ಸುದ್ದಿಮೂಲ ವಾರ್ತೆ ಬಳ್ಳಾರಿ, ನ.26:
ದೇಶದಲ್ಲಿ ವ್ಯಾಪಕವಾಗಿ ಬೇರುಬಿಟ್ಟಿರುವ ಭ್ರಷ್ಟ ಆಡಳಿತ ವ್ಯವಸ್ಥೆೆ ವಿರುದ್ಧ ಆಮ್ ಆದ್ಮಿ ಪಕ್ಷವು 13 ವರ್ಷಗಳಿಂದ ದೇಶಾದ್ಯಂತ ನಿರಂತರ ಹೋರಾಟ ನಡೆಸುತ್ತಿಿದೆ ಎಂದು ಎಎಪಿಯ ಜಿಲ್ಲಾಾ ಅಧ್ಯಕ್ಷ ಜೆ.ವಿ. ಮಂಜುನಾಥ್ ಅವರು ತಿಳಿಸಿದ್ದಾಾರೆ.
ಆಮ್ ಆದ್ಮಿ ಪಕ್ಷದ 14ನೇ ಸಂಸ್ಥಾಾಪನಾ ಹಾಗೂ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಕಚೇರಿಯಲ್ಲಿ ಬುಧವಾರ ಉದ್ಘಾಾಟಿಸಿದ ಅವರು, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಮೂಲಭೂತ ಹಕ್ಕುಗಳ ನಿರಾಕರಣೆ ವಿರುದ್ಧ ನಮ್ಮ ಹೋರಾಟ ನಿರಂತರವಾಗಿದೆ. ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಅಮೂಲಾಗ್ರ ಬದಲಾವಣೆಯನ್ನು ದೆಹಲಿ, ಪಂಜಾಬ್ ಇನ್ನಿತರೆ ರಾಜ್ಯಗಳಲ್ಲಿ ತರಲಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿಯಾದ ನಾಗರಾಜಗೌಡ ಅವರು, ಬಳ್ಳಾರಿ ಮಹಾನಗರ ಘಟಕದ ಅಧ್ಯಕ್ಷ ಡಿ. ಚಕ್ರವರ್ತಿ, ಆಟೋ ಚಾಲಕರ ಘಟಕದ ಅಧ್ಯಕ್ಷ ವಿ. ರಾಜೇಶ್ (ಜೋಗಿ), ಇನ್ನಿಿತರರು ಈ ಸಂದರ್ಭದಲ್ಲಿದ್ದರು.
ಬಳ್ಳಾರಿ : ಎಎಪಿ ದಿನಾಚರಣೆ

