ಸುದ್ದಿಮೂಲ ವಾರ್ತೆ ಮಸ್ಕಿಿ, ನ.27:
ರಸ್ತೆೆಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ 06 ತಿಂಗಳಾದರೂ ರಸ್ತೆೆ ಮಾಡದೆ ಗುತ್ತೇದಾರ ನಾಪತ್ತೆೆಯಾಗಿರುವ ಪರಿಶಿಷ್ಟ ಜಾತಿ ಮೆಟ್ರಿಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾಾರ್ಥಿಗಳು ಹಲವು ಸಮಸ್ಯೆೆಗಳನ್ನು ಎದುರಿಸುವಂತಾಗಿದೆ.
ಪಟ್ಟಣದ ಕವಿತಾಳ ಮುಖ್ಯ ರಸ್ತೆೆಯಿಂದ ಪರಿಶಿಷ್ಟಜಾತಿ ಮೆಟ್ರಿಿಕ್ ನಂತರದ ಬಾಲಕರ ವಸತಿ ನಿಲಯದ 01.ಕಿ.ಮೀ ರಸ್ತೆೆ ಹಾಳಾಗಿತ್ತು.ರಸ್ತೆೆ ದುರಸ್ತಿಿ ಹೆಸರಲ್ಲಿ ಇರುವ ಹಳೆ ರಸ್ತೆೆಯನ್ನು ಅಗೆದು ಜಲ್ಲಿ ಕಲ್ಲು ಹಾಕಿ ಆರು ತಿಂಗಳಿಂದ ಗುತ್ತಿಿಗೆದಾರರು ನಾಪತ್ತೆೆಯಾಗಿದ್ದಾರೆ. ಶಾಸಕ ಆರ್.ಬಸನಗೌಡ ತುರುವಿಹಾಳ ಅವರು ಅನುದಾನ ಮಂಜೂರು ಮಾಡಿಸಿ ಭೂಮಿ ಪೂಜೆ ಮಾಡಿದ್ದರು.
ಆದರೆ ಗುತ್ತಿಿಗೆದಾರರೊಬ್ಬರು ಕಾಮಗಾರಿಯಗುತ್ತಿಿಗೆ ಪಡೆದು ರಸ್ತೆೆಗೆ ಜಲ್ಲಿಕಲ್ಲು ಹಾಕಿ ಹೋದವರು ಇತ್ತ ಮುಖ ಮಾಡಿಲ್ಲ.
ಇದರಿಂದ ಈ ರಸ್ತೆೆಯಲ್ಲಿ ವಿದ್ಯಾಾರ್ಥಿಗಳು ಸಂಚಾರ ಮಾಡುವುದಕ್ಕೆೆ ಮತ್ತು ವಾಹನಗಳ ಸಂಚಾರಕ್ಕೆೆ ಸಂಚಕಾರ ಉಂಟಾಗಿದೆ. ಜಲ್ಲಿ ಕಲ್ಲುನಿಂದ ಕೂಡಿದ ರಸ್ತೆೆಯಲ್ಲಿ ಹಗಲಲ್ಲೇ ವಾಹನಗಳನ್ನು ಚಲಾಯಿಸಲು ಹರಸಾಹಸ ಮಾಡಬೇಕು. ಇನ್ನೂ ರಾತ್ರಿಿ ಹೇಳ ತೀರದ ಕಥೆಯಾಗಿದೆ. ನಿತ್ಯ ವಸತಿ ನಿಲಯದಿಂದ ವಾಹನಗಳು ಜಲ್ಲಿಕಲ್ಲು ತುಂಬಿರುವ ರಸ್ತೆೆಯಲ್ಲಿ ಸಮಯಕ್ಕೆೆ ಸಂಚರಿಸಲಾಗದೆ ವಿದ್ಯಾಾರ್ಥಿಗಳು ಈ ಕಲ್ಲಿನ ಮೇಲೆ ದಿನನಿತ್ಯ ಕಾಲೇಜಿಗೆ ಬರಿ ಕಾಲಿನ ಮೇಲೆ ನಡೆದುಕೊಂಡು ಹೋಗುವಾಗ ಜಲ್ಲಿ ಕಲ್ಲುಗಳು ತಾಗಿ ರಕ್ತ ಬರುತ್ತದೆ ನಮ್ಮಗೋಳು ಕೇಳುವವರು ಯಾರು ಎಂದು ವಿದ್ಯಾಾರ್ಥಿಗಳು ದೂರಿದ್ದಾಾರೆ.
ಇನ್ನಾಾದರೂ ಸಂಬಂಧಪಟ್ಟ ನಿರ್ಮಿತಿ ಕೇಂದ್ರದ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ವಿದ್ಯಾಾರ್ಥಿಗಳಿಗೆ, ಆಗುತ್ತಿಿರುವ ನರಕಯಾತನೆ ತಪ್ಪಿಿಸಿ ರಸ್ತೆೆ ನಿರ್ಮಾಣ ಮಾಡಿ ಕೊಡುತ್ತಾಾರೆಯೇ ಎಂದು ಕಾದುನೋಡಬೇಕಾಗಿದೆ.
ಇನ್ನು ಎಷ್ಟು ದಿನ ಜಲ್ಲಿ ಕಲ್ಲು ಮೇಲೆ ನಡಿಗೆ ವಿದ್ಯಾಾರ್ಥಿಗಳ ಗೋಳು ಕೇಳುವ ಅಧಿಕಾರಿಗಳು ಎಲ್ಲಿದ್ದೀರಪ್ಪಾಾ!

