ವೆಂಕಟೇಶ ಹೂಗಾರ ರಾಯಚೂರು, ನ.24:
ರಾಯಚೂರು ಜಿಲ್ಲೆೆಯಲ್ಲಿ ತುಂಗಭದ್ರಾಾ ಎಡದಂಡೆ ಕಾಲುವೆಗೆ 2ನೇ ಬೆಳೆಗೆ ನೀರು ಹರಿಸದಿರಲು ನಿರ್ಧರಿಸಿರುವ ಬೆನ್ನಲ್ಲೆೆ ಹಿಂಗಾರು ಹಂಗಾಮಿನಲ್ಲಿ 75 ಸಾವಿರ ಹೆಕ್ಟೆೆರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದುಘಿ, ಪರ್ಯಾಯ ಬೆಳೆ ಬೆಳೆಯುವ ಬಗ್ಗೆೆ ಇಲಾಖೆ ಹಾಗೂ ಕೃಷಿ ವಿಶ್ವ ವಿದ್ಯಾಾಲಯದ ವಿಜ್ಞಾನಿಗಳ ನಿರಾಸಕ್ತಿಿಗೆ ರೈತ ವಲಯದಲ್ಲಿ ಬೇಸರ ಮೂಡಿಸಿದೆ.
ಕಾಲುವೆಗೆ ನೀರಿಲ್ಲ ಎಂಬ ಕೊರಗಿನ ಮಧ್ಯೆೆಯೂ ಉತ್ತಮ ಮುಂಗಾರು ಹಿನ್ನೆೆಲೆಯಲ್ಲಿ ಈ ಬಾರಿ ಜಿಲ್ಲೆೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಗುರಿ ಹಿಗ್ಗಿಿದೆ. 2022-23ರಲ್ಲಿ ಹಿಂಗಾರು ಗುರಿ 1 ಲ 41 ಸಾವಿರ, 2024-25ರಲ್ಲಿ 1 ಲ 27 ಸಾ ಹೆಕ್ಟೆೆರ್ ಇದ್ದರೆ, ಈ ಬಾರಿಯ ಹಿಂಗಾರಿಗೆ 1 ಲ 33 ಸಾವಿರ ಹೆಕ್ಟೆೆರ್ ಪ್ರದೇಶದ ಗುರಿ ಇರಿಸಿಕೊಳ್ಳಲಾಗಿದೆ.
ಆದರೆ,ಸರ್ಕಾರ ಮಾತ್ರ ತುಂಗಭದ್ರಾಾ ಜಲಾಶಯದ ಗೇಟುಗಳ ಬದಲಾವಣೆ ಹಿನ್ನೆೆಲೆಯಲ್ಲಿ 2ನೇ ಬೆಳೆಗೆ ನೀರು ಹರಿಸಲಾಗದು ಎಂದು ಸ್ಪಷ್ಟಪಡಿಸಿದೆ. ಇದನ್ನು ಖಂಡಿಸಿ ಈಗಾಗಲೇ ಕೆಲ ರೈತ ಸಂಘಟನೆಗಳು, ಜೆಡಿಎಸ್ ಪ್ರತಿಭಟನೆ ಮಾಡಲು ಆರಂಭಿಸಿವೆ.
ಒಂದೊಮ್ಮೆೆ ಕಾಲುವೆ ನೀರು ಹರಿಸಿದ್ದರೆ ಸಿಂಧನೂರು, ಮಸ್ಕಿಿಘಿ, ಮಾನ್ವಿಿಯ ಭಾಗಶಃ ಜಮೀನುಗಳಲ್ಲಿ ಭತ್ತದ ನಾಟಿಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿಿತ್ತುಘಿ. ಆದರೆ, ಇದೀಗ ನೀರು ಹರಿಸುವುದಿಲ್ಲ ಎಂಬ ನಿರ್ಧಾರದ ಹಿನ್ನೆೆಲೆಯಲ್ಲಿ ಪರ್ಯಾಯ ಬೆಳೆ ಹಾಕುವ ಆಲೋಚನೆಯಲ್ಲಿದ್ದು ಸೂರ್ಯಕಾಂತಿ, ಕಡಲೆ, ಉದ್ದುಘಿ, ಹೆಸರು ಹಾಗೂ ಭೂಮಿಗೆ ಸತ್ವ ನೀಡುವ ಸಾವಯವ ಬೆಳೆ ಬೆಳೆಯಲು ಚಿಂತನೆ ಮಾಡುತ್ತಿಿದ್ದು ಅದಕ್ಕೆೆ ಅನುಗುಣವಾಗಿ ಇಲಾಖೆಯೂ ಗುರಿ ನಿಗದಿಪಡಿಸಿಕೊಂಡಿರುವುದು ಗೊತ್ತಾಾಗಿದೆ.
