ಧಿ ಸುದ್ದಿಮೂಲ ವಾರ್ತೆ ಬೆಂಗಳೂರು, ನ.27:
ಬೆಂಗಳೂರು ನಗರದ ನಾಗರಿಕರು ಬಾಕಿ ಇರುವ ನೀರಿನ ಬಿಲ್ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೇ ಬಡ್ಡಿಿ ಮನ್ನಾಾ ಮಾಡುವ ಮಹತ್ವದ ನಿರ್ಣಯವನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಕೈಗೊಂಡಿತು.
ಬಾಕಿ ಇರುವ ನೀರಿನ ಬಿಲ್ ಪಾವತಿಸಿದರೆ ಬಡ್ಡಿಿ ಮನ್ನಾಾ ಮಾಡಲು ನಿರ್ಧರಿಸಲಾಗಿದೆ. ಬಾಕಿ ಅಸಲು ಮೊತ್ತವನ್ನು ಏಕ ಕಾಲದಲ್ಲಿ ಪಾವತಿಸಿದರೆ ಬಡ್ಡಿಿ ಮನ್ನಾಾ ಮಾಡುವಂತ ನಿರ್ಧಾರ ಕೈಗೊಂಡಿದೆ.
ಬೆಂಗಳೂರು ನಗರ ವ್ಯಾಾಪ್ತಿಿಯಲ್ಲಿ ನೀರಿನ ಬಾಕಿ 701.71 ಕೋಟಿ ರೂ. ಇದೆ. ಇದರಲ್ಲಿ ಅಸಲು ಮೊತ್ತ 439.03 ಕೋಟಿ ರೂ. ಆಗಿದೆ. ಬಡ್ಡಿಿ 262.68 ಕೋಟಿ ರೂ. ಇದೆ. ಅಸಲು ಮೊತ್ತವನ್ನು ಒಂದೇ ಬಾರಿಗೆ ಪಾವತಿ ಮಾಡಿದರೆ ಬಡ್ಡಿಿ ಮನ್ನಾಾವಾಗಲಿದೆ. ಒಂದೇ ಬಾರಿ ಅಸಲು ಪಾವತಿ ಮಾಡಲು ಸರ್ಕಾರ ಮೂರು ತಿಂಗಳ ಗಡುವು ನೀಡಿದೆ. ಈ ಅವಧಿಯಲ್ಲಿ ಅಸಲು ಪಾವತಿ ಮಾಡಿದರೇ ಬಡ್ಡಿಿ ಮನ್ನವಾಗಲಿದೆ. ಜಲಮಂಡಳಿಗೆ ಸಂಪನ್ಮೂಲ ಕ್ರೋೋಢೀಕರಣ ಮಾಡಲು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಶರಾವತಿ ನದಿಗೆ ಬ್ರಿಿಡ್ಜ್ ಕಂ ಬ್ಯಾಾರೇಜ್ ನಿರ್ಮಾಣಕ್ಕೆೆ 200 ಕೋಟಿ ಮೊತ್ತದ ಯೋಜನೆಗೆ ಒಪ್ಪಿಿಗೆ ನೀಡಲಾಗಿದೆ. ಮುಳ್ಕೋೋಡು ಗ್ರಾಾಮದ ಬಳಿ ನಿರ್ಮಾಣ ಮಾಡಲಾಗುತ್ತಿಿದೆ.ಜಿಬಿಎ ವ್ಯಾಾಪ್ತಿಿಯಲ್ಲಿ ಘನತ್ಯಾಾಜ್ಯ ನಿರ್ವಹಣೆಗೆ 100 ಕೋಟಿ ಮೊತ್ತದಲ್ಲಿ ಬಿಎಸ್ಡಬ್ಲೂಎಂಎಲ್ ಮೂಲಕ ಅನುಷ್ಠಾಾನವಾಗಲಿದೆ. ತಿಪ್ಪಗೊಂಡನಹಳ್ಳಿಿ ಜಲಾನಯನದ ಬರ್ ಜೋನ್ ಮರುನಿಗದಿಗೆ ಒಪ್ಪಿಿಗೆ ನೀಡಿದೆ. ಕರ್ನಾಟಕ ವಿವಿ ತಿದ್ದುಪಡಿ ವಿಧೇಯಕಕ್ಕೆೆ ಒಪ್ಪಿಿಗೆ ನೀಡಲಾಗಿದೆ.
