ಸುದ್ದಿಮೂಲ ವಾರ್ತೆ ಬೀದರ, ನ.27:
ಜಿಲ್ಲೆಯ ಹುಲಸೂರು, ಮನ್ನಾಾಎಖ್ಖೆೆಳ್ಳಿಿ ಹಾಗೂ ಕಮಠಾಣ ಗ್ರಾಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಟ್ಟಣ, ನಗರ ಪ್ರದೇಶಗಳು ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ತಮ್ಮ ಅವಧಿಯಲ್ಲಿ ಬೀದರ್ ಜಿಲ್ಲೆಗೆ ವಿಶೇಷ ಆದ್ಯತೆ ಕೊಡಲಾಗಿದೆ. ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಹುಮನಾಬಾದ್ ಪುರಸಭೆಗೆ ನಗರಸಭೆ, ಹುಲಸೂರು, ಮನ್ನಾಾಎಖ್ಖೆೆಳ್ಳಿಿ ಹಾಗೂ ಕಮಠಾಣ ಗ್ರಾಾಮ ಪಂಚಾಯಿತಿಗಳಿಗೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದೆ ಬಸವಕಲ್ಯಾಾಣ ಶಾಸಕರು ಹುಲಸೂರು ಗ್ರಾಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಬೇಡಿಕೆ ಮಂಡಿಸಿದ್ದರು. ಆದರೆ, ಹಿಂದಿನ ಅವರದೇ ಬಿಜೆಪಿ ಸರ್ಕಾರ ಪ್ರಸ್ತಾಾವವನ್ನು ತಿರಸ್ಕರಿಸಿತ್ತು. ಕಾಂಗ್ರೆೆಸ್ ಸರ್ಕಾರ ಜನರ ಭಾವನೆಗೆ ಸ್ಪಂದಿಸಿ ಹುಲಸೂರು ಗ್ರಾಾಮ ಪಂಚಾಯಿತಿಗೆ ಪಟ್ಟಣ ಪಂಚಾಯಿತಿ ಸ್ಥಾಾನಮಾನ ಕೊಡಲು ನಿರ್ಣಯಿಸಿದೆ ಎಂದು ಹೇಳಿದ್ದಾರೆ.
ಮೂರು ಗ್ರಾಾಮ ಪಂಚಾಯತ್ಗಳು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೆ : ರಹೀಮ್ ಖಾನ್

