ಸುದ್ದಿಮೂಲ ವಾರ್ತೆ ಬೆಂಗಳೂರು, ನ.25:
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎ್) ರಾಜ್ಯ, ದೇಶದಷ್ಟೇ ಅಲ್ಲ ಈಗ ವಿದೇಶಗಳಲ್ಲಿಯೂ ಮಾರುಕಟ್ಟೆೆ ವಿಸ್ತರಿಸಿದ್ದು, ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರ್ತು ಪ್ರಾಾರಂಭ ಮಾಡಿದೆ.
ನಂದಿನಿ ತುಪ್ಪವನ್ನು ವಿದೇಶಗಳಿಗೆ ರ್ತು ಮಾಡುವ ವಾಹನಗಳಿಗೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಇಂದು ಕಾವೇರಿ ನಿವಾಸದ ಬಳಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಂದಿನಿ ತುಪ್ಪಕ್ಕೆೆ ಬೇಡಿಕೆ ಹೆಚ್ಚಾಾಗಿದೆ. ದೇಶದಲ್ಲಿ ಅಷ್ಟೇ ಅಲ್ಲ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆೆ ಬೇಡಿಕೆಯಿದೆ. ಇದು ಹೆಮ್ಮೆೆಯ ವಿಚಾರ ಎಂದು ಹೇಳಿದರು.
ಮೂಲತಃ ಮೈಸೂರು ಜಿಲ್ಲೆಯವರಾದ ಕುಮಾರ ಎಂಬುವರು ಅಮೆರಿಕಾದಲ್ಲಿ ನೆಲೆಸಿದ್ದು, ಇದರ ಏಜೆನ್ಸಿಿ ಪಡೆದಿದ್ದಾರೆ. ಅಮೆರಿಕಾ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ ಸೇರಿ ಹಲವು ಕಡೆಗಳಲ್ಲಿ ಮಾರುಕಟ್ಟೆೆ ವಿಸ್ತರಣೆ ಮಾಡಲು ಮುಂದಾಗಿದ್ದು, ಅವರಿಗೆ ಮತ್ತು ಕೆಎಂಎ್ಗೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಿ ಸಚಿವೆ ಲಕ್ಷ್ಮೀ ಹೆಬ್ಬಾಾಳ್ಕರ್, ಶಾಸಕ ಬಾದರ್ಲಿ ಹಂಪನಗೌಡ, ಕೆಎಂಎ್ ವ್ಯವಸ್ಥಾಾಪಕ ನಿರ್ದೇಶಕ ಬಿ. ಶಿವಸ್ವಾಾಮಿ, ಕೆಎಂಎ್ ಮಾರುಕಟ್ಟೆೆ ನಿರ್ದೇಶಕ ರಘುನಂದನ್ ಸೇರಿ ಕೆಎಂಎ್ ಅಧಿಕಾರಿಗಳು ಭಾಗವಹಿಸಿದ್ದರು
14 ಟನ್ ತುಪ್ಪ ರ್ತು: ಬಿ. ಶಿವಸ್ವಾಾಮಿ
ನಂದಿನಿ ತುಪ್ಪಕ್ಕೆೆ ವಿದೇಶಗಳಿಂದ ಬೇಡಿಕೆ ಬಂದಿದ್ದು ಇದು ರಾಜ್ಯದ ರೈತರಿಗೆ ಸಂತಸದ ವಿಚಾರ. ಅಮೆರಿಕಾ, ಆಸ್ಟ್ರೇಲಿಯಾ, ಸೌದಿ ಸೇರಿ ಈಗ ಮೊದಲ ಹಂತದಲ್ಲಿ 14 ಟನ್ ತುಪ್ಪವನ್ನು ರ್ತು ಮಾಡಲಾಗುತ್ತಿಿದೆ ಎಂದು ಕೆಎಂಎ್ ವ್ಯವಸ್ಥಾಾಪಕ ನಿರ್ದೇಶಕ ಬಿ. ಶಿವಸ್ವಾಾಮಿ ಹೇಳಿದರು.
