ಸುದ್ದಿಮೂಲ ವಾರ್ತೆ ರಾಯಚೂರು , ನ.27:
ಕಾರ್ಮಿಕ ಸಂಹಿತೆಗಳ ಅಧಿಸೂಚನೆ ವಾಪಸ್ ಪಡೆಯಲು ಒತ್ತಾಾಯಿಸಿ ಸಿಐಟಿಯು ಜಿಲ್ಲಾಾ ಸಮಿತಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.
ಕಾರ್ಮಿಕ ಸಂಹಿತೆಗಳ ಅಧಿಸೂಚನೆಯ ಪ್ರತಿಗಳನ್ನು ಸುಡುವ ಮೂಲಕ ಪ್ರತಿಭಟನೆ ಮಾಡಿದ ಸಮಿತಿ ಪದಾಧಿಕಾರಿಗಳು, ಕಾರ್ಮಿಕರು ಕೇಂದ್ರ ಸರ್ಕಾರ ನಾಲ್ಕು ಕರಾಳ ಕಾರ್ಮಿಕ ಸಂಹಿತೆ ನವಂಬರ್ 21 ರಿಂದ ಜಾರಿ ಮಾಡಿದ್ದು ಖಂಡಿಸಿದರು.
ಕರ್ನಾಟಕ ಸರ್ಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದೆಂದು ಆಗ್ರಹಿಸಿದ ಅವರು, ಉದ್ಯೋೋಗದಾತರ ಪರವಾದ ಕಾರ್ಮಿಕ ಸಂಹಿತೆ ಇಂದಿನಿಂದ ಏಕಪಕ್ಷೀಯವಾಗಿ ಜಾರಿಗೊಳಿಸಿರುವುದನ್ನು ಖಂಡಿಸಿ ರಾಷ್ಟ್ರದ ದುಡಿಯುವ ಜನರ ವಿರುದ್ಧ ಕೇಂದ್ರ ಸರ್ಕಾರ ಎಸಗಿದ ಮೋಸದ ವಂಚನೆ ಎಂದು ಆಪಾದಿಸಲಾಯಿತು.
ಹೆಚ್ಚುತ್ತಿಿರುವ ನಿರುದ್ಯೋೋಗ ಬಿಕ್ಕಟ್ಟು ಮತ್ತು ಏರುತ್ತಿಿರುವ ಹಣದುಬ್ಬರದ ಮಧ್ಯೆೆ ಈ ಸಂಹಿತೆಗಳ ಅಧಿಸೂಚನೆಯು ದುಡಿಯುವ ಜನತೆಯ ಮೇಲಿನ ಯುದ್ಧ ಘೋಷಣೆಯಲ್ಲದೆ ಬೇರೇನಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಎಚ್.ಪದ್ಮಾಾ, ಡಿ.ಎಸ್.ಶರಣಬಸವ, ಶಬ್ಬೀರ್ ಜಾಲಹಳ್ಳಿಿ, ಶರ್ುದ್ದೀನ್ ಪೋತ್ನಾಾಳ, ಮೊಹಮ್ಮದ್ ಹನ್ೀ, ಅನ್ವರ್ ಪಾಶಾ ಸೇರಿದಂತೆ ಇತರರಿದ್ದರು.

