ಸುದ್ದಿಮೂಲ ವಾರ್ತೆ ಮಾನ್ವಿಿ, ನ.24:
ಮಾನ್ವಿಿ ಪಟ್ಟಣದ ಸಿಂಧನೂರು ರಸ್ತೆೆಯ ಹೊರವಲಯದ ಪೆಟ್ರೋೋಲ್ ಬಂಕ್ ಬಳಿ ಹೆದ್ದಾರಿ ಮೇಲೆ ಯು ಟರ್ನ್ ತೆಗೆದುಕೊಳ್ಳುತ್ತಿಿದ್ದ ಎಳೆ ನೀರು ತೆಂಗಿನ ಕಾಯಿ ತುಂಬಿದ ಟ್ರಕ್ ಗೆ ಶಾರದಾ ವಿದ್ಯಾಾನಿಕೇತನ ಶಾಲಾ ವಾಹನ ಢಿಕ್ಕಿಿ ಹೊಡೆದ ಪರಿಣಾಮ ಶಾಲಾ ವಾಹನದಲ್ಲಿದ್ದ ಏಳೆಂಟು ಜನ ವಿದ್ಯಾಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ಮಂಗಳವಾರ ಸಾಯಂಕಾಲ ಜರುಗಿದೆ.
ಸಾಯಂಕಾಲ ಶಾಲೆ ಅವಧಿ ನಂತರ ಶಾರದಾ ಶಾಲಾ ವಾಹನ ಮಕ್ಕಳನ್ನು ಕರೆದುಕೊಂಡು ಮಾನ್ವಿಿಯಿಂದ ಹಿರೇಕೊಟ್ನೆೆಕಲ್ ಗ್ರಾಾಮಕ್ಕೆೆ ತೆರಳುತ್ತಿಿತ್ತು. ಇದರಲ್ಲಿ 16 ಮಕ್ಕಳು ಇದ್ದರು ಎಂದು ಹೇಳಲಾಗುತ್ತಿಿದೆ.
ಶಾಲಾ ವಾಹನ ಢಿಕ್ಕಿಿ ಹೊಡೆದ ಪರಿಣಾಮ ಮುಂದಿನ ಸೀಟಿನಲ್ಲಿ ಕುಳಿತಿದ್ದ ಹಿರೇಕೊಟ್ನೆೆಕಲ್ ಗ್ರಾಾಮದ 4 ನೇ ತರಗತಿಯ ಸನ್ನಿಿಧಿ ಎಂಬ ಬಾಲಕಿಗೆ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆೆಗೆ ದಾಖಲಿಸಿ ಚಿಕಿತ್ಸೆೆ ಕೊಡಿಸಲಾಗಿದೆ. ಉಳಿದಂತೆ 7 ನೇ ತರಗತಿಯ ವಿನೂತ, ಶ್ರಾಾವಣಿ, ವೈಷ್ಣವಿ ಸೇರಿದಂತೆ 8 ವಿದ್ಯಾಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆೆ ನೀಡಲಾಗಿದೆ. ವಾಹನದಲ್ಲಿದ್ದ ಎಲ್ಲಾ ವಿದ್ಯಾಾರ್ಥಿಗಳು ಹಿರೇಕೊಟ್ನೆೆಕಲ್ ಗ್ರಾಾಮದವರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಶಾರದಾ ಶಾಲೆಯ ಮುಖ್ಯಸ್ಥರು, ಶಿಕ್ಷಕರು ಮತ್ತು ಪಾಲಕರು ಆಸ್ಪತ್ರೆೆಗೆ ಆಗಮಿಸಿ ಮಕ್ಕಳಿಗೆ ಚಿಕಿತ್ಸೆೆ ಕೊಡಿಸಿ ಯೋಗಕ್ಷೇಮ ವಿಚಾರಿಸಿದರು.
ಘಟನೆ ಕುರಿತಂತೆ ಲಾರಿ ಮತ್ತು ಶಾಲಾ ವಾಹನ ವಶಕ್ಕೆೆ ಪಡೆದ ಮಾನ್ವಿಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಾನ್ವಿಿ: ಟ್ರಕ್ಗೆ ಶಾಲಾ ವಾಹನ ಢಿಕ್ಕಿಿ-8 ವಿದ್ಯಾಾರ್ಥಿಗಳಿಗೆ ಗಾಯ

