ಸುದ್ದಿಮೂಲ ವಾರ್ತೆ ಸಿರವಾರ, ನ.27:
ಪ್ಲಾಾಸ್ಟಿಿಕ್ ಚೀಲ ಹಾಗೂ ಪ್ಲಾಾಸ್ಟಿಿಕ್ ಉತ್ಪನ್ನ ವಸ್ತುಗಳನ್ನು ಬಳಸಬಾರದು ಪ್ಲಾಾಸ್ಟಿಿಕ್ ಆರೋಗ್ಯಕ್ಕೆೆ ಹಾನಿಕಾರಕ ಎಂದು ಪಟ್ಟಣ ಪಂಚಾಯತಿ ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ ಹೇಳಿದರು.
ಅವರು ಗುರವಾರ ಪಟ್ಟಣದ ಕಿರಾಣಿ ಅಂಗಡಿಗಳ ಹಾಗೂ ಪ್ಲಾಾಸ್ಟಿಿಕ್ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿಮಾಡಿ ಅಪಾರ ಪ್ರಮಾಣದ ಪ್ಲಾಾಸ್ಟಿಿಕ್ ವಸ್ತುಗಳನ್ನು ವಶಕ್ಕೆೆ ತೆಗೆದುಕೊಂಡರು ಪ್ಲಾಾಸ್ಟಿಿಕ್ ಬಳಕೆ ಮಾಡಿ ಎಲ್ಲೆಂದರಲ್ಲಿ ಬಿಸಾಡುವುದರಿಂದ ಪರಿಸರಕ್ಕೆೆ ಹಾನಿ ಹಾಗೂ ದನಗಳು, ಪ್ರಾಾಣಿಗಳು ಅದನ್ನು ತಿನ್ನುತ್ತವೆ ಅವುಗಳಿಗೂ ಜೀವ ಹಾನಿಯಾಗುತ್ತದೆ, ಪ್ಲಾಾಸ್ಟಿಿಕ್ ಮಾರಾಟ, ಬಳಕೆ ನಿಷೇಧ ಮಾಡಲಾಗಿದೆ, ಎಲ್ಲರೂ ಬಟ್ಟೆೆಯ ಚೀಲ ಹಾಗೂ ಮಣ್ಣಿಿನಲ್ಲಿ ಕರಗುವ ವಸ್ತುಗಳನ್ನು ಬಳಸಬೇಕು ಎಂದು ತಿಳಿಸಿದರು.
ತಂಬಾಕು ವಸ್ತುಗಳ ನಿಷೇಧ: ಪಟ್ಟಣದ ಶಾಲಾ,ಕಾಲೇಜುಗಳ ಆವರಣದ ಸುತ್ತಮುತ್ತಲಿನ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಅವುಗಳನ್ನು ವಶಕ್ಕೆೆ ಪಡೆಯಲಾಗುತ್ತದೆ ಎಂದು ತಿಳಿಸಿದರು. ಇದರಲ್ಲಿ ಪರಿಸರ ಹಾಗೂ ನೈರ್ಮಲ್ಯ ಅಧಿಕಾರಿ ಸುನೀತಾ ಸಜ್ಜನ್, ಜೆ.ಇ ಹುಸೇನ್ ಸಾಬ್, ಸಮುದಾಯ ಸಂಘಟನಾಧಿಕಾರಿ ಹಂಪಯ್ಯ ಸೇರಿದಂತೆ ಅನೇಕರು ಇದ್ದರು.
ಸಿರವಾರ: ಪಟ್ಟಣ ಪಂಚಾಯತಿ ಅಧಿಕಾರಿಗಳ ದಾಳಿ, ಪ್ಲಾಸ್ಟಿಕ್ ವಶ

