ಸುದ್ದಿಮೂಲ ವಾರ್ತೆ ರಾಯಚೂರು , ನ.27:
ತಾಲೂಕಿನ ಉಡಮಗಲ್ ಖಾನಾಪೂರ ಗ್ರಾಾಮದಲ್ಲಿ ನ.30ರಂದು ಸಂಜೆ 5.55ಕ್ಕೆೆ ಭೀಮೇಶ್ವರ ದೇವರ ರಥೋತ್ಸವ ಜರುಗಲಿದೆ.
ಜಾತ್ರೋೋತ್ಸವದ ಹಿನ್ನೆೆಲೆಯಲ್ಲಿ ನ.29ರಂದು ಶನಿವಾರ ಶ್ರೀ ಭೀಮೇಶ್ವರ ದೇವರಿಗೆ ಬೆಳಿಗ್ಗೆೆ ವಿಶೇಷ ಪೂಜೆ, ಸಂಜೆ ಕಳಸಾರೋಹಣ, ರಾತ್ರಿಿ ಉಚ್ಛಾಾಯ ಮಹೋತ್ಸವ ನಂತರ ಪಲ್ಲಕ್ಕಿಿ ಸೇವೆ ಜರುಗಲಿದೆ.
ನ.30ರಂದು ಸಂಜೆ ಅದ್ಧೂರಿ ರಥೋತ್ಸವ ನೆರವೇರಿಸಲಾಗುವುದು. ರಾತ್ರಿಿ ಮಾಲಪಲ್ಲಿ ಆಂಜನೇಯ್ಯ ಅವರಿಂದ ಅಖಂಢ ಭಜನೆ ಜರುಗಲಿದೆ. ಡಿ.1ರಂದು ಸಂಜೆ ಉಚ್ಛಾಾರ ಮಹೋತ್ಸವ, ಸಹಸ್ರ ದೀಪೋತ್ಸವ ನೆರವೇರಲಿದ್ದು, ನಂದಿಕೋಲು ಸೇವೆಯೊಂದಿಗೆ ಮಹಾಮಂಗಳಗೊಳ್ಳಲಿದೆ ಎಂದು ದೇವಸ್ಥಾಾನ ಸಮಿತಿ ಅಧ್ಯಕ್ಷ ಪಿ.ವೆಂಕಟೇಶ ನಾಯಕ ತಿಳಿಸಿದ್ದಾಾರೆ.ಹೇಳಿದರು
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸದಸ್ಯರು ಪ್ರತಿ ತಾಲೂಕಿಗೆ ಭೇಟಿ ನೀಡಿ ಅನಿರೀಕ್ಷಿತವಾಗಿ ವಸತಿ ನಿಲಯ, ನ್ಯಾಾಯ ಬೆಲೆ ಅಂಗಡಿ, ಮಧ್ಯಾಾಹ್ನ ಬಿಸಿಯೂಟ, ಪ್ರಾಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದರು.
ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಿ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮತ್ತು ಸಾಗಾಟದ ಬಗ್ಗೆೆ ವ್ಯಾಾಪಕ ದೂರು ಬಂದಿವೆ. ಹೀಗಾಗಿ ಆಯೋಗ ಇದೆಲ್ಲದರ ಬಗ್ಗೆೆ ಪರಿಶೀಲನೆ ಮಾಡಲಿದೆ. ಗೋದಾಮ್ಗಳಿಗೆ ಹಠಾತ್ ಭೇಟಿ ನೀಡಲಿದೆ. ಅನ್ನ ಭಾಗ್ಯ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಏನೇ ಅಕ್ರಮ, ಲೋಪದೋಷಗಳಿದಲ್ಲಿ ಸಂಘ-ಸಂಸ್ಥೆೆಗಳ ಪದಾಧಿಕಾರಿಗಳು ಮತ್ತು ಇದರಿಂದ ಬಾಧಿತ ವ್ಯಕ್ತಿಿಗಳು ಆಯೋಗದ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ ಎಂದು ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ತಿಳಿಸಿದರು.
