ಸುದ್ದಿಮೂಲ ವಾರ್ತೆ ಹರಪನಹಳ್ಳಿ, ನ.27:
ಅಭಿವೃದ್ಧಿಿ ವಿಚಾರಕ್ಕೆೆ ಸಂಬಂಧಿಸಿದಂತೆ ರಾಜಕಾರಣಿಗಳು ಸ್ವಜಾತಿ ಮತ್ತು ಪಕ್ಷ ಭೇದ ಮರೆತು ಅಭಿವೃದ್ಧಿಿಗೆ ಮುಂದಾಗಬೇಕು ಎಂದು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು
ತಾಲೂಕಿನ ಅರಸೀಕೆರೆ ಹೋಬಳಿಯ ತೌಡೂರು ಗ್ರಾಾಮದ ವಿವಿದೋದ್ದೇಶ ಪ್ರಾಾಥಮಿಕ ಗ್ರಾಾಮೀಣ ಕೃಷಿ ಸಹಕಾರ ಸಂಘದ ಗೋದಾಮು ಮತ್ತು ವಾಣಿಜ್ಯ ಮಳಿಗೆಗಳ ಉದ್ಘಾಾಟನಾ ಸಮಾರಂಭಲ್ಲಿ ಭಾಗಿಯಾಗಿ ರೈತರ ಅನುಕೂಲಕ್ಕಾಾಗಿ ಸಹಕಾರ ಸಂಘಗಳಿವೆ, ಸಹಕಾರ ಸಂಘದಲ್ಲಿ ಪ್ರತಿಯೊಬ್ಬ ರೈತರಿಗೂ ಗೊಬ್ಬರ, ಬೀಜ ವಿತರಣೆ ಮಾಡಬೇಕು, ಸಹಕಾರ ಸಂಘದಲ್ಲಿ ಯಾವುದೇ ರಾಜಕೀಯ ಪಕ್ಷವಿರಲಿ ಎಲ್ಲರ ಸಹಕಾರ ಮುಖ್ಯ ಪ್ರಜಾಪ್ರಭುತ್ವದ ಆಸೆಯಂತೆ ರಾಜಕಾರಣ ಮಾಡಬೇಕು ನಾವು ನಿಮ್ಮ ಸೇವೆಗೆ ನಾವು ಯಾವಾಗಲೂ ಸಿದ್ದನಿರುತ್ತೇನೆ, ಜನ ಸೇವೆಯೇ ಜನಾರ್ಧನ ಸೇವೆ ಎಂದು ಹೇಳಿದರು.
ಹರಪನಹಳ್ಳಿಿ ಬಿ.ಡಿ.ಸಿ.ಸಿ. ಬ್ಯಾಾಂಕ್ ನಿರ್ದೇಶಕ ಹಾಗೂ ಮುಖಂಡ ವೈ.ಡಿ.ಅಣ್ಣಪ್ಪ ಮಾತನಾಡಿ ತೌಡೂರು ಸಹಕಾರ ಸಂಘದಲ್ಲಿ ಕಾಮಗಾರಿಗಳು ಅರ್ಧಕ್ಕೆೆ ನೀತಿದ್ದವು, ಹಿಂದೆ ಇದ್ದ ಸಂಘದಲ್ಲಿ ಅವ್ಯವಹಾರವಾಗಿದ್ದು ಇದನ್ನು ಸೂಪರ್ ಸೀಡ್ ’ಮಾಡಲಾಗಿತ್ತು, ನಾನು ನಿರ್ದೇಶಕನಾದ ಮೇಲೆ ಸಂಘಕ್ಕೆೆ ಬರುವ ಎಲ್ಲಾ ಗ್ರಾಾಮಗಳ ಮುಖಂಡರ ಮಾಹಿತಿ ಪಡೆದು ಈ ಸಂಘದಲ್ಲಿ ನಮ್ಮ ರೈತರಿಗೆ ಅನ್ಯಾಾಯವಾಗದಂತೆ ಸಂಘದ ಏಳಿಗೆಗೆ ಸಹಕಾರ ನೀಡಿದ್ದೇನೆ. ಈಗ ಎಲ್ಲರೂ ಒಗ್ಗಟ್ಟಿಿನಿಂದ ಗೋದಾಮು ಹಾಗೂ ವ್ಯಾಾಪಾರಿ ಮಳಿಗೆಗಳನ್ನು ಉದ್ಘಾಾಟನೆ ಮಾಡಿಸಿದ್ದೇವೆ. ರೈತರು ಸಹಕಾರ ಸಂಘದ ವ್ಯವಾರಗಳನ್ನು ಗಮನಿಸಬೇಕು ಈ ಸಂಘದಲ್ಲಿ ಹಣದ ಭ್ರಷ್ಟಾಾಚಾರ ನಡೆದಿದ್ದು ರೈತರು ಜಾಗೃತರಾಗಿರಬೇಕು ಎಂದರು.
