ಸುದ್ದಿಮೂಲ ವಾರ್ತೆ ರಾಯಚೂರು, ನ.27:
ನಗರದ ರೇಸ್ ಚಾಣಕ್ಯ ಶಾಲೆಯಲ್ಲಿ ಇಂಗ್ಲೀಷ್, ವಿಜ್ಞಾನ ಮತ್ತು ಗಣಿತ ಅಭಿವ್ಯಕ್ತ 2025- 26 ನೇ ಸಾಲಿನ ಅಂತರ್ ಶಾಲಾ ಸ್ಪರ್ಧಾ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊೊಂಡ ಜಿಲ್ಲಾಾ ಪಂಚಾಯತ್ ಯೋಜನಾಧಿಕಾರಿ ಡಾ.ಟಿ.ರೋಣಿ ಮಾತನಾಡಿ, ಮಕ್ಕಳಲ್ಲಿ ಪ್ರಶ್ನಿಿಸುವ ಗುಣ ಬೆಳೆಸಿಕೊಂಡರೆ ಗುರಿ ಸಾಧನೆಗೆ ಕನಸುಗಳು ದಾರಿ ದೀಪವಾಗುತ್ತವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಈರಣ್ಣ ಕೋಸಗಿ ಮಾತನಾಡಿ, ಅಭಿವ್ಯಕ್ತಿಿ ಎಂಬುದರ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ರೇಸ್ ಚಾಣಕ್ಯ ಶಾಲೆ ವೇದಿಕೆ ಕಲ್ಪಿಿಸಿರುವುದಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ವಿದ್ಯಾಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಂದ ಭಾಷಣ ಹಾಗೂ ಅಣಕು ಸಂಸತ್ತು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆೆಗಳ ಅಧ್ಯಕ್ಷ ರಾಜಾ ಶ್ರೀನಿವಾಸ ನಾಯಕ, ರುಪ್ಸಾಾದ ಅಧ್ಯಕ್ಷ ಸಂಗಮೇಶ ಮಂಗಾನವರ, ಹೆಚ್ ವೆಂಕಟೇಶ್ ರೇಸ್ ಚಾಣಕ್ಯ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ವಿ. ಶ್ರೀಧರ್ ರೆಡ್ಡಿಿ, ಖಜಾಂಚಿ ಕೆ ಭೀಮಶಂಕರ್, ಸಿಬ್ಬಂದಿ ಕಲ್ಯಾಾಣ ಅಧ್ಯಕ್ಷೆೆ ಜಿ ಆರ್ ಲಕ್ಷ್ಮಿಿ , ಶಾಲೆಯ ಮುಖ್ಯೋೋಪಾಧ್ಯಾಾಯರಾದ ವಿ. ಪರಿಮಳ ರೆಡ್ಡಿಿ, ತರಬೇತುದಾರರಾದ ಗಾಯತ್ರಿಿ ಆನಂದ್, ಸಹ ಸಂಯೋಜಕರಾದ ಶಿ ಅನಿತಾ ಕುಲಕರ್ಣಿ ಸೇರಿ ಸುಮಾರು 70 ಶಾಲೆ ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ರೇಸ್ ಚಾಣಕ್ಯ ಅಭಿವ್ಯಕ್ತ ಸ್ಪರ್ಧೆ ಪ್ರಶ್ನಿಿಸುವ ಗುಣ ಬೆಳೆಸಿಕೊಳ್ಳಿಿ:ಡಾ.ಟಿ.ರೋಣಿ