ಕೆಎಂಎ್ ಪ್ರಸ್ತುತ ದುಬೈ, ಖತಾರ್, ಬ್ರುನೈ, ಮಾಲ್ಡೀವ್ಸ್ ಹಾಗೂ ಸಿಂಗಾರ್ಪೂ ದೇಶಗಳು ಸೇರಿದಂತೆ ಭಾರತೀಯರು, ವಿಶೇಷವಾಗಿ ಕನ್ನಡಿಗರು ಹೆಚ್ಚಾಾಗಿ ನೆಲೆಸಿರುವ ನೆರೆಯ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ನಂದಿನಿ ಯುಹೆಚ್ಟಿಿ ಟೆಟ್ರಾಾಪ್ಯಾಾಕ್ ಹಾಲು, ತುಪ್ಪ, ಚೀಸ್, ಡೇರಿ ವೈಟ್ನರ್, ಬೆಣ್ಣೆೆ, ಐಸ್ಕ್ರೀಂ, ಸುವಾಸಿತ ಹಾಲು, ಸಿಹಿ ಉತ್ಪನ್ನ, ಸೇವರೀಸ್ ಅನ್ನು ರ್ತು ಮಾಡಲಾಗುತ್ತಿಿದೆ. ಜಾಗತಿಕ ಮಟ್ಟದಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಅಭಿವೃದ್ಧಿಿಪಡಿಸಲು ಕ್ರಮ ವಹಿಸಲಾಗುತ್ತಿಿದೆ ಎಂದು ಹೇಳಿದರು.
ಅಮೆರಿಕಾದಲ್ಲಿ ನಡೆದಿದ್ದ ನಾವಿಕ ಸಮ್ಮೇಳನದಲ್ಲಿ ಪಾಲ್ಗೊೊಂಡು ಪಾಲ್ಗೊೊಂಡು ಹೊಸ ವಿನ್ಯಾಾಸದ ಪ್ಯಾಾಕ್ನ ನಂದಿನಿ ತುಪ್ಪ ಹಾಗೂ ಸಿಹಿ ಉತ್ಪನ್ನಗಳನ್ನು ಈ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಅದರ ಆಧಾರದ ಮೇಲೆ ನಡೆದ ಮಾರುಕಟ್ಟೆೆ ಸಮೀಕ್ಷೆಯಲ್ಲಿ ನಂದಿನಿ ತುಪ್ಪಕ್ಕೆೆ ಬೇಡಿಕೆ ಕಂಡುಬಂತು. ಈ ಹಿನ್ನೆೆಲೆಯಲ್ಲಿ ಕರುನಾಡಿನ ಹೆಮ್ಮೆೆಯ ತುಪ್ಪವನ್ನು ವಿದೇಶಗಳಿಗೆ ರ್ತು ಮಾಡಲಾಗುತ್ತಿಿದೆ ಎಂದು ಹೇಳಿದರು.
ವಿದೇಶಗಳಿಗೆ ರ್ತು ಮಾಡುವ ಉದ್ದೇಶದಿಂದ ್ರ್ಯಾಂಚೈಸಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಿಂದ ಚೆನ್ನೈ ಮತ್ತು ಕೇರಳದ ಕೊಚ್ಚಿಿವರೆಗೆ ವಿಶೇಷವಾಗಿ ಸಿದ್ಧಪಡಿಸಲಾದ ವಾಹನಗಳಲ್ಲಿ ತೆರಳಿ, ಅಲ್ಲಿಂದ ಹಡಗುಗಳ ಮೂಲಕ ವಿದೇಶಕ್ಕೆೆ ತಪ್ಪ ರ್ತು ಮಾಡಲಾಗುತ್ತದೆ ಎಂದು ವಿವರಿಸಿದರು.
ಆಸ್ಟ್ರೇಲಿಯಾ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ರ್ತು ಮಾಡುವ ವಾಹನಗಳಿಗೆ ಚಾಲನೆ ಮೂರು ದೇಶಗಳಿಗೆ ನಂದಿನಿ ತುಪ್ಪ ರ್ತು: ಸಿದ್ದರಾಮಯ್ಯ