ಅಧಿಕಾರಿ, ಕೃಷಿ ವಿಜ್ಞಾನಿಗಳು ನಿಸ್ತೇಜ :
ರಾಯಚೂರು ಜಿಲ್ಲೆೆಯ ನೀರಾವರಿ ಆಶ್ರಿಿತ ಭತ್ತದ ಗದ್ದೆೆಗಳಲ್ಲಿ ಬೇರೆ ಬೆಳೆ ಬೆಳೆಯುವುದು ಅಸಾಧ್ಯ. ಹೀಗಾಗಿ, ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನಿಗಳು ರೈತರ ಜಮೀನುಗಳತ್ತ ಹೆಜ್ಜೆೆ ಹಾಕಿ ಪರ್ಯಾಯ ಬೆಳೆಗಳ ಬಿತ್ತನೆಗೆ ಪ್ರೋೋತ್ಸಾಾಹಿಸುವ ನಿರ್ಧಾರ ಮಾಡಬೇಕಿದೆ. ಆದರೆ, ಇದುವರೆಗೆ ಅಂತಹ ಯಾವುದೆ ಆಸಕ್ತಿಿಘಿ, ಕಾರ್ಯಾಗಾರಗಳಾಗಲಿ, ರೈತರಿಗೆ ಜಾಗೃತಿ ಮೂಡಿಸುವುದಾಗಲಿ ಮಾಡುತ್ತಿಿಲ್ಲ ಎಂಬ ಬೇಸರ ರೈತರಲ್ಲಿದೆ.
ಭತ್ತವನ್ನೇ ತಮ್ಮ ಒಕ್ಕಲುತನ ಎಂದು ಭಾವಿಸಿದ ರೈತರು ಈಗ ಕಂಗಾಲಾಗುವಂತಾಗಿದ್ದು ಗದ್ದೆೆಯಲ್ಲಿ ಏನೆ ಬೆಳೆ ಹಾಕಿದರೂ ಸಣ್ಣ ಮಳೆಗೂ ಹಾಳಾಗುವ ದುಗುಡವಿದೆ. ಹೀಗಾಗಿ ಉದ್ದುಘಿ, ಪಿಳ್ಳಿಿಪೆಸರು, ಸೋಯಾ ಸೇರಿ ಭೂಮಿಗೆ ಸತು ತರುವ ಬೆಳೆ ಬಿತ್ತನೆಯೊಂದೆ ಮಾರ್ಗ ಎಂಬಂತಾಗಿದೆ.
ಇಂತಹ ಸನ್ನಿಿವೇಶದಲ್ಲಿ ಇಲಾಖೆ ಮತ್ತು ಕೃಷಿ ವಿಜ್ಞಾನಿಗಳು ಜಮೀನುಗಳತ್ತ ತೆರಳಿ ರೈತರಿಗೆ ಪರ್ಯಾಯ ಬೆಳೆಯ ಬಗ್ಗೆೆ ಅರಿವು ಮೂಡಿಸಿ ಮನವರಿಕೆ ಮಾಡಿಕೊಡುವ ಸವಾಲು ಎದುರಾಗಿದ್ದು ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸವಾಲು ನಿಭಾಯಿಸುವ ಬದ್ದತೆ ತೋರಿಸಬೇಕೆಂಬ ಒತ್ತಾಾಯವಿದೆ.