ವಿಜಯನಗರ ಜಿಲ್ಲಾ ಬಿ.ಡಿ.ಸಿ.ಸಿ. ಬ್ಯಾಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಾಮಿಯವರು ಮಾತನಾಡಿ 2014 ರಲ್ಲಿಯೇ ಇಡೀ ಕರ್ನಾಟಕದಲ್ಲಿ ಇಪ್ಪತ್ತೊೊಂದು ಡಿ. ಸಿ.ಸಿ.ಬ್ಯಾಾಂಕ್ ಗಳನ್ನು ಡಿಜಿಟಲ್ ಮಾಡಿ, 2023 ರಲ್ಲಿ ಆನ್ಲೈನ್ ಟ್ರಯಲ್ ಮಾಡಿದಾಗ ನಕಲಿ ಸಾಲಗಾರರು ಹೊರಗಡೆ ಬಂದವು, ಬಿಡಿಸಿಸಿ ಬ್ಯಾಾಂಕ್ ನಿರ್ದೇಶಕ ವೈ. ಡಿ.ಅಣ್ಣಪ್ಪನವರಿಗೆ ಇಡೀ ತಾಲೂಕಿನ ಸಹಕಾರ ಸಂಘಗಳ ಬಗ್ಗೆೆ ತುಂಬಾ ಕಾಳಜಿಯಿದೆ ರಿಸರ್ವ್ ಬ್ಯಾಾಂಕ್ ನಿಂದ ಚಿಗಟೇರಿ ಹಾಗೂ ತೆಲಗಿಗೆ ಲೈಸೆನ್ಸ್ ಬಂದಿವೆ,ಜನಗಳ ಪರವಾಗಿ,ಯಾವುದೇ ಲಾಪೇಕ್ಷೆವಿಲ್ಲದೇ ಜನರಿಗೆ ನೇರವಾಗಿ ಕೆಲಸ ಮಾಡುವದೆ ಸಹಕಾರ ಸಂಸ್ಥೆೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಕೆ.ಜಿ.ಶಿವಯೋಗಿ ಪಿ.ಸಿ.ಎಸ್ ಉಪಾಧ್ಯಕ್ಷ ಡಿ. ಕೆ.ಪರುಸಪ್ಪ, ನಿರ್ದೇಶಕರಾದ ಕೆ.ಮಂಜುನಾಥಯ್ಯ,ಎಂ.ವಿಜಯ್ ಕುರ್ಮಾ, ಕೆ.ಪಿ.ಕೊಟ್ರುಗೌಡ, ಕೆ.ಭರಮಪ್ಪ, ಪುಟ್ಟಣ್ಣ, ಎಸ್. ಕಾಮಪ್ಪ, ಪುತ್ರಮ್ಮ, ಗ್ರಾಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ಪರುಸಪ್ಪ, ಮುಖಂಡರಾದ ಕಾವಲಹಳ್ಳಿಿ ಶೇಖರಪ್ಪ,ಸಿದ್ದಪ್ಪ, ರಾಜಾನಾಯ್ಕ್, ತೌಡೂರು ಕೆಂಚಪ್ಪ, ಚನ್ನಬಸವನಗೌಡ, ಷಣ್ಮುಖಪ್ಪ, ಮನೋಹರ್, ಕ್ಯಾಾರಕಟ್ಟೆೆ ನಂದ್ಯಪ್ಪ, ಹಾಲಪ್ಪ, ಪೂಜಾರ್ ಮರಿಯಪ್ಪ, ಬಾಲೇನಹಳ್ಳಿಿ ರಾಮನಗೌಡ, ಶೆಟ್ಟಿಿನಾಯ್ಕ್, ಪಿ.ಎಸ್.ಐ.ವಿಜಯ ಕೃಷ್ಣ,ಸುತ್ತಮುತ್ತಲಿನ ಹಳ್ಳಿಿಯ ಮುಖಂಡರು ಹಾಗೂ ಗ್ರಾಾಮಸ್ಥರು ಹಾಜರಿದ್ದರು
ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮಾಡಬಾರದು: ಜಗಳೂರು – ಶಾಸಕ ಬಿ. ದೇವೇಂದ್ರಪ್ಪ

