ಸುದ್ದಿಮೂಲ ವಾರ್ತೆ ಸಿಂಧನೂರು, ನ.26:
ಇತ್ತೀಚೆಗೆ ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿಿರುವ ಅತ್ಯಾಾಚಾರ, ಲೈಂಗಿಕ ದೌರ್ಜನ್ಯ, ಹಿಂಸೆ, ಕಿರುಕುಳ ತಡೆಗಟ್ಟಲು ಪೋಕ್ಸೋೋ ಕಾಯ್ದೆೆ ದಿವ್ಯಾಾಸವಾಗಿದೆ ಎಂದು ಆಕ್ಸರ್ಡ್ ಸಮೂಹ ಶಿಕ್ಷಣ ಸಂಸ್ಥೆೆ ಅಧ್ಯಕ್ಷ ಸತ್ಯನಾರಾಯಣ ಶ್ರೇೇಷ್ಠಿಿ ಅಭಿಪ್ರಾಾಯಪಟ್ಟರು.
ತಾಲೂಕಿನ ಅಲಬನೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ತೃಪ್ತಿಿ ಎಜುಕೇಶನ್ ಟ್ರಸ್ಟ್ ಹಾಗೂ ಪೊಲೀಸ್ ಇಲಾಖೆಯಿಂದ ಹಮ್ಮಿಿಕೊಂಡಿದ್ದ ಪೋಕ್ಸೋೋ ಕಾಯ್ದೆೆಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚೆಗೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಾಚಾರ, ಸಾಮೂಹಿಕ ಅತ್ಯಾಾಚಾರ ಪ್ರಕರಣಗಳು ಹೆಚ್ಚುತ್ತಿಿವೆ. ಇಂತಹ ಪ್ರಕರಣಗಳು ನಾಗರಿಕ ಸಮಾಜ ತಲೆ ತಗ್ಗಿಿವಂತೆ ಮಾಡುತ್ತವೆ. ಬಾಲಕಿಯರ ಭದ್ರತೆ, ಸುರಕ್ಷತೆ, ರಕ್ಷಣೆಗೆ ಸಮಾಜದ ಪ್ರತಿಯೊಬ್ಬರು ಹೊಣೆಯಾಗಿದೆ ಎಂದರು.
ವಿಜಡಮ್ ಕಾಲೇಜಿನ ಪ್ರಾಾಚಾರ್ಯ ಆರ್.ಅನಿಲಕುಮಾರ್ ಕಾರ್ಯಕ್ರಮ ಉದ್ಘಾಾಟಿಸಿದರು. ನೋಬೆಲ್ ಕಾಲೇಜಿನ ಅಧ್ಯಕ್ಷ ಪರಶುರಾಮ ಮಲ್ಲಾಾಪುರ, ಉಪನ್ಯಾಾಸಕರಾದ ಮಹಿಬೂಬ್, ಮೌನೇಶ, ರವಿಕುಮಾರ ಸಾಸಲಮರಿ, ಶಂಕರಗೌಡ ಬೂತಲದಿನ್ನಿಿ, ಪಂಪಾಪತಿ ಕಲ್ಮಂಗಿ, ಒಳಬಳ್ಳಾಾರಿ ಶಿವಯೋಗಿ ಚನ್ನಬಸವೇಶ್ವರ ಸರಕಾರ ್ರೌಢ ಶಾಲೆಯ ಶಿಕ್ಷಕ ರಾಮರೆಡ್ಡಿಿ ಹುಡಾ, ಮಾಡಶಿರವಾರ ಸರಕಾರಿ ಪ್ರೌೌಢಶಾಲೆಯ ಮುಖ್ಯಗುರು ವೆಂಕಟೇಶ ಕುಲಕರ್ಣಿ ವೇದಿಕೆಯಲ್ಲಿದ್ದರು.
ವಿದ್ಯಾಾರ್ಥಿನಿಯರಿಗೆ ಭಿತ್ತಿಿಪತ್ರಗಳನ್ನು ನೀಡುವ ಮೂಲಕಜ ಪೋಕ್ಸೋೋ ಕಾಯ್ದೆೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಪೋಕ್ಸೋ ಕಾಯ್ದೆ ಕುರಿತು ಅರಿವು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ದಿವ್ಯಾಸ

