್ದರಾಮಯ್ಯ ಮೊದಲ ಎರಡೂವರೆ ವರ್ಷ ಸಿಎಂ ಆಗಬೇಕು, ನಂತರ ತಮಗೆ ಬಿಟ್ಟುಕೊಡಬೇಕು ಎಂಬ ಒಪ್ಪಂದ ಆಗಿತ್ತು. ಅದಕ್ಕೆೆ ಹೈಕಮಾಂಡ್ ಒಪ್ಪಿಿ ನಂತರ ಸಿದ್ದರಾಮಯ್ಯ 2 ನೇ ಬಾರಿ ಸಿಎಂ ಆದರು. ಮೂವರ ನಡುವೆ ಆದ ಒಪ್ಪಂದಂತೆ ಇದೇ ನ.20 ಕ್ಕೆೆ ಸಿದ್ದರಾಮಯ್ಯ ಅವರ ಅವಧಿ ಮುಕ್ತಾಾಯ ಆಗಿತ್ತು ಎನ್ನಲಾಗಿದೆ.
ಕೆ.ಎನ್ ರಾಜಣ್ಣ ಹೇಳಿದ ವೈಟ್ವಾಸ್ ಮಾತು :
ಸಚಿವ ಸ್ಥಾಾನ ಕಳೆದುಕೊಂಡ ನಂತರದಲ್ಲಿ ಕೆ.ಎನ್. ರಾಜಣ್ಣ ಅವರು, ಸಿದ್ದರಾಮಯ್ಯ ಕಾಂಗ್ರೆೆಸ್ಗೆ ಅನಿವಾರ್ಯ. ಒಂದು ವೇಳೆ ಅವರನ್ನು ಸಿಎಂ ಸ್ಥಾಾನದಿಂದ ಇಳಿಸಿದರೇ ಪಕ್ಷ ವೈಟ್ವಾಸ್ ಆಗುತ್ತದೆ ಎಂಬ ಮಾತುಗಳು ಕೂಡ ಹೈಕಮಾಂಡ್ ಎಚ್ಚರಿಕೆ ಹೆಜ್ಜೆೆ ಇಡುವಂತೆ ಮಾಡಿದೆ.
ನಂಬರ್ ಗೇಮ್ :
ಕೊನೆಗೆ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದಲ್ಲೇ ನಾಯಕತ್ವ ಬದಲಾವಣೆ ನಿರ್ಧಾರ ಆಗಲಿ ಎಂದು ಹೇಳಿದರೆ ಆಗ ಡಿಕೆಶಿ ನಿಲುವು ಆಘಾತಕಾರಿ ಆಗಿರಲಿಕ್ಕೆೆ ಸಾಧ್ಯವಿದೆ. ಅದಕ್ಕಾಾಗಿ ಹೈಕಮಾಂಡ್ ತನ್ನ ನಿರ್ಧಾರವನ್ನು ತ್ವರಿತವಾಗಿ ಪ್ರಕಟಿಸಬೇಕು. ಇಲ್ಲದಿದ್ದರೆ 2028 ರ ಚುನಾವಣೆವರೆಗೆ ಅಲ್ಲ. ಅದಕ್ಕೂ ಮುಂಚೆ ಕರ್ನಾಟಕದ ಭೂಪಟದಲ್ಲಿ ಕಾಂಗ್ರೆೆಸ್ ಪಾಲಿಗೆ ಮಾಯವಾಗಿರುತ್ತದೆ ಎಂದು ಹೇಳುತ್ತಿಿರುವುದನ್ನು ತಳ್ಳಿಿ ಹಾಕುವಂತಿಲ್ಲ.
ಮುಂದೆ ಪಶ್ಚಿಿಮಬಂಗಾಳ ಮತ್ತಿಿತರ ಕೆಲ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿಿದೆ. ತೆಲಂಗಾಣ ಒಂದರಿಂದಲೇ ಸಂಪನ್ಮೂಲ ಕ್ರೋೋಢೀಕರಣ ಸಾಧ್ಯವಿಲ್ಲ. ಹಾಗಾಗಿ ಏನೇ ಆಗಲಿ ಕರ್ನಾಟಕದಲ್ಲಿ ಕಾಂಗ್ರೆೆಸ್ ಸರ್ಕಾರವನ್ನು ಬದುಕಿಸಿಕೊಳ್ಳಲೇಬೇಕಾದ ಅನಿವಾರ್ಯ ರಾಹುಲ್ಗಾಂಧಿ ಅವರಿಗೆ ಇದೆ.