ನೀರಾವರಿ ರೈತರಿಗೆ ನಿರಾಸೆ :
ಈ ಬಾರಿ ಉತ್ತಮ ಮಳೆಯಾಗಿದೆ, ಜಲಾಶಯದಲ್ಲೂ ನೀರಿದೆ ಇನ್ನೇನು ಎರಡೂ ಬೆಳೆ ಸಮೃದ್ದಿಯಾಗಿ ಬೆಳೆಯಬಹುದು ಎಂದು ಭಾವಿಸಿದ್ದ ಜಿಲ್ಲೆೆಯ ಸಿಂಧನೂರು, ಮಸ್ಕಿಿಘಿ, ಮಾನ್ವಿಿ ತಾಲೂಕಿನ ರೈತರಿಗೆ ನಿರಾಸೆ ತಂದೊಡ್ಡಿಿದೆ.
ಜಿಲ್ಲೆೆಯಲ್ಲಿ ಈ ಬಾರಿ ನೀರಾವರಿ ಪ್ರದೇಶದಲ್ಲಿ 3500 ಹೆಕ್ಟೆೆರ್ ಜಮೀನಿನಲ್ಲಿ ಭತ್ತ ಬೆಳೆಯಬಹುದೆಂಬ ಅಂದಾಜು ಇಲಾಖೆಯಲ್ಲಿದೆ. ಆದರೆ, ನೀರಿಲ್ಲದ ಕಾರಣ ಈ ಗುರಿ ತಲುಪುವುದು ಕಷ್ಟ ಎಂಬ ಮಾತೂ ಕೇಳಿ ಬಂದಿದೆ.
ಈ ಮಧ್ಯೆೆ ಈಗಾಗಲೇ ರಾಯಚೂರು ಮಸ್ಕಿಿ ಹೊರತು ಪಡಿಸಿ ಜಿಲ್ಲೆೆಯ ಸಿಂಧನೂರು, ಲಿಂಗಸೂಗೂರು, ಸಿರವಾರ ಮಾನ್ವಿಿಘಿ, ದೇವದುರ್ಗ ತಾಲೂಕಿನಲ್ಲಿ ಅರ್ಧಕ್ಕರ್ಧ ಬಿತ್ತನೆ ಮುಗಿಸಿದ್ದಾಾರೆ. ಲಿಂಗಸೂಗೂರು ತಾಲೂಕಿನಲ್ಲಂತೂ ಶೇ.93ರಷ್ಟು ಗುರಿ ಸಾಧಿಸಿರುವುದಾಗಿ ಕೃಷಿ ಇಲಾಖೆ ವರದಿ ಸಿದ್ದಪಡಿಸಿದೆ.
————–
ಬಾಕ್ಸ್ -1 :
1ಲ 33 ಗುರಿ,75 ಸಾವಿರ ಹೆಕ್ಟೆೆರ್ ಬಿತ್ತನೆ :
ಜಿಲ್ಲೆೆಯಲ್ಲಿ ಕೃಷಿ ಇಲಾಖೆ ಹಿಂಗಾರು ಹಂಗಾಮಿಗಾಗಿ ನೀರಾವರಿ ಮತ್ತು ಒಣ ಪ್ರದೇಶದಲ್ಲಿ ಹಾಕಿಕೊಂಡ ಬಿತ್ತನೆ ಗುರಿ ಗಮನಿಸುವುದಾದರೆ 1 ಲಕ್ಷದ 33 ಸಾ 955 ಹೆಕ್ಟೆೆರ್ ಪೈಕಿ ಈಗಾಗಲೇ 75 ಸಾ 492 ಹೆಕ್ಟೆೆರ್ನಲ್ಲಿ ವಿವಿಧ ಬೆಳೆ ಬಿತ್ತನೆ ಮಾಡಲಾಗಿದೆ.
