ಸುದ್ದಿಮೂಲ ವಾರ್ತೆ ಸಿಂಧನೂರು, ನ.25:
ಅತಿವೃಷ್ಠಿಿಯಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾಾರೆ. ರೈತರ ನೆರವಿಗೆ ಬರಲು ರಾಜ್ಯ ಕಾಂಗ್ರೆೆಸ್ ಸರಕಾರದಲ್ಲಿ ಹಣವಿಲ್ಲ. ರೈತರನ್ನು ಉಳಿಸಲು ಆಗುತ್ತಿಿಲ್ಲ. ರೈತರಿಗೆ ಸ್ವಾಾಭಿಮಾನದ ಬದುಕು ನೀಡಿದ ಕಾಂಗ್ರೆೆಸ್ ಸರಕಾರ ಗ್ಯಾಾರಂಟಿ ಯೋಜನೆಗಳು ಯಾವನಿಗೆ ಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಾಮಿ ಆಕ್ರೋೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆೆಸ್ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ, ತುಂಗಭದ್ರಾಾ ಎಡದಂಡೆ ನಾಲೆಗೆ ಎರಡನೇ ಬೆಳೆಗೆ ನೀರು ಕೊಡಬೇಕು. ಇಲ್ಲವೇ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು. ಇಲ್ಲವೇ ರೈತರ ಸಾಲ ಮನ್ನಾಾ ಮಾಡಬೇಕು ಎಂದು ಆಗ್ರಹಿಸಿ ರಾಯಚೂರು, ಕೊಪ್ಪಳ, ಬಳ್ಳಾಾರಿ, ವಿಜಯನಗರ ಜಿಲ್ಲೆೆಗಳ ಜೆಡಿಎಸ್ ಪಕ್ಷದಿಂದ ಹಮ್ಮಿಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಅತಿವೃಷ್ಠಿಿಯಿಂದ ಕಲ್ಯಾಾಣ ಕರ್ನಾಟಕ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ರೈತರ ಬದುಕು ಬೀದಿಪಾಲಾಗಿದೆ. ಆಡಳಿತ ಪಕ್ಷಕ್ಕೆೆ ಮಾನ-ಮರ್ಯಾದೆ ಇಲ್ಲವಾಗಿದೆ. ದಪ್ಪ ಚರ್ಮದ ಸರಕಾರಕ್ಕೆೆ ಛಾಟಿ ಬೀಸಲು ಈ ಬೃಹತ್ ರೈತ ಹೋರಾಟ ಹಮ್ಮಿಿಕೊಳ್ಳಲಾಗಿದೆ ಎಂದರು.
ತುಂಗಭದ್ರಾಾ ನಾಲ್ಕು ಜಿಲ್ಲೆೆಗಳ ಜೀವನಾಡಿ. ಭೂಮಿ ತಾಯಿ ನಂಬಿ ರೈತರು ಬದುಕುತ್ತಿಿದ್ದಾಾರೆ. ರೈತರ ಬದುಕಿನ ಗ್ಯಾಾರಂಟಿಯ ಬಗ್ಗೆೆ ಕಾಂಗ್ರೆೆಸ್ ಸರಕಾರ ಮಾತನಾಡುತ್ತಿಿಲ್ಲ. ಹಿಂದೆ ಜಲಾಶಯದಲ್ಲಿ ನೀರು ಕಡಿಮೆಯಿದ್ದಾಾಗಲೂ ಕುಮಾರಸ್ವಾಾಮಿ ಅವರು ಮುಖ್ಯಮಂತ್ರಿಿ ಇದ್ದಾಾಗ ಭದ್ರಾಾ ಜಲಾಶಯದಿಂದ ನೀರು ತಂದು ಎರಡನೇ ಬೆಳೆಗೆ ಕೊಡಲಾಗಿದೆ. ರೈತರ ಹಿತದೃಷ್ಠಿಿಯಿಂದಲೇ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆೆ ಕುಮಾರಸ್ವಾಾಮಿ ಅವರು ಡಿಪಿಆರ್ ಸಿದ್ದಪಡಿಸಿದ್ದರು. ಕಾಂಗ್ರೆೆಸ್ ಸರಕಾರ ಕಣ್ಣು ಮುಚ್ಚಿಿ ಕುಳಿತಿದೆ. ಕಳೆದ ವರ್ಷ ಗೇಟ್ ರಿಪೇರಿ ಮಾಡಿದರಿಗೂ ಹಣ ನೀಡಿಲ್ಲ. ಈಗ ಕೆಲಸ ಮಾಡುತ್ತಿಿರುವವರಿಗೂ ಹಣ ನೀಡಿಲ್ಲ. ಜಲಸಂಪನ್ಮೂಲ ಸಚಿವ, ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ ರೈತರ ಬಗ್ಗೆೆ ಆಲೋಚಿಸದೇ ಶಾಸಕರ ಖರೀದಿ ಬಗ್ಗೆೆ ಆಲೋಚನೆ ಮಾಡುತ್ತಿಿದ್ದಾಾರೆ ಎಂದು ಆರೋಪಿಸಿದರು.
