ಸುದ್ದಿಮೂಲ ವಾರ್ತೆ ರಾಯಚೂರು, ನ.26:
ಮಾದಿಗ ಸಮಾಜದ ಆದರ್ಶ ಪುರುಷ, ಆದ್ಯವಚನಕಾರ ಮಹಾಶಿವಶರಣ ಬಸವ ಮಾದರ ಚೆನ್ನಯ್ಯನವರ ಜಯಂತಿಯನ್ನು ಹೊಸ್ತಿಿಲ ಹುಣ್ಣಿಿಮೆಯ ಅಂಗವಾಗಿ ಡಿ.4 ರಂದು ನಗರದ ವಾಡರ್ ನಂ.12 ರ ಅಶೋಕ ಡಿಪೋ ಹತ್ತಿಿರದ ಮಾದಾರ ಚೆನ್ನಯ್ಯ ವೃತ್ತದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಮಾಜದ ಮುಖಂಡರಾದ ಹೆಚ್.ಕೆ.ರವಿಕುಮಾರ್ ತಿಳಿಸಿದರು.
ಅವರಿಂದು ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ವಾಡರ್ 12,13,14 ರಲ್ಲಿನ ಜನರು ಹಾಗೂ ನಗರದ ಸರ್ವರೂ ಸೇರಿ 12 ನೇ ಶತಮಾನದ ಲ್ಲಿ ಬಸವೇಶ್ವರರ ಎಲ್ಲಾ ಕಾರ್ಯಗಳಿಗೆ ಬೆಂಬಲವಾಗಿ ನಿಂತು ಕಲ್ಯಾಾಣ ಕಾಂತ್ರಿಿಗೆ ಕಾರಣೀಭೂತರಾದ ಶಿವಶರಣ ಚಿಂತನೆಯನ್ನು ಸಮಾಜದ ತಿಳಿಸುವ ಹಿನ್ನೆೆಲೆಯ ಜಯಂತಿ ಆಚರಿಸಲಾಗುತ್ತಿಿದೆ ಎಂದರು.
ಡಿ.4 ರಂದು ಬೆಳಿಗ್ಗೆೆ ಚೆನ್ನಯ್ಯರವರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿ , ಪೂಜಾ ಕಾರ್ಯಕ್ರಮ ನೆರವೇರಿಸಿ ಪ್ರಸಾದ ವ್ಯವಸ್ಥೆೆಯನ್ನು ಮಾಡಲಾಗಿದ್ದು ನಂತರ ಪೌರಕಾರ್ಮಿಕರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಗೌರವಿಸಲಾಗುವುದು ಈ ಕಾರ್ಯಕ್ರಮದಲ್ಲಿ ಸಚಿವರು , ಸ್ಥಳೀಯ ಶಾಸಕರುಗಳು , ಸಂಸದರು , ಸಮಾಜದ ಸ್ವಾಾಮೀಜಿಗಳು ಉಪಸ್ಥಿಿತರಿರಲಿದ್ದು ಸಮಾಜದ ಬಾಂಧವರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಿಗೊಳಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಿಯಲ್ಲಿ ಸಮಾಜದ ಮುಖಂಡರಾದ ಚಂದ್ರು ಭಂಡಾರಿ , ತಿಮ್ಮಯ್ಯ , ಗೋವಿಂದ ಸೇರಿದಂತೆ ಇನ್ನಿಿತರರು ಉಪಸ್ಥಿಿತರಿದ್ದರು.
ವಿವಿಧ ಸ್ಪರ್ಧೆಗಳು:
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶಾಸೀಯ ನೃತ್ಯ, ಸುಗಮ ಸಂಗೀತ, ಜಾನಪದ ಗೀತೆಗಳು. ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರ್ ಬಯಲು ರಂಗಮಂದಿರದಲ್ಲಿ ಚಿತ್ರಕಲಾ ಸ್ಪರ್ಧೆ (ಸ್ವಕಲ್ಪಿಿತ), ನಗರದ ಸಾಂಸ್ಕೃತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಹಿಂದೂಸ್ಥಾಾನಿ/ಕರ್ನಾಟಕ ಶಾಸೀಯ ವಾದ್ಯ, ಹಿಂದೂಸ್ಥಾಾನಿ/ಕರ್ನಾಟಕ ಶಾಸೀಯ ಸಂಗೀತ ಸ್ಪರ್ಧೆಗಳನ್ನು ಹಮ್ಮಿಿಕೊಳ್ಳಲಾಯಿತು. ಸ್ಪರ್ಧೆಯಲ್ಲಿ ಸುಮಾರು 60ಕ್ಕಿಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ನೀಡಿದರು.
ಹಿರಿಯ ರಂಗಭೂಮಿ ಕಲಾವಿದರಾದ ವೀಣಾ ಕುಮಾರಿ, ಹಿರಿಯ ನೃತ್ಯ ಕಲಾವಿದರಾದ ವನಮಾಲಾ ಕುಲಕರ್ಣಿ, ಜಿಲಾನಿ ಭಾಷಾ, ಚಿತ್ರದುರ್ಗ ಜಿಲ್ಲೆೆಯ ಹಿರಿಯ ಕಲಾವಿದ ತಿಪ್ಪೇಸ್ವಾಾಮಿ, ಹಿರಿಯ ಜಾನಪದ ಗಾಯಕ ಯಲ್ಲನಗೌಡ ಶಂಕರಬಂಡೆ, ಹಿರಿಯ ವಾದಕರಾದ ಶಕುಂತಲಮ್ಮ, ಹಿರಿಯ ಚಿತ್ರ ಕಲಾವಿದ ಜಾಧವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಚೋರನೂರು ಕೊಟ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ತೀರ್ಪುಗಾರರು, ಇಲಾಖೆಯ ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಡಿ. 4 ರಂದು ಮಹಾಶರಣ ಮಾದಾರ ಚೆನ್ನಯ್ಯ ಜಯಂತಿ- ಹೆಚ್.ಕೆ ರವಿಕುಮಾರ್