ಈ ಪೈಕಿ ರಾಯಚೂರು ತಾಲೂಕಿನಲ್ಲಿ 9600 ಹೆಕ್ಟೆೆರ್ ಗುರಿ ಪೈಕಿ 815 ಹೆ.ನಲ್ಲಿ ಬಿತ್ತನೆಯಾಗಿದ್ದರೆ, ಮಾನ್ವಿಿ ತಾಲೂಕಿನಲ್ಲಿ 24205 ಹೆಕ್ಟೆೆರ್ ಪೈಕಿ 7150 ಹೆ ಬಿತ್ತನೆ ಮಾಡಿದ್ದು ಸಿರವಾರ ತಾಲೂಕಿನಲ್ಲಿ 10105 ಹೆಕ್ಟೆೆರ್ ಪೈಕಿ 3930 ಹೆ ಬಿತ್ತನೆ ಮಾಡಲಾಗಿದೆ.
ದೇವದುರ್ಗ ತಾಲೂಕಿನಲ್ಲಿ 7330 ಹೆಕ್ಟೆೆರ್ ಪೈಕಿ 4150 ಹೆ ಬಿತ್ತನೆ ಮಾಡಲಾಗಿದ್ದರೆ, ಲಿಂಗಸೂಗೂರಲ್ಲಿ 38,105 ಹೆಕ್ಟೆೆರ್ ಪೈಕಿ 35,736 ಹೆ ಬಿತ್ತಿಿದ್ದು ಮಸ್ಕಿಿ ತಾಲೂಕಿನಲ್ಲಿ 27070 ಹೆಕ್ಟೆೆರ್ ಪೈಕಿ 2270 ಹೆ ಮತ್ತು ಸಿಂಧನೂರಿನಲ್ಲಿ 17540 ಹೆಕ್ಟೆೆರ್ ಪೈಕಿ 21440 ಹೆಕ್ಟೆೆರ್ನಲ್ಲಿ ಬಿತ್ತನೆ ಮಾಡಲಾಗಿದೆ.
ಈ ಬಾರಿ 55 ಸಾವಿರ ಹೆಕ್ಟೆೆರ್ ಪ್ರದೇಶದಲ್ಲಿ ಜೋಳದ ಗುರಿ ಇದ್ದು 31 ಸಾ ಹೆಕ್ಟೆೆರ್ನಲ್ಲಿ ಬಿತ್ತನೆಯಾಗಿದ್ದುಘಿ, ಕಡಲೆ 50 ಸಾ ಹೆಕ್ಟೆೆರ್ ಪೈಕಿ 29 ಸಾ.ಹೆ. ಬಿತ್ತಿಿದ್ದುಘಿ, ಶೇಂಗಾ 17 ಸಾವಿರ ಪೈಕಿ 14 ಸಾ ಹೆಕ್ಟೆೆರ್ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದೆ. ಕಡಲೆ , ಹಿಂಗಾರು ಜೋಳದ ಕ್ಷೇತ್ರ ಹೆಚ್ಚಿಿರುವುದು ಗಮನಾರ್ಹ.
——————
ಬಾಕ್ಸ್-2 :
ಕಳೆದ ವರ್ಷ ಹೀಗಿತ್ತು :
ಜಿಲ್ಲೆೆಯ ವಿವಿಧ ತಾಲೂಕಿನಲ್ಲಿ ಕಳೆದ ವರ್ಷದ ಹಿಂಗಾರು ಬಿತ್ತನೆಯ ಗುರಿ ಹಾಕಿಕೊಂಡದ್ದು ಗಮನಿಸುವುದಾದರೆ ರಾಯಚೂರು ತಾಲೂಕಿನಲ್ಲಿ 6835 ಹೆಕ್ಟೆೆರ್ ಗುರಿ ನಿಗದಿಯಾಗಿದ್ದು ಮಾನ್ವಿಿ ತಾಲೂಕಿನಲ್ಲಿ 12519 ಹೆಕ್ಟೆೆರ್ ಸಿರವಾರ 7179 ಹೆಕ್ಟೆೆರ್, ದೇವದುರ್ಗ ತಾಲೂಕಿನಲ್ಲಿ 13025 ಹೆಕ್ಟೆೆರ್,ಲಿಂಗಸೂಗೂರಲ್ಲಿ 35245 ಹೆ., ಮಸ್ಕಿಿ ತಾಲೂಕಿನಲ್ಲಿ 30740 ಹೆ., ಮತ್ತು ಸಿಂಧನೂರಿನಲ್ಲಿ 21585 ಹೆಕ್ಟೆೆರ್ ಗುರಿ ನಿಗದಿಯಾಗಿತ್ತುಘಿ.