ಗಡುವು:
ಎಡದಂಡೆ ನಾಲೆಗೆ ಎರಡನೇ ಬೆಳೆಗೆ ನೀರು ಹರಿಸಬೇಕು. ಇಲ್ಲವೇ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು. ಇದು ಸಾಧ್ಯವಾಗದಿದ್ದರೆ ರೈತರ ಸಾಲ ಮನ್ನಾಾ ಮಾಡಬೇಕು. ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ನಿಲ್ಲುವದಿಲ್ಲ. 10 ದಿನಗಳ ಗಡುವು ನೀಡುತ್ತಿಿದ್ದೇವೆ. ಸರಕಾರ ಸ್ಪಂದಿಸದಿದ್ದರೆ ತುಂಗಭದ್ರಾಾ ಜಲಾಶಯಕ್ಕೆೆ ಮುತ್ತಿಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ ಬಾಬು, ಮಾಜಿ ಸಚಿವ ವೆಂಕಟರಾವ ನಾಡಗೌಡ, ಶಾಸಕರಾದ ನೇಮಿರಾಜ ನಾಯ್ಕ್, ಜಿ.ಕರಿಯಮ್ಮ ನಾಯಕ, ಮಾಜಿ ಸಚಿವ ಹನುಮಂತಪ್ಪ ಆಲ್ಕೋೋಡ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಿ.ವಿ.ಚಂದ್ರಶೇಖರ, ಸಿದ್ದು ಬಂಡಿ, ಜೆಡಿಎಸ್ ಜಿಲ್ಲಾಾಧ್ಯಕ್ಷ ಎಂ.ವಿರೂಪಾಕ್ಷಿ, ಜಿಲ್ಲಾಾ ಕಾರ್ಯಾಧ್ಯಕ್ಷ ಶಿವಶಂಕರ, ತಾಲ್ಲೂಕಾಧ್ಯಕ್ಷ ಬಸವರಾಜ ನಾಡಗೌಡ, ನಗರ ಘಟಕದ ಅಧ್ಯಕ್ಷ ರವಿಕುಮಾರ ಪನ್ನೂರು, ವೆಂಕಟೇಶ ನಂಜಲದಿನ್ನಿಿ, ಧರ್ಮನಗೌಡ ಮಲ್ಕಾಾಪುರ, ಡಿ.ಸತ್ಯನಾರಾಯಣ, ಜಿ.ಎಸ್.ಸತ್ಯನಾರಾಯಣ, ಅಶೋಕಗೌಡ ಗದ್ರಟಗಿ, ಸುಮಿತ್ ತಡಕಲ್, ಅಲ್ಲಮಪ್ರಭು ಪೂಜಾರ್, ಅಜಯ್ ದಾಸರಿ ಸೇರಿದಂತೆ ಅನೇಕರು ಇದ್ದರು.