ಇನ್ನು ಆಯೋಗದ ಎಲ್ಲಾ ಸದಸ್ಯರು ತಾಲೂಕಾ ಪ್ರವಾಸ ಮುಗಿಸಿದ ನಂತರ ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಅಲ್ಲಿ ಜಿಲ್ಲೆಯಲ್ಲಿ ಆಯೋಗಕ್ಕೆೆ ಕಂಡುಬಂದ ನ್ಯೂನ್ಯತೆಗಳನ್ನು ಮತ್ತು ಸಮಸ್ಯೆೆಗಳನ್ನು ಪರಿಹರಿಸು ನಿಟ್ಟಿಿನಲ್ಲಿ ಜಿಲ್ಲಾಡಳಿತಕ್ಕೆೆ ನಿರ್ದೇಶನ ನೀಡಲಾಗುವುದು ಎಂದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ಎ.ರೋಹಿಣಿ ಪ್ರಿಿಯ, ಕೆ.ಎಸ್.ವಿಜಯಲಕ್ಷ್ಮಿಿ, ಅಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ ದೌಲಾ, ಸಮಾಜ ಕಲ್ಯಾಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀೀತಿ ದೊಡ್ಡಮನಿ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾಾತನಾಳ, ಡಿ.ಡಿ.ಪಿ.ಐ ಸುರ್ಯಕಾಂತ ಮದಾನೆ, ಕಾನೂನು ಮಾಪನಶಾಸ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.ಜಿಲ್ಲೆೆಯ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ಹಮ್ಮಿಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ, ಮಾಜಿ ಸಂಸದ ಬಿ.ವಿ.ನಾಯಕ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಎರಡು ಜಿಲ್ಲೆಯ ಜೀವನಾಡಿ ತುಂಗಭದ್ರ ಎಡದಂಡೆ ಕಾಲುವೆಯ ಅಚ್ಚು ಕಟ್ಟು ಪ್ರದೇಶಕ್ಕೆೆ ಎರಡನೆ ಬೆಳೆಗೆ ನೀರು ಕೊಡದೆ ವಂಚಿಸಿದ್ದು, ನೀರು ಹರಿಸದಿದ್ದರೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತರು ಭತ್ತ, ಹತ್ತಿಿ, ತೊಗರಿ, ಮೆಕ್ಕೆೆ ಜೋಳಗಳಿಗೆ ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ. ಬೆಂಬಲ ಬೆಲೆಯಲ್ಲಿ ನೀಡಿ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಮಾಡಬೇಕಾದ ಸರ್ಕಾರ ಅಧಿಕಾರ ಕಚ್ಚಾಾಟದಲ್ಲಿ ತೊಡಗಿದೆ. ತುಂಗಭದ್ರಾಾ ಜಲಾಶಯದ ಕ್ರಸ್ಟಗೇಟ್ ಅಳವಡಿಸಲು ದೊರೆತ ಸಮಯದಲ್ಲಿ ಗೇಟ್ ಅಳವಡಿಸದೆ ವಿಳಂಬ ಮಾಡುತ್ತಿಿದೆ. ಎರಡನೇ ಬೆಳೆಗೆ ನೀರು ಹರಿಸಲು ಅವಕಾಶವಿದ್ದರೂ ಜಲಾಶಯ ಗೇಟು ಅಳವಡಿಸುವ ವಿಚಾರದ ಹೆಸರಿನಲ್ಲಿ ರೈತರಿಗೆ ವಂಚಿಸಲಾಗುತ್ತಿಿದೆ. ಗ್ಯಾಾರೆಂಟಿ ಹೆಸರಿನಲ್ಲಿ ಸರ್ಕಾರ ರೈತ, ಕಾರ್ಮಿಕ, ಮಹಿಳಾ, ದಲಿತ ವಿರೋಧಿ ನೀತಿ ಅನುಸರಿಸುತ್ತಿಿದ್ದು ಇದನ್ನು ಖಂಡಿಸಿ ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲ ಅಧಿವೇಶನದಲ್ಲಿ ಹಾಗೂ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದರು.
ವಾಲ್ಮೀಕಿ ಅಭಿವೃದ್ದಿ ನಿಗಮದ ಭ್ರಷ್ಟಚಾರ, ಎಸ್ಇಪಿ, ಟಿಎಸ್ಪಿ ಅನುದಾನ ದುರ್ಬಳಕೆ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಾಚಾರ ತಾಂಡವವಾಡುತ್ತಿಿದ್ದು ಈ ಹಿನ್ನೆೆಲೆಯಲ್ಲಿ ಬಿಜೆಪಿಯಿಂದ ಕೈಗೊಳ್ಳುತ್ತಿಿರುವ ರೈತ ಪರ ಹೋರಾಟಕ್ಕೆೆ ಜನ ಬೆಂಬಲಿಸಿ ಭಾಗವಹಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರ ಜವಾಬ್ದಾಾರಿಯುತವಾಗಿ ನಡೆಯದೆ ರೈತರ ಸಮಸ್ಯೆೆಗಳಿಗೆ ಸ್ಪಂದಿಸುವಲ್ಲಿ ವಿಲವಾಗಿದೆ. ಎನ್ಡಿಆರ್ಎಪ್ ಮತ್ತು ಎಸ್ಡಿಆರ್ಎ್ ನಿಯಮಗಳಂತೆ ಪರಿಹಾರ ನೀಡುತ್ತಿಿಲ್ಲ. ಕೇಂದ್ರ ಸರ್ಕಾರ ರಾಜ್ಯ ಮನವಿ ಆಧಾರಿಸಿ ಪರಿಹಾರ ಒದಗಿಸಲಿದೆ ಎಂದರು. ಕೂಡಲೇ ಹತ್ತಿಿ, ಭತ್ತ, ತೊಗರಿ, ಮೆಕ್ಕಜೋಳ,ಈರುಳ್ಳಿಿ ಖರೀದಿ ಕೇಂದ್ರಗಳ ಆರಂಭಿಸಿ ನೆರವಿಗೆ ಧಾವಿಸಬೇಕು ಎಂದರು. ಸುದ್ದಿಗೋಷ್ಟಿಿಯಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಾಗವಾಟ್, ಮಾಧ್ಯಮ ವಕ್ತಾಾರ ಕೆ.ಎಂ.ಪಾಟೀಲ್, ಜೆ.ಶರಣಪ್ಪಗೌಡ ಸಿರವಾರ, ರಾಘವೇಂದ್ರ ಉಟ್ಕೂರು, ಸಿದ್ದನಗೌಡ ನೆಲಹಾಳ, ಸಂತೋಷ ರಾಜಗುರು ಇದ್ದರು.

