ಸುದ್ದಿಮೂಲ ವಾರ್ತೆ ಕವಿತಾಳ, ನ.27:
ಸಮೀಪದ ಪಾಮನಕಲ್ಲೂರು ಗ್ರಾಾಮ ಪಂಚಾಯತಿ ವತಿಯಿಂದ ಗ್ರಾಾಮದ ಪ್ರೌೌಢ ಶಾಲೆಯಲ್ಲಿ ಬುಧವಾರ ವಿಶೇಷ ಮಕ್ಕಳ ಗ್ರಾಾಮ ಸಭೆ ನಡೆಯಿತು.
ಸಭೆ ಉದ್ಘಾಾಟಿಸಿ ಗ್ರಾಾಮ ಪಂಚಾಯತಿ ಅಭಿವೃದ್ಧಿಿ ಅಧಿಕಾರಿ ಮಲ್ಲಯ್ಯ ಅವರು ಮಾತನಾಡಿ ಶಾಲಾ ಕಾಂಪೌಂಡ್, ಗೇಟ್, ಶೌಚಾಲಯ, ಕೊಠಡಿಗಳು, ಶಾಲೆಗೆ ಸಂಪರ್ಕಿಸುವ ರಸ್ತೆೆ, ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಮೌಲ ಸೌಕರ್ಯ ಒದಗಿಸಲಾಗುವುದು ಎಂದರು.
ಸ್ವಂತ ಕಟ್ಟಡ ಇಲ್ಲದ ಕಾರಣ ಅಂಗನವಾಡಿ ಕೇಂದ್ರಗಳನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿಿದೆ, ಕೆಲ ಗ್ರಾಾಮಗಳಲ್ಲಿ ಬಾಡಿಗೆಗೂ ಸೂಕ್ತ ಕಟ್ಟಡ ಸಿಗುತ್ತಿಿಲ್ಲ ತಾತ್ಕಾಾಲಿಕ ಶೆಡ್ ನಲ್ಲಿ ನಡೆಸಲಾಗುತ್ತಿಿದೆ. ಕಟ್ಟಡ ಇದ್ದಲ್ಲಿ ವಿದ್ಯುತ್, ್ಯಾನ್, ಲೈಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಂಡು ಬರುತ್ತಿಿಲ್ಲ. ಅಂಗನವಾಡಿಗಳಿಗೆ ತೆರಳಲು ರಸ್ತೆೆ ಇಲ್ಲ ಎಂದು ಅಂಗನವಾಡಿ ಸಹಾಯಕರು ಸಭೆಗೆ ಮಾಹಿತಿ ನೀಡಿದರು.
ಕುಂದು ಕೊರೆತೆಗಳ ಬಗ್ಗೆೆ ಪರಿಶೀಲಿಸಿ ಕ್ರಿಿಯಾಯೋಜನೆ ತಯಾರಿಸಿ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾಾವನೆ ಸಲ್ಲಿಸಲಾಗುವು ಎಂದರು.
ಈ ಸಂದರ್ಭದಲ್ಲಿ ಗ್ರಾಾಮ ಪಂಚಾಯತಿ ಸದಸ್ಯರಾದ ದುರುಗಪ್ಪ, ಶ್ರೀನಿವಾಸ, ಮುಖಂಡ ಹುಲುಗಪ್ಪ ಗುಡಿಹಾಳ, ಪ್ರೌೌಢ ಶಾಲೆ ಶಿಕ್ಷಕ ಬಸವರಾಜ ಇನ್ನಿಿತರ ಶಿಕ್ಷಕರು ಮತ್ತು ಮಕ್ಕಳು ಹಾಗೂ ಅಂಗನವಾಡಿ ಸಹಾಯಕರು ಭಾಗವಹಿಸಿದ್ದರು.
ವಿಶೇಷ ಮಕ್ಕಳ ಗ್ರಾಮ ಸಭೆ ಮೂಲ ಸೌಕರ್ಯಕ್ಕೆೆ ಒತ್ತಾಯ

