ಸುದ್ದಿಮೂಲ ವಾರ್ತೆ ರಾಯಚೂರು, ನ.28:
ಮದ್ಯ ನಿಷೇಧ ಮಾಡುವಂತೆ ಕೋರಿ ಮದ್ಯ ನಿಷೇಧ ಆಂದೋಲನ ಕರ್ನಾಟಕದಿಂದ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ನ.25ರಂದು ಸ್ವಾಾತಂತ್ರ್ಯ ಉದ್ಯಾಾನದಲ್ಲಿ ಸತ್ಯಾಾಗ್ರಹ ಹಮ್ಮಿಿಕೊಳ್ಳಲಾಗಿತ್ತು. ಸತ್ಯಾಾಗ್ರಹ ಸ್ಥಳಕ್ಕೆೆ ಸಮಾಜ ಕಲ್ಯಾಾಣ ಸಚಿವ ಎಚ್ ಸಿ ಮಹದೇವಪ್ಪ ನವರು ಆಗಮಿಸಿದ್ದರು. ಬೇಡಿಕೆಗಳನ್ನು ಆಲಿಸಿ ಸರಕಾರ ಮಾಡಬಹುದಾದ ಬೇಡಿಕೆಗಳ ಬಗ್ಗೆೆ ಮುಖ್ಯಮಂತ್ರಿಿಗಳ ಭೇಟಿಗೆ ನಿಯೋಗ ಬರಲು ತಿಳಿಸಿದ್ದರು.
ಮುಖ್ಯ ಮಂತ್ರಿಿಗಳ ಜೊತೆ ಮದ್ಯ ನಿಷೇಧ ಆಂದೋಲನದ 10 ಜನರ ತಂಡ ಭೇಟಿ ಮಾಡಿ ಮಹಿಳೆಯರಿಗೆ ಆಗುತ್ತಿಿರುವ ಸಂಕಷ್ಟ, ಹಿಂಸೆ, ಅತ್ಯಾಾಚಾರ, ಕೊಲೆ, ಅಪಘಾತ, ಅರೋಗ್ಯ ಹಾಗೂ ಸಮಾಜದ ಸ್ವಾಾಸ್ತ್ಯ ಹಾಳಾಗುತ್ತಿಿದೆ. ಕುಟುಂಬಗಳು ಬೀದಿಗೆ ಬರುತ್ತಿಿವೆ ಹೀಗಾಗಿ, ಮದ್ಯ ನಿಷೇಧ ಮಾಡಬೇಕೆಂದು ವಿವರಿಸಿದರು.
ಆಗ ಮುಖ್ಯಮತ್ರಿಿಗಳು ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳ ಸಭೆ ಕರೆದು ಚರ್ಚಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾಾ ಪಾಟೀಲ್ ಸೇರಿದಂತೆ ಇತರರಿದ್ದರು.
ಸಿಎಂ ಭೇಟಿಯಾದ ನಿಯೋಗ ಮದ್ಯ ನಿಷೇಧ ಪರಿಶೀಲಿಸುವ ಭರವಸೆ

