ಸುದ್ದಿಮೂಲ ವಾರ್ತೆ ರಾಯಚೂರು, ನ.28:
ರಾಯಚೂರು ಜಿಲ್ಲೆೆಯ ತುಂಗಭದ್ರಾಾ ನದಿಗೆ ಚೀಕಲಪರ್ವಿ ಹಾಗೂ ಚಿಕ್ಕ ಮಂಚಾಲೆ ಬಳಿ ರಾಜ್ಯ ಸರ್ಕಾರದಿಂದ ನಿರ್ಮಿಸಲು ಉದ್ದೇಶಿಸಿರುವ ಬ್ರೀಜ್ ಕಂ ಬ್ಯಾಾರೇಜ್ ಕಾಮಗಾರಿ ಕುರಿತು ಸಚಿವ ಎನ್.ಎಸ್.ಬೋಸರಾಜ್ ಅವರು ಆಂಧ್ರದ ನೀರಾವರಿ ಸಚಿವ ನಿಮ್ಮಲ ರಾಮನಾಯ್ಡು, ಕೈಗಾರಿಕೆ ಸಚಿವ ಟಿಜಿ ಭರತ್ ಜೊತೆ ನಡೆಸಿದ ಸಭೆಯಲ್ಲಿ ಪೂರಕ ಸ್ಪಂದನೆ ವ್ಯಕ್ತವಾಗಿದೆ.
ಇಂದು ಆಂಧ್ರ ಪ್ರದೇಶದ ರಾಜಧಾನಿಯಲ್ಲಿ ನೀರಾವರಿ ಇಲಾಖೆ ಸಚಿವ ನಿಮ್ಮಲರಾಮ ನಾಯ್ಡು ಹಾಗೂ ಕರ್ನೂಲು ಜಿಲ್ಲೆಯ ಹಾಗೂ ಕೈಗಾರಿಕಾ ಸಚಿವರಾದ ಟಿ.ಜಿ ಭರತ್ ಅವರೊಂದಿಗೆ ನಡೆದ ಸಭೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಪ್ರದೇಶದ ರೈತರ ಹಿತದೃಷ್ಟಿಿಯಿಂದ ತುಂಗಾಭದ್ರಾಾ ನದಿಗೆ ಅಡ್ಡಲಾಗಿ ನಿರ್ಮಿಸಲು ಯೋಜಿಸಲಾಗಿರುವ ಬ್ರಿಿಡ್ಜ್ ಕಂ ಬ್ಯಾಾರೇಜ್ ಯೋಜನೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಚೀಕಲಪರ್ವಿ ಮತ್ತು ಚಿಕ್ಕಮಂಚಾಲೆ (ಮಂತ್ರಾಾಲಯದ ಸಮೀಪ) ಹತ್ತಿಿರ ತುಂಗಾಭದ್ರಾಾ ನದಿಯ ಹರಿವಿನಲ್ಲಿ ಈ ಬ್ಯಾಾರೇಜ್ ನಿರ್ಮಿಸುವ ಪ್ರಸ್ತಾಾವನೆ ಬಗ್ಗೆೆ ಮಾಹಿತಿ ಪಡೆದ ಉಭಯ ಸಚಿವರಿಗೆ ಈ ಯೋಜನೆಗಳು ಅನುಷ್ಠಾಾನಗೊಂಡರೆ ಉಭಯ ರಾಜ್ಯಗಳ ಸಾವಿರಾರು ಜನ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ಹೆಚ್ಚುವರಿ ನೀರು ದೊರೆಯಲಿದ್ದು, ಇದರಿಂದ ರೈತರಿಗೆ ಅಪಾರ ಅನುಕೂಲವಾಗಲಿದೆ. ಯೋಜನೆಗಳ ತ್ವರಿತ ಅನುಷ್ಠಾಾನಕ್ಕೆೆ ಅಗತ್ಯ ಸಹಕಾರ ನೀಡುವಂತೆ ಕೋರಲಾಯಿತು ಎಂದು ಸಚಿವ ಎನ್.ಎಸ್.ಬೋಸರಾಜ್ ಸುದ್ದಿಮೂಲಕ್ಕೆೆ ತಿಳಿಸಿದರು.
ಈ ಮನವಿಗೆ ಆಂಧ್ರಪ್ರದೇಶದ ಸಚಿವರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಗಳ ಅನುಷ್ಠಾಾನಕ್ಕೆೆ ಸಂಬಂಧಿಸಿದ ಮುಂದಿನ ಕ್ರಮಗಳು ಮತ್ತು ಸಹಕಾರದ ಕುರಿತು ಕರ್ನಾಟಕ ಸರ್ಕಾರಕ್ಕೆೆ ಶೀಘ್ರದಲ್ಲಿಯೇ ಅಧಿಕೃತವಾಗಿ ಮಾಹಿತಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಆಂಧ್ರ ಸಚಿವರೊಂದಿಗೆ ಎನ್ ಎಸ್ ಬೋಸರಾಜು ಸಭೆ ಚಿಕಲಪರ್ವಿ ಹಾಗೂ ಚಿಕ್ಕಮಂಚಾಲೆ ಬ್ರಿಿಡ್ಜ್ ಕಂ ಬ್ಯಾಾರೇಜ್ಗೆ ಸ್ಪಂದನೆ

