ಸುದ್ದಿಮೂಲ ವಾರ್ತೆ ಕಲಬುರಗಿ, ನ.27:
ಹಲವು ಜಾತಿ ಧರ್ಮಗಳಿಂದ ಕೂಡಿದ ದೇಶದಲ್ಲಿ ಸಮಾನತೆ ಮೌಲ್ಯಗಳನ್ನು ಕೊಟ್ಟಿಿರುವ ಸಂವಿಧಾನದಿಂದ ಭಾರತ ಇಂದು ಪ್ರಬುದ್ಧ ರಾಷ್ಟ್ರವಾಗಿ ಬೆಳೆಯುತ್ತಿಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟ ಸಿಂಗ್ ಹೇಳಿದರು.
ಕರ್ನಾಟಕ ರಾಜ್ಯೋೋತ್ಸವ ಹಾಗೂ ಭಾರತೀಯ ಸಂವಿಧಾನ ಸಮರ್ಪಣಾ ದಿನ ಪ್ರಯುಕ್ತ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಏರ್ಪಡಿಸಿದ ಮಕ್ಕಳ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರದ ಸ್ವಾಾತಂತ್ರ್ಯ, ಸಮಾನತೆ, ಭ್ರಾಾತೃತ್ವ , ಅಖಂಡತೆ, ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಾಯದ ತಳಹದಿಯ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ರವರು ಮಾದರಿ ಸಂವಿಧಾನ ಕೊಟ್ಟಿಿದ್ದಾರೆ. ನಮ್ಮ ಸಂವಿಧಾನ ದೂರದೃಷ್ಟಿಿ, ಸಮನ್ವಯತೆಯಿಂದ ಕೂಡಿದೆ. ಈ ನೆಲದಲ್ಲಿ ವಾಸಿಸುವವರಿಗೆ ಹಕ್ಕುಗಳನ್ನು ಕಲ್ಪಿಿಸಿದ್ದಾರೆ. ಇಂಥ ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಹಾಗೂ ಸಂವಿಧಾನದ ಆಶಯಗಳನ್ನು ಇಂದಿನ ಮಕ್ಕಳಿಗೆ ತಿಳಿಸಿ ಕೊಡುವ ನಿಟ್ಟಿಿನಲ್ಲಿ ಪರಿಷತ್ತು ಉತ್ತಮ ಕಾರ್ಯ ಮಾಡುತ್ತಿಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿಿ, ಪ್ರಾಾಚೀನ ಭಾಷೆ ಕನ್ನಡಕ್ಕೆೆ ಶಾಸೀಯ ಸ್ಥಾಾನಮಾನ ದೊರಕಿದ್ದು ಸಂವಿಧಾನದಡಿ. ನಾಡಿನ ನೆಲ-ಜಲ, ಭಾಷೆ-ಸಂಸ್ಕೃತಿಗಳ ಉನ್ನತಿ ಕಂಡಿದ್ದೇವೆ. ನಾಡಿನ ನೆಲದ ಇತಿಹಾಸ ಪರಂಪರೆ ಮತ್ತು ಸಮಗ್ರತೆ ಸಂವಿಧಾನ ಎತ್ತಿಿ ಹಿಡಿದಿದೆ ಎಂದು ಹೇಳಿದರು.
ಜಿಪಂನ ಮಾಜಿ ಸದಸ್ಯೆೆ ಸುನಂದಾ ರವಿರಾಜ ಕೊರವಿ, ಯುವ ಮುಖಂಡ ಅಶ್ವಿಿನಿ ಸಂಕಾ, ವಿಶ್ವಖ್ಯಾಾತಿಯ ಚಿತ್ರಕಲಾವಿದ ಮಹ್ಮದ್ ಅಯಾಜೋದ್ದಿನ್ ಪಟೇಲ್, ಕಲಾ ಸೌಧ ಸಂಚಾಲಕ ಡಾ. ರೆಹಮಾನ್ ಪಟೇಲ್, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪದ ಕಾರ್ಯದರ್ಶಿ ಶಿವರಾಜ ಅಂಡಗಿ, ರಾಜೇಂದ್ರ ಮಾಡಬೂಳ, ಎಂ.ಎನ್. ಸುಗಂಧಿ, ಶಕುಂತಲಾ ಪಾಟೀಲ, ಧರ್ಮರಾಜ ಜವಳಿ, ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಗೆ ಆಯ್ಕೆೆಯಾದ ರಾಜಕುಮಾರ ಉದನೂರ ಹಾಗೂ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.
ಕಸಾಪದಿಂದ ಮಕ್ಕಳ ಚಿತ್ರಕಲಾ ಸ್ಪರ್ಧೆ, ಭಾರತೀಯ ಸಂವಿಧಾನ ಸಮರ್ಪಣಾ ದಿನಾಚರಣೆ ಸಂವಿಧಾನದಿಂದ ಪ್ರಬುದ್ಧ ಭಾರತ ನಿರ್ಮಾಣ: ಬಿ.ವೆಂಕಟಸಿಂಗ್

