ಸುದ್ದಿಮೂಲ ವಾರ್ತೆ ಸಿರವಾರ , ನ.26:
ಭಾರತದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನದ ಪೀಠಿಕೆಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಬುಧವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸರಕಾರಿ ಬಾಲಕರ ಪ್ರೌೌಢ ಶಾಲೆಯವರೆಗೆ ಮೆರವಣಿಗೆ ನಡೆಯಿತು.
ನಂತರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ತಹಶಿಲ್ದಾಾರರ ಅಶೋಕ ಪರ್ವಾ ಉದ್ಘಾಾಟಿಸಿದರು. ನಂತರ ಮಾತನಾಡಿ ಸಂವಿಧಾನದ ನಿಯಮ ಪಾಲನೆ ಎಲ್ಲರ ಕರ್ತವ್ಯ ಹಾಗೂ ಸಂವಿಧಾನದ ಹಕ್ಕುಗಳ ಮೂಲಕ ಸೌಲಭ್ಯಗಳನ್ನು ಪಡೆಯಲು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ.ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ, ತಾ.ಪಂ. ಇಓ ಶಶಿಧರಸ್ವಾಾಮಿ, ಪ್ರಾಾಚಾರ್ಯರಾದ ಹನುಮಂತ ಚನ್ನೂರು, ನೌಕರರ ಸಂಘದ ಅಧ್ಯಕ್ಷರಾದ ಆರೀ ಮಿಯ್ಯಾಾ ಸೇರಿದಂತೆ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದ ದಲಿತ ಪರ ಸಂಘಟನೆ ಪದಾಧಿಕಾರಿಗಳು, ವಿದ್ಯಾಾರ್ಥಿಗಳು ಇದ್ದರು.ಚಿಕ್ಕ ಚಿಕ್ಕ ಮಕ್ಕಳು ನೃತ್ಯ ಮತ್ತು ಸಂಗೀತದಲ್ಲಿ ಅಂತರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡಿದ್ದು ಈ ಶಾಲೆಯ ಸಂಸ್ಥಾಾಪಕರ ಅಪಾರ ಕೂಡುಗೆ ಇದೆ ಎಂದು ಯಾಟಗಲ್ ಹೇಳಿದರು.
ನಾದಲಹರಿ ಸಂಗೀತ ಮತ್ತು ನೃತ್ಯ ಪಾಠ ಶಾಲೆಯ ಮಕ್ಕಳು ಸಂಗೀತ ಮತ್ತು ನೃತ್ಯ ಮಾಡಿದರೆ, ನೂತನವಾಗಿ ಆಗಮಿಸಿದ ವಿದ್ಯಾಾರ್ಥಿಗಳಿಂದ ನೃತ್ಯ ಪೂಜೆ, ಜತೆಯಲ್ಲಿ ಈ ಶಾಲೆಯಲ್ಲಿ ಅಭ್ಯಾಾಸ ಮಾಡುವ ಪಾಲಕರು,ತಾಯಂದಿ ಕೂಡ ನೃತ್ಯ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮವನ್ನು ಚುಟುಕು ಸಾಹಿತ್ಯ ಪರಷತ್ತಿಿನ ತಾಲೂಕ ಅಧ್ಯಕ್ಷ ಮೈನುದ್ದೀನ್ ಕಾಟಮಳ್ಳಿಿ ಉದ್ಘಾಾಟಿಸಿದರೆ, ಅಧ್ಯಕ್ಷತೆಯನ್ನು ಬಿ.ಜೆ.ಪಿ. ಮಹಿಳಾ ಘಟಕದ ಅಧ್ಯಕ್ಷರಾದ ಮಲ್ಲಮ್ಮ ಛಾವಣಿ, ಬಸವ ಕೇಂದ್ರದ ಅಧ್ಯಕ್ಷರಾದ ಸುಭಾಶ್ಚಂದ್ರ ಪಾಟೀಲ್, ಸಂಗೀತ ಪಾಠ ಶಾಲೆಯ ಸಂಸ್ಥಾಾಪಕರಾದ ರಮೇಶ ಮಸರಕಲ್ ಮಾತನಾಡಿದರೆ, ಮಾತೋಶ್ರೀ ಗಿರಿಜಮ್ಮ , ಭಾರತಿ ಕೋಟಿಮಠ, ಕುಮಾರಿ ಅಶ್ವಿಿನಿ, ಕುಮಾರಿ ಸಂಜನಾ ಸೇರಿದಂತೆ ಮಕ್ಕಳು ಪಾಲಕರು ಉಪಸ್ಥಿಿತರಿದ್ದರು.
ಸಿರವಾರ: ಸಂವಿಧಾನ ಸಮರ್ಪಣಾ ದಿನಾಚರಣೆ