ಬಾಕ್ಸ್
ಬೃಹತ್ ಪ್ರತಿಭಟನೆ:
ಭತ್ತ ಖರೀದಿ ಕೇಂದ್ರ ಆರಂಭಿಸಿ ಭತ್ತಕ್ಕೆೆ 500 ಪ್ರೋೋತ್ಸಾಾಹ ಧನ ನೀಡಬೇಕು. ತುಂಗಭದ್ರಾಾ ಡ್ಯಾಾಂ ಗೇಟ್ ಅಳವಡಿಸಿ, ಎರಡನೇ ಬೆಳೆಗೆ ನೀರು ಕೊಡಲು ಆಗ್ರಹಿಸಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಾಮಿ, ಮಾಜಿ ಸಚಿವ ವೆಂಕಟರಾವ ನಾಡಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ಜೆಡಿಎಸ್ ನಾಯಕರು ಎತ್ತಿಿನ ಬಂಡಿಗಳಲ್ಲಿ ಪ್ರತಿಭಟನೆ ಯಾತ್ರೆೆ ನಡೆಸಿದರು. ನಗರದ ಕೋಟೆ ಈರಣ್ಣ ದೇವಸ್ಥಾಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯೂ ನಗರದ ಕನಕದಾಸ ವೃತ್ತ, ಗಾಂಧಿವೃತ್ತ, ಬಸವವೃತ್ತ, ಜಗಜೀವನರಾಮ್ ವೃತ್ತ ಮೂಲಕ ಎಪಿಎಂಸಿ ವರೆಗೆ ಸಾಗಿತು. ದಾರಿಯುದ್ದಕ್ಕೂ ರಾಜ್ಯ ಕಾಂಗೆರಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ನಾಲ್ಕು ಜಿಲ್ಲೆೆಗಳ ಜೆಡಿಎಸ್ ಶಾಸಕರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ರೈತರು ಭಾಗವಹಿಸಿದ್ದರು.
ಕೋಟ್..1
ಕಾಂಗ್ರೆೆಸ್ ಸರಕಾರ ಅಧಿಕಾರಕ್ಕೆೆ ಬಂದ ನಂತರ ಅಭಿವೃದ್ದಿ ಕುಂಠಿತವಾಗಿದೆ. ರಾಜ್ಯಾಾದ್ಯಂತ ರೈತರು ಹೋರಾಟ ಮಾಡಿದರೆ ಖುರ್ಚಿಗಾಗಿ ಸಿಎಂ, ಡಿಸಿಎಂ ಕಾದಾಟ ಮಾಡುತ್ತಿಿದ್ದಾಾರೆ. ರೈತರ ಸಮಸ್ಯೆೆಗಳಿಗೆ ಸ್ಪಂದಿಸದಿದ್ದರೆ ವಿಧಾನಸೌಧ ಬಿಟ್ಟು ತೊಲಗಿ.
– ಕೃಷ್ಣಾಾರೆಡ್ಡಿಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ
ಕೋಟ್-2
ಕೆಲಸ ಮಾಡುವವರನ್ನು ನೀವು ಮನೆಯಲ್ಲಿ ಕೂಡಿಸಿದ್ದೀರಿ, ಕೆಲಸ ಮಾಡದವರನ್ನು ವಿಧಾನಸಭೆಗೆ ಕಳುಹಿಸಿದ್ದೀರಿ. ರೈತ ವಿಷ ಕುಡಿಯುವ ಪರಿಸ್ಥಿಿತಿ ಬಂದಿದೆ. ರೈತರ ಶಾಪ ತಟ್ಟಿಿದವರು ಶಾಶ್ವತವಾಗಿ ಮನೆಯಲ್ಲಿಯೇ ಕೂರಬೇಕಾಗುತ್ತದೆ.
– ಶರಣಗೌಡ ಕಂದಕೂರು, ಗುರುಮಿಟಕಲ್ ಶಾಸಕ
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಾಮಿ ಆಕ್ರೋೋಶ ರೈತರಿಗೆ ಸ್ವಾಾಭಿಮಾನದ ಬದುಕು ನೀಡದ ಕಾಂಗ್ರೆೆಸ್ ಸರಕಾರ ಗ್ಯಾಾರಂಟಿಗಳು ಯಾವನಿಗೆ ಬೇಕು