ಕಬ್ಬಿಿಣದ ಅದಿರು ನೀತಿ-2025ಕ್ಕೆೆ ಒಪ್ಪಿಿಗೆಯನ್ನು ಸಂಪುಟ ನೀಡಿದೆ. ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ಸಹಕಾರ ಸಂಘ ಸ್ಥಾಾಪನೆಗೂ ನಿರ್ಧರಿಸಲಾಗಿದೆ. ನ್ಯಾಾಯಾಂಗ ಸೇವೆ ನಿಯಮಗಳಿಗೆ ತಿದ್ದುಪಡಿಗೆ ಒಪ್ಪಿಿಗೆಯನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನೀಡಲಾಗಿದೆ.
ರಾಜ್ಯ ದತ್ತಾಾಂಶ ಕೇಂದ್ರದ ಕಾರ್ಯಾಚರಣೆ ವಿಪತ್ತು ಹಾಗೂ ಚೇತರಿಕಾ ಕೇಂದ್ರದ ನಿರ್ವಹಣಾ ಸೇವೆ ಎರಡು ಸೇವೆ ನೀಡುವ ಸಂಸ್ಥೆೆಯ ಆಯ್ಕೆೆಗೆ ಒಪ್ಪಿಿಗೆ ನೀಡಲಾಗಿದೆ. 143.6 ಕೋಟಿ ವೆಚ್ಚದಲ್ಲಿ 5 ವರ್ಷದ ಅವಧಿಗೆ ಒಪ್ಪಿಿಗೆ ಸೂಚಿಸಲಾಗಿದೆ.
ಆಯುಷ್ಮಾಾನ್ ಆರೋಗ್ಯ ಮಂದಿರ ನಿರ್ಮಾಣವನ್ನು 74 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಒಪ್ಪಿಿಗೆ ನೀಡಲಾಗಿದೆ. ರಾಜ್ಯ ಖಾಸಗಿ ವೈದ್ಯಕೀಯ ತಿದ್ದುಪಡಿ ವಿಧೇಯಕಕ್ಕೆೆ ಒಪ್ಪಿಿಗೆ ನೀಡಿದೆ. ಔಷಧ ಸೌಂದರ್ಯವರ್ಧಕ ವಿಧೇಯಕಕ್ಕೆೆ ಒಪ್ಪಿಿಗೆಯನ್ನು ನೀಡಲಾಗಿದೆ. ಸಿನಿ, ಸಾಂಸ್ಕೃತಿಕ ಕ್ಷೇಮಾಭಿವೃದ್ಧಿಿ ವಿಧೇಯಕಕ್ಕೆೆ ಒಪ್ಪಿಿಗೆ ಸೂಚಿಸಿದೆ. ಕೆಕೆ ಪ್ರದೇಶಗಳಲ್ಲಿ ಚೆಕ್ ಡ್ಯಾಾಂ ನಿರ್ಮಾಣ ಮಾಡಲಾಗುತ್ತಿಿದೆ. ಕೆರೆ ಅಭಿವೃದ್ಧಿಿಗಳ ನಿರ್ಮಾಣಕ್ಕೆೆ ಅನುದಾನವಾಗಿ 200 ಕೋಟಿ ಅನುದಾನಕ್ಕೆೆ ಸಂಪುಟ ಒಪ್ಪಿಿಗೆ ನೀಡಿದೆ ಎಂದರು.
