ಸುದ್ದಿಮೂಲ ವಾರ್ತೆ ಕಲಬುರಗಿ, ನ.27:
ರಾಜ್ಯದಾದ್ಯಂತ ಕಳೆದ ಜೂನ್ರಿಂದ ಸೆಪ್ಟೆೆಂಬರ್ ಮಾಹೆಯಲ್ಲಿ ಅತಿವೃಷ್ಠಿಿ ಮತ್ತು ವ್ಯಾಾಪಕ ಮಳೆಯಿಂದ 12.11 ಲಕ್ಷಕ್ಕೂ ಹೆಚ್ಚಿಿನ ಹೆಕ್ಟೇರ್ಪ್ರಮಾಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಎಸ್.ಡಿ.ಆರ್.ಎ್./ ಎನ್.ಡಿ.ಆರ್.ಎ್. ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್ಗೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಿ ವಿಶೇಷ ಪ್ಯಾಾಕೇಜ್ ಯೋಜನೆಯಡಿ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್ಗೆ 8,500 ರೂ. ಇನ್ಪುಟ್ ಸಬ್ಸಿಿಡಿಯ ಒಟ್ಟು 1,033 ಕೋಟಿ ರೂ. ಬೆಳೆ ಪರಿಹಾರ ವಿತರಣೆಗೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಬೆಂಗಳೂರಿನಿಂದ ವಿಡಿಯೋ ಕಾನ್ಫೆೆರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದ ಅವರು, ಎರಡು ದಿನದಲ್ಲಿ ರೈತರ ಬ್ಯಾಾಂಕ್ ಹಣ ಜಮೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕಲಬುರಗಿ ರೈತರೊಂದಿಗೆ ಸಿಎಂ ಮಾತು:
ವಿಡಿಯೋ ಕಾನ್ಫೆೆರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಎನ್.ಡಿ.ಆರ್.ಎ್./ ಎಸ್.ಡಿ.ಆರ್.ಎ್. ಈಗಾಗಲೇ ನಡಿ ಬೆಳೆ ಪರಿಹಾರ ಹಣ ಪಡೆದಿರುವ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ನಾವದಗಿ ಗ್ರಾಾಮದ ಚಂದ್ರಶೇಖರ ಹರಸೂರ, ಟೆಂಗಳಿ ಗ್ರಾಾಮದ ಓಂಪ್ರಕಾಶ ಹೆಬ್ಬಾಾಳ ಹಾಗೂ ಕೋಡ್ಲಿಿ ಗ್ರಾಾಮದ ಸಿದ್ದಪ್ಪ ಕೋಡ್ಲಿಿ ಅವರೊಂದಿಗೆ ಚರ್ಚಿಸಿ ಬೆಳೆ ಪರಿಹಾರ ಹಣ ಜಮೆಯಾಗಿರುವ ಬಗ್ಗೆೆ ವಿಚಾರಿಸಿದರು. ಈಗಾಗಲೇ ತಮ್ಮ ಖಾತೆಗೆ ಹಣ ಜಮೆಯಾಗಿದೆ, ಸಕಾಲದಲ್ಲಿ ಪರಿಹಾರ ಹಣ ಬಿಡುಗಡೆ ಮಾಡಿ ರೈತರ ಹಿತ ಕಾಯ್ದಿಿರುವ ಸರ್ಕಾರಕ್ಕೆೆ ಮತ್ತು ಜಿಲ್ಲಾಡಳಿತಕ್ಕೆೆ ಧನ್ಯವಾದ ಅರ್ಪಿಸುವುದಾಗಿ ರೈತರು ತಿಳಿಸಿದರು.
ಜಿಲ್ಲೆಗೆ 498.73 ಕೋಟಿ ರೂ. ಅತಿವೃಷ್ಠಿಿ ಪರಿಹಾರ:
ಅತಿವೃಷ್ಠಿಿ ಮತ್ತು ನೆರೆ ಹಾನಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಒಟ್ಟಾಾರೆ 2,91,381.52 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದು, ಈಗಾಗಲೆ 3,23,318 ರೈತರಿಗೆ 250.97 ಕೋಟಿ ರೂ. ಎನ್.ಡಿ.ಆರ್.ಎ್./ ಎಸ್.ಡಿ.ಆರ್.ಎ್. ಮಾರ್ಗಸೂಸಿಯಂತೆ ಪರಿಹಾರ ಹಣ ಬಿಡುಗಡೆ ಮಾಡಿದ್ದು, ಪಾವತಿ ಪ್ರಕ್ರಿಿಯೆಯಲ್ಲಿದೆ. ಇದರ ಜೊತೆಗೆ ಇಂದಿಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 247.75 ಕೋಟಿ ರೂ. ಬಿಡುಗಡೆ ಮಾಡಿದ್ದು, ಒಟ್ಟಾಾರೆಯಾಗಿ ಜಿಲ್ಲೆಗೆ 498.73 ಕೋಟಿ ರೂ. ಪರಿಹಾರ ಬಿಡುಗಡೆಯಾದಂತಾಗಿದೆ.
ವರ್ಚುವಲ್ ಸಭೆಯಲ್ಲಿ ಬೆಂಗಳೂರಿನಿಂದ ಮುಖ್ಯಮಂತ್ರಿಿಗಳ ಜೊತೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಿಯಾಂಕ್ ಖರ್ಗೆ, ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು, ಅರಣ್ಯ ಸಚಿವ ಈಶ್ವರ ಖಂಡ್ರೆೆ ಸೇರಿದಂತೆ ಅನೇಕ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಭಾಗಿಯಾಗಿದ್ದರು. ಇತ್ತ ಕಲಬುರಗಿಯಿಂದ ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ಭಾಗವಹಿಸಿದ್ದರು.
ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಠಿಿಯಿಂದ ಬೆಳೆ ಹಾನಿ: 498.73 ಕೋಟಿ ರೂ. ಅತಿವೃಷ್ಠಿಿ ಪರಿಹಾರ

