ಸುದ್ದಿಮೂಲ ವಾರ್ತೆ ಮಾನ್ವಿ, ನ.26:
ಸಮಾಜ ಸೇವಕ ಹನುಮಂತ ಕೋಟೆಯವರ ಸಾಮಾಜಿಕ ಸೇವಾ ಕಾರ್ಯ ಶ್ಲಾಾಘನೀಯ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಬುಧವಾರ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ವತಿಯಿಂದ ಬಡವರ ಬಂಧು ಕಾರ್ಯಾಲಯದಲ್ಲಿ ಹಮ್ಮಿಿಕೊಂಡಿದ್ದ ಮಾಜಿ ಯೋಧರು, ಸೈನಿಕರು ಮತ್ತು ರೈತರಿಗೆ ಹಮ್ಮಿಿಕೊಂಡಿದ್ದ ಸನ್ಮಾಾನ ಸಮಾರಂಭ ಉದ್ಘಾಾಟಿಸಿ ಮಾತನಾಡುತ್ತಿಿದ್ದರು.
ಕಷ್ಟದಲ್ಲಿರುವವರಿಗೆ ಕರುಣೆಯಾಗಿ, ದೀನರಿಗೆ ದಯೆಯಾಗಿ, ನೋವಿನಲ್ಲಿರುವವರ ಪಾಲಿನ ಧ್ವನಿಯಾಗಿ ಸೇವೆ ಸಲ್ಲಿಸುತ್ತಿಿರುವ ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಸಂಸ್ಥಾಾಪಕ ಅಧ್ಯಕ್ಷ ಹನುಮಂತ ಕೋಟೆಯವರ ಸಾಮಾಜಿಕ ಸೇವಾ ಕಾರ್ಯಗಳಿಗೆ ನಾವೆಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಭಾರತೀಯ ಸೇವಾ ಸಮಿತಿಯ ಸಂಸ್ಥಾಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಡಾ. ಹೂಡಿ ರಾಮಚಂದ್ರ ಚಿನ್ನಿಿ ಮತ್ತು ಬೆಂಗಳೂರಿನ ಯುವಶಕ್ತಿಿ ಸೂರಿ ಸಂವಿಧಾನದ ಮಹತ್ವದ ಕುರಿತು ಹಾಗೂ ಸರ್ವಧರ್ಮವೆಲ್ವೇರ್ ಟ್ರಸ್ಟ್ ಮೂಲಕ ಹಮ್ಮಿಿಕೊಳ್ಳುತ್ತಿಿರುವ ಸೇವಾ ಕಾರ್ಯಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಾಡಿದರು.
ಗ್ರೇೇಡ್-2 ತಹಸೀಲ್ದಾಾರ್ ಅಬ್ದುಲ್ ವಾಹೀದ್, ಕಸಾಪ ಜಿಲ್ಲಾ ಕಾರ್ಯದರ್ಶಿ ಹಾಗೂ ಪತ್ರಕರ್ತ ತಾಯಪ್ಪ ಬಿ.ಹೊಸೂರು ಮಾತನಾಡಿ ಸಂವಿಧಾನ ಸಮರ್ಪಣಾ ದಿನದಂದು ದೇಶದ ರಕ್ಷಣೆಗಾಗಿ ದುಡಿದ ಮಾಜಿ ಯೋಧರು ಹಾಗೂ ಹಗಲಿರುಳು ಶ್ರಮಿಸುವ ಅನ್ನದಾತ ಬಂಧುಗಳಿಗೆ ವಿಶೇಷ ಗೌರವ ಸಮರ್ಪಣೆ ಮಾಡಿರುವುದು ಅಭಿನಂದನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್ ಸಂಸ್ಥಾಾಪಕ ಅಧ್ಯಕ್ಷ ಹನುಮಂತ ಕೋಟೆ ಮಾತನಾಡಿದರು.
ಈ ಸಮಾರಂಭದಲ್ಲಿ ಹೋರಾಟಗಾರ ಈರೇಶ ಹುಲುಗುಂಚಿ, ಭಾರತೀಯ ಸೇವಾ ಸಮಿತಿ ರಾಯಚೂರು ಜಿಲ್ಲಾಧ್ಯಕ್ಷ ಬಿ. ತಿಮ್ಮಪ್ಪ, ಮಾನ್ವಿಿ ತಾಲೂಕಾಧ್ಯಕ್ಷ ಮೋತಿ ರಾಘವೇಂದ್ರ ಸೇರಿದಂತೆ ಅನೇಕ ಮುಖಂಡರು, ಟ್ರಸ್ಟನಸದಸ್ಯರು, ಪೌರ ಕಾರ್ಮಿಕರು ಭಾಗವಹಿಸಿದ್ದರು.
ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಮಾಜಿ ಯೋಧರಿಗೆ, ರೈತರಿಗೆ ಸನ್ಮಾಾನ ಹನುಮಂತ ಕೋಟೆಯವರ ಸಾಮಾಜಿಕ ಸೇವಾ ಕಾರ್ಯ ಶ್ಲಾಾಘನೀಯ – ರಾಜಾ ವೆಂಕಟಪ್ಪ ನಾಯಕ