ಕಳೆದ ಬಾರಿ 49,900 ಹೆಕ್ಟೆೆರ್ನಲ್ಲಿ ಜೋಳ, ಕಡಲೆ 45413 ಹೆ., ಶೇಂಗಾ 30 ಸಾವಿರ ಹೆ. ಜಮೀನಿನಲ್ಲಿ ಬಿತ್ತನೆ ಗುರಿ ಇತ್ತುಘಿ.
—————–
ಕೋಟ್- 1:
ಜಿಲ್ಲೆೆಯಲ್ಲಿ ಈ ಬಾರಿ ಹಿಂಗಾರಿಗೆ ಎಡದಂಡೆ ಕಾಲುವೆಗೆ ನೀರು ಹರಿಸದೆ ಇದ್ದರೂ, ಉತ್ತಮ ಮುಂಗಾರು ಮಳೆಯಾದ ಕಾರಣ ಹಿಂಗಾರಿನಲ್ಲಿ 1 ಲ 33 ಸಾ ಹೆಕ್ಟೆೆರ್ ಗುರಿ ಇದ್ದು ಶೇ.65ರಷ್ಟು ಬಿತ್ತನೆಯಾಗಿದೆ. ನೀರಿಲ್ಲದ ಕಾರಣ ಪರ್ಯಾಯ ಬೆಳೆ ಬೆಳೆಯಲು ಇಲಾಖೆ, ವಿಜ್ಞಾನಿಗಳ ಜೊತೆ ಸೇರಿ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸುತ್ತೇವೆ. ವಾಣಿಜ್ಯ ಬೆಳೆ ಬೆಳೆಯಲು ಕಷ್ಟ ಆದರೆ, ಭತ್ತದ ಗದ್ದೆೆಗೆ ಸತ್ವ ತುಂಬುವ ಹಗುರ ಬೆಳೆ ಹಾಕುವ ಬಗ್ಗೆೆ ಮನವರಿಕೆ ಮಾಡಿಕೊಡುತ್ತೇವೆ.
– ಡಾ.ಜಯಪ್ರಕಾಶ, ಜಂಟಿ ನಿರ್ದೇಶಕ ಕೃಷಿ ಇಲಾಖೆ.
—————–
ಕೋಟ್-2 :
ಹಿಂಗಾರಿಗೆ ಕಾಲುವೆ ನೀರು ಹರಿಸದೆ ಗೇಟುಗಳ ಜೊತೆಗೆ ಕಿರು ಸೇತುವೆಗಳ ದುರಸ್ತಿಿಗೂ ಅನುದಾನ ನೀಡುವ ಭರವಸೆ ಸರ್ಕಾರ ನೀಡಿದ್ದರಿಂದ ಸ್ವಾಾಗತಿಸುತ್ತೇವೆ. ಆದರೆ, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನಿಗಳು ಈ ಅವಕಾಶ ಬಳಸಿಕೊಂಡು ಪರ್ಯಾಯ ಬೆಳೆ ಬೆಳೆಯಲು ರೈತರ ಜಮೀನುಗಳಿಗೆ ತೆರಳಬೇಕಾಗಿದೆ. ಆ ಕಾರ್ಯ ನಮಗೆ ಕಾಣುತ್ತಿಿಲ್ಲಘಿ ಇಂತಹ ಸಂದರ್ಭದಲ್ಲಿ ಆಸರೆಗೆ ಧಾವಿಸದಿದ್ದರೆ ಇದ್ದು ಪ್ರಯೋಜನವೇನು.
— ಚಾಮರಸ ಮಾಲಿಪಾಟೀಲ, ಗೌರವಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ.