ರಾಜ್ಯ ಹಜ್ ಸಮಿತಿ ನಿಯಮಾವಳಿಗೆ ಒಪ್ಪಿಿಗೆ ಸೂಚಿಸಲಾಗಿದೆ. ಹಿಂಡಲಗದಲ್ಲಿ ಕಾಂಗ್ರೆೆಸ್ ಭವನ ನಿರ್ಮಾಣಕ್ಕೆೆ 20 ಗುಂಟೆ ಜಾಗ ಕಾಂಗ್ರೆೆಸ್ ಟ್ರಸ್ಟ್ಗೆ ನೀಡಲು ಸಮ್ಮತಿಸಲಾಗಿದೆ. ಕುದೂರಿನಲ್ಲಿ ಬಸ್ ನಿಲ್ದಾಾಣ ನಿರ್ಮಾಣಕ್ಕೆೆ ಒಪ್ಪಿಿಗೆ ನೀಡಲಾಗಿದೆ. 3.12 ಎಕರೆ ಭೂಮಿ ಉಚಿತ ನೀಡಲು ಒಪ್ಪಿಿಗೆ ನೀಡಿದೆ. ಕೆಎಸ್ಆರ್ಟಿಸಿಗೆ ಭೂಮಿ ನೀಡಲು ಒಪ್ಪಿಿಗೆ ನೀಡಲಾಗಿದೆ ಎಂದರು.
ಮುಧೋಳದಲ್ಲಿ ಕಾಂಗ್ರೆೆಸ್ ಭವನ ನಿರ್ಮಾಣಕ್ಕೆೆ ಜಾಗ. ಝಂಜರಕೊಪ್ಪ ಗ್ರಾಾಮದಲ್ಲಿ 1077 ಚ.ಮೀ.ಜಾಗ ನೀಡಲಾಗುತ್ತಿಿದೆ. ಕಾಂಗ್ರೆೆಸ್ ಟ್ರಸ್ಟ್ಗೆ ಜಾಗ ನೀಡಲು ಸಮ್ಮತಿಸಲಾಗಿದೆ. ಸಾಂಸ್ಥಿಿಕ ಸಾಮಾಜಿಕ ಹೊಣೆಗಾರಿಕೆ ನೀತಿಗೆ ಅನುಮೋದನೆ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾಾನಕ್ಕೆೆ ಒಪ್ಪಿಿಗೆ ನೀಡಲಾಗಿದೆ. ನಗರಾಭಿವೃದ್ಧಿಿ ಪ್ರಾಾಧಿಕಾರ ವಿಧೇಯಕಕ್ಕೆೆ ಒಪ್ಪಿಿಗೆ ನೀಡಲಾಗಿದೆ ಎಂದು ಹೇಳಿದರು.
ಚಂದ್ರಗುತ್ತಿಿ ರೇಣುಕಾಂಬ ಅಭಿವೃದ್ಧಿಿ ಪ್ರಾಾಧಿಕಾರ ವಿಧೇಯಕಕ್ಕೆೆ ಅನುಮೋದನೆ ನೀಡಲಾಗಿದೆ. ಗಂಗಾವತಿಯಲ್ಲಿ ಸ್ಯಾಾಟಲೈಟ್ ಬಸ್ ನಿಲ್ದಾಾಣಕ್ಕಾಾಗಿ 17.50 ಕೋಟಿ ಮೊತ್ತದಲ್ಲಿ ನಿರ್ಮಾಣ ಮಾಡಲಾಗುತ್ತಿಿದೆ. ಕೆಕೆಆರ್ಟಿಸಿಯಿಂದ ನಿರ್ಮಿಸಲು ಅನುಮತಿ ನೀಡಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆಗೆ ಚಾಲಕರ ನೇಮಕಗೆ ಸಮ್ಮತಿಸಲಾಗಿದೆ. 1000 ಚಾಲಕರ ನೇಮಕಾತಿಗೆ ಒಪ್ಪಿಿಗೆ ನೀಡಲಾಗಿದೆ. ಕಬಿನಿ ವಿತರಣಾ ನಾಲೆಗಳ ಆಧುನೀಕರಣಕ್ಕಾಾಗಿ 50 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಿಗೆ ನೀಡಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದರು.
ಒಂದೇ ಬಾರಿಗೆ ಅಸಲು ಪಾವತಿ ಮಾಡಿದರೆ ಮಾತ್ರ ಸೌಲಭ್ಯ ನೀರಿನ ಬಿಲ್ನ ಅಸಲು ಪಾವತಿಸಿದರೆ ಬಡ್ಡಿಿ ಮನ್ನಾಾ: ಸಂಪುಟ ಸಭೆ ನಿರ್ಧಾರ

